Headlines

ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ

ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ


ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ (ದರ್ಶನ್) ಜೈಲಿನಲ್ಲಿ ಸಿಗರೇಟ್ ಹಿಡಿದು ಟೀ ಕುಡಿಯುತ್ತಾ ಕೂತಿದ್ದ ಫೋಟೋ ವೈರಲ್ ಆಗಿದೆ. ಈ ಒಂದು ಕೇಸ್ ಒಟ್ಟು ಮೂರು ಎಫ್‌ಐಆರ್ ದಾಖಲಾಗಿತ್ತು. ಆದರೆ ಆ ವಿಚಾರಗಳನ್ನು ಇದೀಗ ಮರೆತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಯಾಕಂದ್ರೆ ಕೇಸ್ ದಾಖಲಿಸಿ ವರ್ಷ ಕಳೆದರೂ ಇನ್ನು ಯಾವುದಕ್ಕೂ ಸಹ ಚಾರ್ಜ್ ಶೀಟ್ ಮಾತ್ರ ಸಲ್ಲಿಕೆಯಾಗಿಲ್ಲ.

ಹೌದು, 2024ರ ಸೆಪ್ಟೆಂಬರ್‌ನಲ್ಲಿ ಪರಪ್ಪನ ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಈ ದರ್ಶನ್‌ಗೆ ಬೇರೆ ಜೈಲಿಗೆ ಸಹ ಶಿಫ್ಟ್ ಮಾಡಲಾಗಿ ಮೂರು ಕೇಸ್ ದಾಖಲು ಮಾಡಲಾಗಿ ಒಂದೊಂದು ಪ್ರಕರಣದ ತನಿಖೆಯನ್ನು ಹೊಣೆಯನ್ನಾಗಿಸಿರುವ ಮೂವರು ಎಸ್‌ಸಿಪಿಗಳಿಗೆ ನೀಡಲಾಯಿತು. ಈ ತನಿಖೆ ಆರಂಭಿಸಿದ 6 ತಿಂಗಳ ಬಳಿಕ ಜೈಲಾಧಿಕಾರಿಗಳ ವಿಚಾರಣೆ ಕೂಡ ನಡೆಸಲಾಯ್ತು. ಆದರೆ ಯಾವುದೇ ಪ್ರಕರಣದ ಅಂತಿಮ ವರದಿ ಕೂಡ ಕೋರ್ಟ್‌ಗೆ ಸಲ್ಲಿಕೆಯಾಗದೆ ಈ ಪರಿಶೀಲನೆ ಹಂತದಲ್ಲಿದೆ.

ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲಿನಲ್ಲಿ ಎಲ್ಲವೂ ಇದೆ. ದರ್ಶನ್ ಕೇಸ್ ಆದ ನಂತರ ಜೈಲಿನಲ್ಲಿ ಮೊಬೈಲ್ ಬಳಕೆ, ಡ್ರಗ್ಸ್, ಮಾರಕಾಸ್ತ್ರ ಪತ್ತೆ ಸೇರಿದಂತೆ 30ಕ್ಕೂ ಹೆಚ್ಚು ಕೇಸ್ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದೆ. ಆದರೆ ಇನ್ನೂ 27 ಪ್ರಕರಣಗಳ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸುವುದು ಬಾಕಿ ಇದೆ. ಅಂತಿಮ ಪರಿಶೀಲನೆ, CDR ಡಿಟೇಲ್ಸ್ ಬಾಕಿ ಅಂತ ಅನೇಕ ನೆಪಗಳಿಂದ ಕೇಸ್‌ಗಳ ಸ್ಥಿತಿ ಹೀಗಾಗಿದೆ. ಇಷ್ಟರ ಮಧ್ಯೆ ಮತ್ತೆ ನಾಲ್ಕು ಪ್ರಕರಣ ದಾಖಲಾಗಿದೆ. ಆದರೆ ಹಳೇ ಕೇಸ್ ಸ್ಥಿತಿಯೇ ಹೀಗಾಗಿರುವಾಗ ಹೊಸ ಕೇಸ್ ಸ್ಥಿತಿ ಏನಾಗುತ್ತೋ ಕಾದು ನೋಡಬೇಕು.

ಇದನ್ನೂ ಓದಿ: ದರ್ಶನ್ ಆಪ್ತ ಧನ್ವೀರ್ ಮೇಲೆ ಅನುಮಾನ; ಕರೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು

ರೇಣುಕಾಸ್ವಾಮಿ ಕೇಸ್ ಅಪ್ಡೇಟ್:

ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಪ್ರಮುಖ ಘಟ್ಟಕ್ಕೆ ಬಂದಿದೆ. ದೋಷಾರೋಪಣೆ ನಿಗದಿಯಾಗಿದೆ. ಆದರೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿಲ್ಲ. ಸಾಕ್ಷಿಗಳ ವಿಚಾರಣೆ ಆರಂಭಕ್ಕೆ ದಿನಾಂಕ ನಿಗದಿಯಾಗಬೇಕಿದೆ. ಬಳಿಕ ಸಾಕ್ಷಿಗಳಿಗೆ ಸಮನ್ಸ್. ಪೂರ್ತಿ ವಿಚಾರಣೆ ಬಳಿಕ ಅಂತಿಮ ತೀರ್ಪು ಪ್ರಕಟ ಆಗಲಿದೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *