Headlines

Bigg Boss: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ ಶೆಟ್ಟಿ? ಸುದೀಪ್ ಸಿಟ್ಟಿಗೆ ಪುಟ್ಟಿ ನಡುಕ!

Bigg Boss: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ ಶೆಟ್ಟಿ?  ಸುದೀಪ್ ಸಿಟ್ಟಿಗೆ ಪುಟ್ಟಿ ನಡುಕ!

Bigg Boss: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ ಶೆಟ್ಟಿ?  ಸುದೀಪ್ ಸಿಟ್ಟಿಗೆ ಪುಟ್ಟಿ ನಡುಕ!

ಬಿಗ್​ಬಾಸ್​ ಮನೆಯಲ್ಲಿ ತನ್ನದೇ ತಂಡದ ವಿರುದ್ಧ ಆಡಿದ ಆರೋಪ ರಕ್ಷಿತಾ ಶೆಟ್ಟಿ ಮೇಲಿದೆ. ಈ ವಾರದ ವೀಕೆಂಡ್​ನಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ಬಗ್ಗೆ ಪ್ರಶ್ನಿಸಿದಾಗ, ರಕ್ಷಿತಾ ಮರುಪ್ರಶ್ನೆ ಹಾಕಿ ಸುದೀಪ್​ ಅವರ ಕೋಪಕ್ಕೆ ಗುರಿಯಾಗಿದ್ದಾರೆ.

ಇದುವರೆಗೆ ರಕ್ಷಿತಾ ಶೆಟ್ಟಿ (Rakshitha Shetty) ಬಿಗ್​ಬಾಸ್​ ಮನೆಯಲ್ಲಿ ಒಳ್ಳೆಯ ಆಟ ಆಡುತ್ತಾ, ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಇವರ ವಿರುದ್ಧ ಯಾರೇ ಮಾತನಾಡಿದರೂ, ಅದನ್ನು ತಡೆದುಕೊಳ್ಳದ ದೊಡ್ಡ ವರ್ಗವೇ ಇದೆ. ಆದರೆ ಈ ವಾರ ವಾತಾವರಣ ಬದಲಾಗಿದೆ.

ರಕ್ಷಿತಾ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಇದು ಈ ವೀಕೆಂಡ್​ನಲ್ಲಿ ಸುದೀಪ್​ ಅವರನ್ನು ಕೆರಳಿಸಿದ್ದು, ರಕ್ಷಿತಾ ವಿರುದ್ಧ ಕಿಚ್ಚ ಗರಂ ಆಗಿರುವಂತೆ ಕಾಣಿಸುತ್ತಿದ್ದು ಅದರ ಪ್ರೊಮೋ ಬಿಡುಗಡೆಯಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಇದ್ದರು. ಆದರೆ ಟಾಸ್ಕ್​​ ವೇಳೆ ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಗುಟ್ಟಾಗಿ ಮಾತನಾಡಿದ್ದರು. ಇದು ಅಶ್ವಿನಿಗೆ ಸಿಟ್ಟು ತರಿಸಿತ್ತು. ರಕ್ಷಿತಾ ತಂಡದ ವಿರುದ್ಧವೇ ಗಿಲ್ಲಿ ನಟ (Gilli Nata) ಎತ್ತಿ ಕಟ್ಟಿದ್ದಾರೆ ಎನ್ನುವ ಆರೋಪವಿದೆ.

ಇದರ ಬಗ್ಗೆಯೂ ವೀಕೆಂಡ್​ನಲ್ಲಿ ಸುದೀಪ್​ ಗರಂ ಆಗಿದ್ದಾರೆ. ನೀವಿಬ್ಬರೂ ಸೇರಿ ಇರಿಟೇಟ್​ ಮಾಡಿದ್ರಾ ಎಂದು ರಕ್ಷಿತಾ ಶೆಟ್ಟಿಯನ್ನು ಸುದೀಪ್​ ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಹೌದು ಎಂದಿದ್ದಾರೆ.

ನಿಮ್ಮ ಸ್ವಂತ ಟೀಮ್​ ಅನ್ನು ನೀವ್ಯಾಕೆ ಇರಿಟೇಟ್​ ಮಾಡಿದ್ದು ಎಂದು ಸುದೀಪ್​​ ಪ್ರಶ್ನಿಸಿದಾಗ, ರಕ್ಷಿತಾ, ನಿಮಗೆ ಯಾವಾಗ ಅನ್ನಿಸ್ತು ನಾನು ಇರಿಟೇಟ್​ ಮಾಡಿದ್ದೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಅದಕ್ಕೆ ಸುದೀಪ್​ ಗರಂ ಆಗಿದ್ದಾರೆ. ಅದೇ ಈಗ ನನ್ನ ಪಿತ್ತ ನೆತ್ತಿಗೇರಿತಲ್ಲ, ಅದಕ್ಕಿಂತ ಸ್ವಲ್ಪ ಮೊದಲು ಎಂದು ಕೋಪದಿಂದ ಸುದೀಪ್ ನುಡಿದಿದ್ದಾರೆ.

ರಕ್ಷಿತಾ, ನಾನು ಎರಡು ಸಲ ನಗ್ತೀನಮ್ಮ. ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗ ಎಂದು ನಕ್ಕರು. ಅಲ್ಲಿಗೆ ರಕ್ಷಿತಾ ವಿರುದ್ಧ ಸುದೀಪ್​ ಬಹಳ ಗರಂ ಆಗಿರುವಂತೆ ಕಂಡಿದ್ದು, ಅದರ ಪ್ರೊಮೋ ರಿಲೀಸ್​ ಆಗಿದೆ. ಮುಂದೇನು ಆಗಲಿದೆ ಕುತೂಹಲವಾಗಿದೆ.

Source link

Leave a Reply

Your email address will not be published. Required fields are marked *