ಭಾರತದ ವಿವಿಧ ಭಾಷೆಯಲ್ಲಿ ಬಿಗ್ ಬಾಸ್ ನಡೆಯುತ್ತಿದೆ. ಮಲಯಾಳಂನಲ್ಲಿ ಬಿಗ್ ಬಾಸ್ ಇದೆ. ತೆಲುಗು ಮತ್ತು ಹಿಂದಿಯಲ್ಲಿ ಹಲವು ವಾರಗಳು ಪೂರ್ಣಗೊಳ್ಳುತ್ತವೆ. ಕನ್ನಡದಲ್ಲೂ ಬಿಗ್ ಬಾಸ್ ಮುಂದುವರೆದಿದೆ. ಈಗ ಹಿಂದಿಯಲ್ಲಿ ಈ ವಾರ ಬಿಗ್ ಆಯಂಕರ್ ಬದಲಾಗಿದ್ದಾರೆ. ಸಲ್ಮಾನ್ ಖಾನ್ ಬದಲಿಗೆ ನಿರ್ದೇಶಕ ರೋಹಿತ್ ಶೆಟ್ಟಿ ಬಿಗ್ ಬಾಸ್ ನಡೆಸಿಕೊಟ್ಟಿದ್ದಾರೆ.
‘ಬಿಗ್ ಬಾಸ್ ಹಿಂದಿ ಸೀಸನ್ 19’ರಲ್ಲಿ ಸಲ್ಮಾನ್ ಖಾನ್ ಅವರು ಆ್ಯಂಕರ್. ಹಲವು ವರ್ಷಗಳಿಂದ ಅವರು ಶೋ ನಡೆಸುತ್ತಿದ್ದಾರೆ. ಇದರ ಜೊತೆಗೆ ಹಲವು ಬಾರಿ ಅವರು ಶೋಗೆ ಗೈರಾಗಿದ್ದರು. ಈ ಬಾರಿ ಅವರು ಖತಾರ್ ನಲ್ಲಿ ಲೈವ್ ಪರ್ಮೆನ್ಸ್ ಕೊಡಲು ತೆರಳಿದ್ದಾರೆ. ಈ ಕಾರಣಕ್ಕೆ ಅವರು ಈ ವಾರ ವೀಕೆಂಡ್ ಕಾ ವಾರ್ ನಡೆಸುತ್ತಿಲ್ಲ.
ರೋಹಿತ್ ಶೆಟ್ಟಿ ಅವರು ಈ ವಾರ ಹಿಂದಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಇದರ ಪ್ರೋಮೋನ ರಿಲೀಸ್ ಮಾಡಲಾಗಿದೆ. ‘ವೀಕೆಂಡ್ ಕಾ ವಾರ್ನ ನವೆಂಬರ್ 15 ಹಾಗೂ 16ರಂದು ನಾನು ನಡೆಸಿಕೊಡ್ತೀನಿ. ಹಾಟ್‌ಸ್ಟಾರ್‌ನಲ್ಲಿ 9 ಗಂಟೆಗೆ ಹಾಗೂ ಕಲರ್ಸ್ ಟಿವಿಯಲ್ಲಿ 10.30ಕ್ಕೆ ಶೋ ನೋಡಿ’ ಎಂದು ರೋಹಿತ್ ಶೆಟ್ಟಿ ಅವರು ಕೋರಿದ್ದಾರೆ.
ಇದನ್ನೂ ಓದಿ: ‘ಅವರನ್ನು ಚಾನೆಲ್ ಅವರೇ ಉಳಿಸ್ತಾರೆ’; ಬಿಗ್ ಬಾಸ್ ನಲ್ಲಿ ವಿವಾದದ ಕಿಡಿ ಹೊತ್ತಿಸಿದ ಜಾನ್ವಿ
ಬಿಗ್ ಬಾಸ್ ನಡೆಯುವಾಗ ಸಲ್ಮಾನ್ ಖಾನ್ ಅವರು ಮಧ್ಯೆ ಬಿಡುವು ಮಾಡಿಕೊಂಡು ಮುಂಬೈ ಶೂಟಿಂಗ್ ಗೆ ಆಗಮಿಸಿ ವೀಕೆಂಡ್ ಎಪಿಸೋಡ್ ನಡೆಸಿಕೊಡುತ್ತಿದ್ದರು. ಆದರೆ, ಹಲವು ಬಾರಿ ಇದನ್ನು ಮಾಡಲು ಸಾಧ್ಯವಾಗದೇ ಇದ್ದಾಗ ರೋಹಿತ್ ಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಶೋ ನಡೆಸಿಕೊಟ್ಟ ಉದಾಹರಣೆ ಇದೆ. ಆದರೆ, ಕನ್ನಡದಲ್ಲಿ ಇಷ್ಟು ವರ್ಷಗಳಲ್ಲಿ ಸುದೀಪ್ ಅವರೇ ಶೋ ನಡೆಸಿಕೊಟ್ಟಿದ್ದಾರೆ. ಅವರು ಗೈರಾದಾಗ ಬೇರೆ ಸೆಲೆಬ್ರಿಟಿಗಳ ವೇದಿಕೆ ಏರಿಲ್ಲ. ಸುದೀಪ್ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.