ಬೆಂಗಳೂರು, ನವೆಂಬರ್ 14: ದಿವಾಳಿ ಎದ್ದಿರುವ ಬೈಜೂಸ್ ಅನ್ನು ಖರೀದಿಸುವ ಪ್ರಯತ್ನವನ್ನು ಮಣಿಪಾಲ್ ಗ್ರೂಪ್ ಮುಂದುವರಿಸಿದೆ. ಸಾಲ ತೀರುವಳಿ ನಿಯಮಗಳ (ದಿವಾಳಿತನ ಪ್ರಕ್ರಿಯೆ) ಅಡಿಯಲ್ಲಿ ಬೈಜೂಸ್ನ ಮಾತೃ ಸಂಸ್ಥೆಯಾದ ಥಿಂಕ್ ಅಂಡ್ ಲರ್ನ್ ಪ್ರೈ ಲಿ ಸಂಸ್ಥೆಯನ್ನು ಖರೀದಿಸಲು ಮಣಿಪಾಲ್ ಎಜುಕೇಶನ್ ಮತ್ತು ಮೆಡಿಕಲ್ ಗ್ರೂಪ್ ಸಂಸ್ಥೆ ಎರಡನೇ ಬಾರಿ ಬಿಡ್ ಸಲ್ಲಿಸಿದೆ. ಬೈಜೂಸ್ನ ಸಂಕಷ್ಟ ಪರಿಹಾರಕರ (RP- ರೆಸಲ್ಯೂಶನ್ ಪ್ರೊಫೆಷನಲ್) ಬಳಿ IOI (EoI- ಆಸಕ್ತಿಯ ಅಭಿವ್ಯಕ್ತಿ) ದಾಖಲೆಗಳನ್ನು ಸಲ್ಲಿಸಲಾಗಿದೆ.
ರಂಜನ್ ಪೈ ಮಾಲಕತ್ವದ ಮಣಿಪಾಲ್ ಗ್ರೂಪ್ ಬೈಜೂಸ್ ಖರೀದಿಗೆ ಬಿಡ್ ಸಲ್ಲಿಸಿದ್ದು ಇದು ಎರಡನೇ ಬಾರಿ. ಬಿಡ್ಡರ್‌ಗಳ ಕೊರತೆಯಿಂದಾಗಿ ಪಿಯವರು ಹೊಸದಾಗಿ ಬಿಡ್‌ಗಳನ್ನು ಆಹ್ವಾನಿಸಿದ್ದರು. ಇದಕ್ಕೆ ನಿನ್ನೆ (ನ. 13) ಕೊನೆಯ ದಿನವಾಗಿತ್ತು. ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ, ಬೈಜೂಸ್ ಖರೀದಿಗೆ ಬಿಡ್ ಸಲ್ಲಿರುವುದು ಮಣಿಪಾಲ್ ಗ್ರೂಪ್ ಮಾತ್ರ. ಬೇರಾವುದೇ ಬಿಡ್ ಬಂದಿರುವುದು ಗೊತ್ತಾಗಿಲ್ಲ.
ಇದನ್ನೂ ಓದಿ: ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಂ; ಕಾರಣ ಇದು
ಆಕಾಶ್ ಎಜುಕೇಶನ್ ಮೇಲೆ ಮಣಿಪಾಲ್ ಗ್ರೂಪ್ ಕಣ್ಣು
ಬೈಜೂಸ್ ಸಂಸ್ಥೆ ವಿಪರೀತ ಸಾಲ ಹೊಂದಿರುವ ಕೋರ್ಟ್ ನಿರ್ದೇಶನದ ಮಾರ್ಗೋಪಾಯ ಹುಡುಕಲಾಗಿದೆ. ಅದರಂತೆ ಬೈಜೂಸ್ನ ಆಸ್ತಿಗಳನ್ನು ಮಾರಿ ಸಾಲ ತೀರಿಸಲು ರೆಸಲ್ಯೂಶನ್ ಪ್ರೊಫೆಷನಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರೇ ಈಗ ಬಿಡ್ಗೆ ಆಹ್ವಾನಿಸಿರುವುದು.
ಮಣಿಪಾಲ್ ಗ್ರೂಪ್‌ಗೆ ಬೈಜೂಸ್‌ಗಿಂತ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯ ಮೇಲೆ ಕಣ್ಣು ನೆಟ್ಟಿದೆ. 2021ರಲ್ಲಿ ಆಕಾಶ ಸಂಸ್ಥೆಯನ್ನು ಬೈಜೂಸ್ ಖರೀದಿ ಮಾಡಿತ್ತು. ಕೋಚಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಆಕಾಶ ಸಂಸ್ಥೆಯನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಆಸಕ್ತಿ ಹೊಂದಿದೆ. ಬೈಜೂಸ್ನ ಕೆಲ ಸಾಲವನ್ನು ರಂಜನ್ ಪೈ ಅವರು ತೀರಿಸಿದ್ದರು. ಅದಕ್ಕೆ ಪ್ರತಿಯಾಗಿ ಆಕಾಶ ಸಂಸ್ಥೆಯಲ್ಲಿ ಶೇ. 40ರಷ್ಟು ಪಾಲನ್ನು ಕೊಡಲಾಗಿದೆ.
ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೇರಿಕಾದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರ ಸಖತ್ ಬೇಡಿಕೆ
ಈಗ ಬೈಜೂಸ್ ಅನ್ನು ಖರೀದಿಸುವುದರಿಂದ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯ ಪೂರ್ಣ ನಿಯಂತ್ರಣವು ಮಣಿಪಾಲ್ ಗ್ರೂಪ್‌ಗೆ ಸಿಗುತ್ತದೆ. ಸದ್ಯ ಅದರ ಖರೀದಿಗೆ ಏಕೈಕ ಬಿಡ್ಡರ್ ಕೂಡ ಆಗಿದೆ. ಆದರೆ, ಇದೊಂದೇ ಕಾರಣಕ್ಕೆ ಖರೀದಿಗೆ ಅವಕಾಶ ಸಿಗುತ್ತದೆ ಎಂದು ಖಾತ್ರಿ ಇಲ್ಲ. ಎಲ್ಲವೂ ಕೂಡ ಆರ್ಪಿ ವಿವೇಚನಾ ನಿರ್ಧಾರದ ಮೇಲೆ ನಿಲ್ಲಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ