ಬಿಗ್ ಬಾಸ್ ಕನ್ನಡ ಸೀಸನ್ 12ರ ಏಳನೇ ವಾರದ ವೀಕೆಂಡ್ ಬಂದಿದೆ. ಸುದೀಪ್ ಅವರು ವೇದಿಕೆಗೆ ಆಗಮಿಸಿ ಹಲವು ಸ್ಪರ್ಧಿಗಳಿಗೆ ಪಾಠ ಹೇಳಿ ಹೋಗಲಿದ್ದಾರೆ. ಕಳೆದ ವಾರದಂತೆ ಈ ವಾರವೂ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಈ ಬಗ್ಗೆ ಸುದೀಪ್ ಅವರು ಚರ್ಚೆ ಮಾಡಲೇಬೇಕಾದ ಕೆಲವು ವಿಷಯಗಳು ಇವೆ. ಈ ವಿಷಯಗಳನ್ನು ಸುದೀಪ್ ಅವರು ಪ್ರಸ್ತಾಪಿಸುತ್ತಾರಾದರೂ ಕಾದು ನೋಡಬೇಕಾಗಿದೆ.
ಜಾನ್ವಿ ವಿಚಾರ
ಜಾನ್ವಿ ಅವರು ಈ ವಾರ ಎರಡೆರಡು ತಪ್ಪುಗಳನ್ನು ಮಾಡಿದ್ದರು. ಎಲ್ಲರಿಗೂ ಸಿಗಬೇಕಿದ್ದ ಹಾಲನ್ನು ಕದ್ದು ಇಟ್ಟಿದ್ದು ಒಂದು ಕಡೆಯಾದರೆ, ಕಲರ್ಸ್ ಅವರ ಸ್ಪರ್ಧಿಗಳನ್ನು ಉಳಿಸುತ್ತಾರೆ ಎಂದು ಹೇಳಿದ್ದು ಮತ್ತೊಂದು ಕಡೆ. ಈ ವಿಚಾರ ಪ್ರಮುಖವಾಗಿ ಚರ್ಚೆ ಆಗಲೇಬೇಕಾದ ವಿಷಯವಾಗಿದೆ. ಇದು ಗಂಭೀರವಾದ ವಿಷಯ ಆಗಿರುವುದರಿಂದ ಈ ಬಗ್ಗೆ ಹೆಚ್ಚು ಹೊತ್ತು ಚರ್ಚೆ ನಡೆಯೋ ಸಾಧ್ಯತೆ ಇದೆ.
ಜಾನ್ವಿ ಹಾಗೂ ಅಶ್ವಿನಿ ಮೈಕ್ ಇಲ್ಲದೆ ಮಾತನಾಡಿದ ವಿಷಯ
ಈ ಮೊದಲು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಕೆಲವು ವಿಷಯಗಳನ್ನು ಜಾನ್ವಿ ಬಳಿ ಮಾತನಾಡಿದ್ದಾಗಿ ಅಶ್ವಿನಿ ಹೇಳಿದ್ದರು. ಈ ವಿಷಯ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ.
ಧ್ರುವಂತ್ ವಿಷಯ
ಧ್ರುವಂತ್ ಅವರು ಈ ಬಾರಿ ರಕ್ಷಿತಾ ಅವರನ್ನು ಪದೇ ಪದೇ ಹಿಯಾಳಿಸಿ ಮಾತನಾಡುತ್ತಿದ್ದರು. ಇದಲ್ಲದೆ, ಹುಡುಗಿಯರ ಬಗ್ಗೆ ಅವರು ಮಾಡಿದ ಕಮೆಂಟ್‌ಗಳು ಸರಿ ಇಲ್ಲ ಎಂಬ ಅಭಿಪ್ರಾಯವಿದೆ. ಈ ಬಗ್ಗೆಯೂ ಚರ್ಚೆ ಆಗಬೇಕಿದೆ.
ಕಳಪೆ
ಕಳಪೆ ಹಾಗೂ ಉತ್ತಮ ಯಾರಿಗೆ ಕೊಡಬೇಕು ಎಂಬ ಬಗ್ಗೆ ಚರ್ಚೆಗಳನ್ನು ಮಾಡಲಾಗಿದೆ. ಆದರೆ, ಅಶ್ವಿನಿ ಗೌಡ, ಸುಧಿ ಮೊದಲಾದವರು ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದರು. ಅಂದುಕೊಂಡಂತೆ ಮಾಳುಗೆ ಕಳಪೆ ನೀಡಿದ್ದರು. ಈ ವಿಷಯದ ಬಗ್ಗೆಯೂ ಸುದೀಪ್ ಚರ್ಚೆ ಮಾಡುವ ಸಾಧ್ಯತೆಯಿದೆ.
ಗಿಲ್ಲಿ-ರಕ್ಷಿತಾ ಮಾಡಿದ ತಪ್ಪು
ರಕ್ಷಿತಾ ಶೆಟ್ಟಿ ಈ ವಾರ ಒಂದು ತಪ್ಪು ಮಾಡಿದ್ದರು. ಗಿಲ್ಲಿ ಅವರಿಂದ ಪ್ರಭಾವಿತಗೊಂಡು ಆಟ ಹಾಳು ಮಾಡಿದರು ಎಂಬ ಆರೋಪವಿದೆ. ಇದರ ಜೊತೆಗೆ ಪಿಸು ಧ್ವನಿಯಲ್ಲಿ ಇವರು ಮಾತನಾಡಿದ್ದರು. ಇನ್ನು, ಗಿಲ್ಲಿ ನಾನು ವಾಯ್ಸ್ ಕ್ಯಾಪ್ಟನ್ ಎಂದುಕೊಂಡು ಕ್ಯಾಪ್ಟನ್ ರೂಂ ಒಳಗೆ ಹೋಗುವ ಕೆಲಸ ಮಾಡುತ್ತಿದ್ದಾರೆ. ಕ್ಯಾಪ್ಟನ್ ಮಟ್ಯಾರೂ ಕ್ಯಾಪ್ಟನ್ ರೂಂ ಒಳಗೆ ಹೋಗಿದ್ದಾರೆ. ಆದರೂ ಪದೇ ಪದೇ ಗಿಲ್ಲಿಯಿಂದ ಈ ತಪ್ಪು ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.