Headlines

ರಕ್ಷಿತಾ ಬಗ್ಗೆ ಅಪಸ್ವರ ತೆಗೆದ ಕಾವ್ಯಾ; ಭುಗಿಲೆದ್ದ ಅಸಮಾಧಾನ

ರಕ್ಷಿತಾ ಬಗ್ಗೆ ಅಪಸ್ವರ ತೆಗೆದ ಕಾವ್ಯಾ; ಭುಗಿಲೆದ್ದ ಅಸಮಾಧಾನ


‘ಬಿಗ್ ಬಾಸ್ ಕನ್ನಡ ಸೀಸನ್ 12’ರ (ಬಿಬಿಕೆ 12) ಕಿರಿಯ ಸ್ಪರ್ಧಿ ಎಂದರೆ ಅದು ರಕ್ಷಿತಾ ಶೆಟ್ಟಿ. ಅವರಿಗೆ ಇನ್ನೂ 24 ವರ್ಷ. ದೊಡ್ಮನೆಯಲ್ಲಿ ಅಷ್ಟು ಕಿರಿಯ ಸ್ಪರ್ಧಿಗಳು ಈ ಸೀಸನ್ ನಲ್ಲಿ ಯಾರೂ ಇಲ್ಲ. ಅವರ ವಯಸ್ಸು ಇನ್ನೂ ಸಣ್ಣದು ಎಂದು ಭಾವಿಸಿದ್ದರು. ಆದರೆ, ಕಳೆದ ವಾರ ವೇದಿಕೆಯಲ್ಲಿ ಅವರು ತಮ್ಮ ವಯಸ್ಸನ್ನು ರಿವೀಲ್ ಮಾಡಿದರು. ಈಗ ಕಾವ್ಯಾ ಅವರು ರಕ್ಷಿತಾ ಶೆಟ್ಟಿ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಸ್ಪಂದನಾ ಹಾಗೂ ಕಾವ್ಯಾ ಅವರು ಎದುರುಬದುರು ಕುಳಿತು ಕೆಲವು ವಿಷಯಗಳನ್ನು ಚರ್ಚಿಸಿದರು. ಈ ವೇಳೆ ಸ್ಪಂದನಾ ಅವರು, ‘ರಕ್ಷಿತಾ ಮಾಡಿದ್ದು ಸರಿ ಎಂದು ನಿನಗೆ ಅನಿಸುತ್ತಿದೆ’ ಎಂದು ಕೇಳಿದರು. ಇದಕ್ಕೆ ಕಾವ್ಯ ಉತ್ತರಿಸಿದರು. ಅವರ ಮಾತುಗಳಲ್ಲಿ ಅಸಮಾಧಾನ ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು.

‘ತಪ್ಪು ನಿರ್ಧಾರ ತೆಗೆದುಕೊಂಡಾಗ ಪ್ರಬುದ್ಧತೆ ಇಲ್ಲ ಪಾಪ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅವಳು ಸರಿಯಾದ ನಿರ್ಧಾರ ತೆಗೆದುಕೊಂಡಾಗ ಚಿಕ್ಕವಳಾದರೂ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಆಗುತ್ತಿದೆ. ಈ ಕಾರಣಕ್ಕೆ ಅವಳು ಯಾರ ಬಳಿಯೂ ವಯಸ್ಸು ಹೇಳುತ್ತಾ ಇರಲಿಲ್ಲ. ಸುದೀಪ್ ಅವರ ಮೇಲೆ ವಯಸ್ಸು ಹೇಳಿದಳು’ ಎಂದು ಕೇಳಿ ಕಾವ್ಯಾ.

‘ಎಲ್ಲ ಪರಿಸ್ಥಿತಿಗಳು ಅವಳ ಪರವಾಗಿಯೇ ಇದೆ’ ಎಂದು ಕಾವ್ಯಾ. ‘ಅವಳು ಸ್ಟ್ರೆಟಜಿ ಮಾಡುತ್ತಿಲ್ಲ, ಹೊರಗೆ ಇರುವ ರೀತಿಯೇ ಇದ್ದಾಳೆ ಎಂದರೆ ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ’ ಎಂದು ಸ್ಪಂದನಾ ಹೇಳಿದರು. ಈ ವಿಷಯ ವೀಕೆಂಡ್‌ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ.

ಇದನ್ನೂ ಓದಿ: ವೀಕೆಂಡ್‌ನಲ್ಲಿ ಸುದೀಪ್ ಚರ್ಚೆ ಮಾಡಲೇಬೇಕಾದ ವಿಷಯಗಳು; ಪಟ್ಟಿ ದೊಡ್ಡದಿದೆ

ರಕ್ಷಿತಾ ಶೆಟ್ಟಿ ಅವರು ಈ ವಾರ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ರಘುನ ನಾಮಿನೇಟ್ ಮಾಡಬೇಕು ಎಂದು ಹಠ ಹಿಡಿದರು. ಆ ಬಳಿಕ ಇದು ತಪ್ಪು ನಿರ್ಧಾರ ಎಂಬುದು ಅವರಿಗೆ ಅರಿವಾಗಿತ್ತು. ಈ ಅರಿವು ಮಾಡಿದ್ದು ಕಾವ್ಯಾ ಅವರೇ. ಈ ವಾರ ರಕ್ಷಿತಾ ಸಾಕಷ್ಟು ಎಡವಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *