ಬೆಂಗಳೂರು, ನವೆಂಬರ್ 15: ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ (ನಕಲಿ ನಂದಿನಿ ತುಪ್ಪ) ಮಾರಾಟ ಬೃಹತ್ ಜಾಲವೊಂದು ಪತ್ತೆ ಆಗಿದೆ. ಸಿಸಿಬಿ (ಸಿಸಿಬಿ ಪೊಲೀಸ್) ಮತ್ತು ಕೆಎಂಎಫ್ ಜಾಗೃತ ದಳ ಜಂಟಿ ಕಾರ್ಯಾಚರಣೆ ನಡೆಸಿ ಬೃಹತ್ ಜಾಲ ಪತ್ತೆ ಮಾಡಿದ್ದು, ಕೆಎಂಎಫ್ ವಿತರಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮಹೇಂದ್ರ, ದೀಪಕ್, ಮುನಿರಾಜು, ಅಭಿ ಅರಸು ಬಂಧಿತರು. ಒಟ್ಟು 1.26 ಕೋಟಿ ರೂ. ಮೌಲ್ಯದ ವಸ್ತುವನ್ನು ಬಂಧಿತರಿಂದ ಜಪ್ತಿ ಮಾಡಲಾಗಿದೆ.
ಬೆಂಗಳೂರಿನಿಂದ ತಮಿಳುನಾಡಿಗೆ ನಂದಿನಿ ತುಪ್ಪ ಪೂರೈಕೆ
ಬೆಂಗಳೂರಿನಿಂದ ತಮಿಳುನಾಡಿಗೆ ಶುದ್ಧ ನಂದಿನಿ ತುಪ್ಪ ಪೂರೈಕೆ ಮಾಡುವಂತೆ. ಕೆಎಂಎಫ್ ಡಿಸ್ಟ್ರಿಬ್ಯೂಟರ್ ಮಹೇಂದ್ರ ಒರಿಜಿನಲ್ ತುಪ್ಪ ಖರೀದಿಸಲು. ಇಲ್ಲಿ ಖರೀದಿಸಿದ ಒರಿಜಿನಲ್ ತುಪ್ಪ ತಮಿಳುನಾಡಿಗೆ ಕಳುಹಿಸಲು. ಅದನ್ನು ತಮಿಳುನಾಡಿನಲ್ಲಿ ಕಲಬೆರಕೆ ಮಾಡುವಂತೆ. ಒಂದು ಲೀಟರ್ ತುಪ್ಪಕ್ಕೆ 4 ಲೀಟರ್ ನಕಲಿ ತುಪ್ಪ ಮಿಶ್ರಣ. ಫಾರ್ಮ್ ಆಯಿಲ್, ತೆಂಗಿನ ಎಣ್ಣೆ ಮತ್ತು ಡಾಲ್ಡಾ ಬೆರೆಸಿದ. ಅದನ್ನೇ ಮತ್ತೆ ಕರ್ನಾಟಕಕ್ಕೆ ತಂದು ಮಾರಾಟ ಮಾಡಿದೆ.
ಇದನ್ನೂ ಓದಿ: ಭಕ್ತರೇ ಎಚ್ಚರ: ಕೊಲ್ಲೂರು ಮೂಕಾಂಬಿಕಾ ದೇಗುಲದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ವಂಚಿಸ್ತಿದ್ದಾರೆ ಸೈಬರ್ ವಂಚಕರು
ನಿನ್ನೆ ಚಾಮರಾಜಪೇಟೆಯ ನಂಜಾಂಬಹಾರದಲ್ಲಿರುವ ಕೃಷ್ಣ ಎಂಟರ್‌ಪ್ರೈಸಸ್‌ಗೆ ಸೇರಿದ ಗೋಡೌನ್ ಹಾಗೂ ಅಂಗಡಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಒಟ್ಟು 8,136 ಲೀಟರ್ ಕಲಬೆರಕೆ ತುಪ್ಪ, 4 ವಾಹನ, ತೆಂಗು ಹಾಗೂ ಫಾಮ್ ಆಯಿಲ್, ನಕಲಿ ತುಪ್ಪ ತಯಾರು ಮಾಡುವ ಯಂತ್ರಗಳು ಸೇರಿ 1 ಕೋಟಿ 26 ಲಕ್ಷದ 95 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎರೆಡು ಸಿಂಗ್ ಕೃತ್ಯ: ಸೀಮಂತ್ ಕುಮಾರ್
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದು, ಕೆಎಂಎಫ್ ಜಾಗೃತ ದಳದಿಂದ ನಮಗೆ ಮಾಹಿತಿ ಬಂದಿದೆ. ಜಂಟಿಯಾಗಿ ಈ ಪ್ರಕರಣ ಪತ್ತೆ ಮಾಡಲಾಗಿದೆ. ಮೂರು ಜನರನ್ನು ನಾವು ಅರೆಸ್ಟ್ ಮಾಡಿದ್ದೇವೆ. ಒಬ್ಬನಿಗೆ ಪ್ರಶ್ನೆ ಮಾಡಿದ್ದೇವೆ. ನಂದಿನಿ ತುಪ್ಪ, ಹಾಲಿನ ಉತ್ಪನ್ನಗಳನ್ನ ನಕಲಿ ಮಾಡುತ್ತಿರುವುದು ಗೊತ್ತಾಗಿದೆ.
ಮಶಿನ್ ಯೂನಿಟ್ ತಮಿಳುನಾಡಿನ ತಿರುಪೂರು ಜಿಲ್ಲೆಯಲ್ಲಿತ್ತು. ಅಲ್ಲಿಯೂ ರೈಡ್ ಆಗಿದೆ, ಬೆಂಗಳೂರಿನಲ್ಲಿ ಕೂಡ ರೈಡ್ ಆಗಿದೆ. ಒಂದು ಕೋಟಿಗೂ ಅಧಿಕ ಬೆಲೆಬಾಳುವ ವಸುಗಳು ಸೀಜ್ ಆಗಿದೆ. ಮುಖ್ಯ ಆರೋಪಿ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕಲು ಸಾಧ್ಯವಿಲ್ಲ. ಪ್ರಾಥಮಿಕ ತನಿಖೆಯಲ್ಲಿ 2018ರಲ್ಲೂ ಇದನ್ನು ಮಾಡಲಾಗಿದೆ. ಇಲ್ಲಿಂದ ಅಸಲಿ ತುಪ್ಪ ಖರೀದಿ ಮಾಡಿ ಅಲ್ಲಿಂದ ಕಲಬೆರಕೆ ಮಾಡಿ ಕುಳುಹಿಸುತ್ತಿದ್ದರು. ಎರೆಡು ವರ್ಷಗಳಿಂದ ಈ ಕೃತ್ಯ ಮಾಡಿರುವುದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಕೆಎಂಎಫ್ ಎಂ.ಡಿ ಶಿವಸ್ವಾಮಿ ಹೇಳಿದ್ದಾರೆ
ಇನ್ನು ಕೆಎಂಎಫ್ ಎಂ.ಡಿ ಶಿವಸ್ವಾಮಿ ಹೇಳಿಕೆ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿ ಕೆಎಂಎಫ್ ಡೀಲರ್ ಅಂತ ಗೊತ್ತಾಗಿದೆ. ಅಧಿಕೃತವಾಗಿ ಕೊಡುತ್ತಿದ್ದ ತುಪ್ಪ ತಮಿಳುನಾಡಿಗೆ ಹೋಗಿ ಫಾರ್ಮ್ ಆಯಿಲ್ ಹಾಗೂ ತೆಂಗಿನ ಎಣ್ಣೆ ಮಿಕ್ಸ್ ಮಾಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಯಚೂರಿನ ಪ್ರಸಿದ್ಧ ಮಳಿಗೆಗಳ ಮೇಲೆ ದಾಳಿ
ಅಧಿಕೃತ ಪ್ರಕಟಣೆಯಲ್ಲಿ ಮಾರಾಟದ ಬಗ್ಗೆ ತನಿಖೆ ನಡೆಯಲಿದೆ. ಇದು ಫೇಕ್ ನಂದಿನಿ ತುಪ್ಪ ಅಂತ ವಿಜಿಲೆನ್ಸ್ ತಂಡದ ಮೂಲಕ ಗೊತ್ತಾಗಿತ್ತು. ಗ್ರಾಹಕರಿಗೆ ತೊಂದರೆ ಆಗಬಾರದು ಅಂತ ಸಿಸಿಬಿ ಜೊತೆ ಸೇರಿ ದಾಳಿ ಮಾಡಿದ್ದೇವೆ. ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ನಂದಿನಿ ನಿಜವಾಗಲೂ ಶುದ್ಧವಾದ ತುಪ್ಪವನ್ನು ಸಪ್ಲೈ ಮಾಡುತ್ತೆ. ನಂದಿನ ದೇಶದಲ್ಲೇ ಎರಡನೇ ಅತಿ ದೊಡ್ಡ ಬ್ರಾಂಡ್. ಇದನ್ನ ನಕಲು ಮಾಡಿದರೆ ಲಾಭ ಮಾಡಬಹುದೆಂದು ಹೀಗೆ ಮಾಡುತ್ತಾರೆ. ಅರಿವು ಮೂಡಿಸುವ ಕೆಲಸ ಮಾಡಲು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 3:29 pm, ಶನಿ, 15 ನವೆಂಬರ್ 25