ಬೆಂಗಳೂರು, ನವೆಂಬರ್ 15: ಬೆಳಗಾವಿಯಲ್ಲಿ 20ಕ್ಕೂ ಹೆಚ್ಚು ಕೃಷ್ಣಮೃಗಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೇಳಿದ್ದು, ವಿಚಾರ ಕೇಳಿ ಬಹಳ ನೋವಾಯಿತು. ತಕ್ಷಣ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಏಕೆ ಹೀಗಾಯ್ತು ಎನ್ನುವುದರ ಬಗ್ಗೆ ತನಿಖೆ ಮಾಡಿ ವರದಿ ಕೊಡಲು ಸೂಚಿಸಲಾಗಿದೆ. ಬ್ಯಾಕ್ಟೀರಿಯ ಇನ್ಫೆಕ್ಷನ್ ನಿಂದ ಸಾವಾಗಿದೆ ಅಂತ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ವರದಿ ಬಂದ ಬಳಿಕ ಏನಾಯ್ತು ಗೊತ್ತಾಗುತ್ತೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಆಗುತ್ತೆ. ನಮ್ಮ ಸರ್ಕಾರ ಅರಣ್ಯ ಸಂಪತ್ತು ಉಳಿಸಿಕೊಳ್ಳಲು ಬದ್ಧವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.