ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ರಾಧಾ ಕಲ್ಯಾಣ’ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿ ಚೈತ್ರಾ ರೈ, ಇದೀಗ ಎರಡನೇ ಬಾರಿ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದು, ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ.

ನಿಮಗೆ ನೆನಪಿದ್ಯಾ? ಹಲವು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ‘ರಾಧಾ ಕಲ್ಯಾಣ’ ಈ ಧಾರಾವಾಹಿ ಎಷ್ಟೊಂದು ಜನಪ್ರಿಯತೆ ಗಳಿಸಿತ್ತು. ಜೊತೆ ಈ ಸೀರಿಯಲ್ ಮೂಲಕ ಚಂದನ್ ಗೌಡ, ಕೃತಿಕಾ ಮತ್ತು ಚೈತ್ರಾ ರೈ ಕೂಡ ಜನಪ್ರಿಯತೆ ಪಡೆದಿದ್ದರು.

ನಟಿ ಚೈತ್ರಾ ರೈ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ವಿಶಾಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ನೆಗೆಟಿವ್ ಶೇಡ್ ಇರುವ ಪಾತ್ರವಾಗಿತ್ತು. ಚೈತ್ರಾ ರೈ ಒಂದೆರಡು ಕನ್ನಡ ಧಾರಾವಾಹಿಗಳಲ್ಲಿ ಮಾತ್ರ ನಟಿಸಿದ್ದರು. ಆದರೆ ಅವರು ಜನಪ್ರಿಯತೆ ಗಳಿಸಿದ್ದು, ತೆಲುಗು ಕಿರುತೆರೆಯಲ್ಲಿ.

ಮಂಗಳೂರು ಮೂಲದ ಬೆಡಗಿ ಚೈತ್ರಾ ರೈ, ಸೀರಿಯಲ್ ಗಳಲ್ಲಿ ಬ್ಯುಸಿಯಾಗಿರುವಾಗಲೇ ಪ್ರಸನ್ನ ಶೆಟ್ಟಿ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪ್ರಸನ್ನ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಈ ಜೋಡಿಗೆ ಈಗಾಗಲೇ ಮುದ್ದಿನ ಮಗಳು ಕೂಡ ಇದ್ದಾಳೆ.

ಇದೀಗ ನಟಿ ಚೈತ್ರಾ ರೈ ಎರಡನೇ ಬಾರಿ ತಾಯಿಯಾಗಿದ್ದು, ಈ ಮಾಹಿತಿಯನ್ನು ತಮ್ಮ ಅಭಿಮಾನಿಗಳ ಜೊತೆ ಈ ಹಿಂದೆಯೇ ಹಂಚಿಕೊಂಡಿದ್ದರು. ಇದೀಗ ಎರಡನೇ ಬಾರಿ ಅದ್ದೂರಿಯಾಗಿ ಸೀಮಂತ ಮಾಡಿಕೊಳ್ಳುವ ಮೂಲಕ ತಮ್ಮ ತಾಯ್ತನವನ್ನು ಸಂಭ್ರಮಿಸಿದ್ದಾರೆ ನಟಿ.

ಸಾಮಾನ್ಯವಾಗಿ ಸೀಮಂತ ಶಾಸ್ತ್ರವನ್ನು ಮೊದಲನೇ ಬಾರಿ ಗರ್ಭಿಣಿಯಾಗಿದ್ದಾಗ ಮಾತ್ರ ಮಾಡಲಾಗುತ್ತದೆ. ಆದರೆ ಚೈತ್ರಾ ರೈ ಎರಡನೇ ಬಾರಿ ಗರ್ಭಿಣಿಯಾಗಿದ್ದು, ಈ ಸಂದರ್ಭದಲ್ಲೂ ಸೀಮಂತವನ್ನು ಅದ್ಧೂರಿಯಾಗಿ ಮಾಡಿರುವ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

ನಟಿ ಚೈತ್ರಾ ತಮ್ಮ ಸೀಮಂತದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅದರ ಜೊತೆಗೆ ತುಂಬು ಹೃದಯದಿಂದ ಎರಡನೇ ಬಾರಿ ಸೀಮಂತ ಆಚರಿಸುತ್ತಿದ್ದೇನೆ ಎನ್ನುತ್ತಾ ಸೀಮಂತದ ಕುರಿತು ನಟಿ ಏನು ಹೇಳಿದ್ದಾರೆ ನೋಡಿ.

ಅನೇಕರು ಏಕೆ ಎರಡನೇ ಬಾರಿ ಸೀಮಂತ ಎಂದು ಮತ್ತೆ ಕೇಳುತ್ತಾರೆ ಆದರೆ ಪ್ರತಿ ಮಗುವೂ ಒಂದು ಆಶೀರ್ವಾದ, ಪ್ರತಿ ಪ್ರಯಾಣವು ವಿಶೇಷ, ಮತ್ತು ಪ್ರತಿ ಕ್ಷಣವೂ ಪ್ರೀತಿಗೆ ಅರ್ಹವಾಗಿದೆ ಎಂದಿದ್ದಾರೆ ಚೈತ್ರಾ.

ನಮ್ಮ ಮೊದಲ ಸೀಮಂತ ಕೋವಿಡ್ ಸಮಯದಲ್ಲಿ ಸಂಭವಿಸಿತು, ಹಲವು ಇತಿ ಮಿತಿಗಳೊಂದಿಗೆ ಸೀಮಂತ ನಡೆದಿತ್ತು. ಆದರೆ ಈ ಬಾರಿ, ನನ್ನ ಪತಿ ನನ್ನ ಪಕ್ಕದಲ್ಲಿದ್ದಾರೆ, ಆದರೆ ಕಳೆದ ಬಾರಿ ಜೊತೆ ಇರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಎರಡನೇ ಮಗು ‘ಕಡಿಮೆ’ ಏನಲ್ಲ,, ಪ್ರೀತಿ ಸಮಾನ, ಸಂತೋಷ ಸಮಾನ, ಆಶೀರ್ವಾದ ಸಮಾನ ಎಲ್ಲವೂ ಸಮಾನಾಗಿಯೇ ಇರಬೇಕು. ದೇವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ, ಈ ಬ್ರಹ್ಮಾಂಡಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇವೆ ಮತ್ತು ಜನರು ಏನೇ ಹೇಳಿದರೂ ಈ ಸುಂದರ ಅಧ್ಯಾಯಕ್ಕಾಗಿ ಕೃತಜ್ಞತೆ ಎಂದು ಹೇಳಿದ್ದಾರೆ ಚೈತ್ರಾ ರೈ.

Source link
ಮತ್ತೆ ತಾಯಿಯಾಗುತ್ತಿದ್ದಾರೆ ‘ರಾಧಾ ಕಲ್ಯಾಣ’ ನಟಿ : Chaithra Raiಗೆ ಎರಡನೇ ಬಾರಿ ಅದ್ದೂರಿ ಸೀಮಂತ!