ಕನ್ನಡ ಚಿತ್ರರಂಗದ ನಟಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ನಿರ್ಮಾಪಕ, ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ (ಅರವಿಂದ ವೆಂಕಟೇಶ್ ರೆಡ್ಡಿ) ಬಂಧನ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಜಾಮೀನು (ಜಾಮೀನು) ಪಡೆದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ‘ಕರೆ ಮಾಡಿ ಕಿರುಕುಳ ನೀಡಿದ್ದೇನೆ ಅಂತ ಆರೋಪಿಸಿದ್ದಾರೆ. ಅವರ ಫ್ರೆಂಡ್ ಮನೆಗೆ ಲೆಟರ್ ಮತ್ತು ಫೋಟೋಗಳನ್ನು ಕಳಿಸಿದ್ದೇನೆ ಎಂದು ಕೂಡ ಆರೋಪಿಸಿದ್ದಾರೆ. 2023ರ ಮಾರ್ಚ್ 28ಕ್ಕೆ ಇವರ ಪರಿಚಯ ಆಯಿತು. ಬಳಿಕ ನನಗೆ ಹತ್ತಿರ ಆದರು. ಬಳಿಕ ನಮ್ಮ ಲಿವ್-ಇನ್-ರಿಲೇಷನ್ ಶಿಪ್ ಶುರುವಾಯಿತು’ ಎಂದು ಅರವಿಂದ್ ರೆಡ್ಡಿ ಹೇಳಿದ್ದಾರೆ.
‘2023ರ ಅಕ್ಟೋಬರ್‌ನಲ್ಲಿ ಅವರು ಬೇರೆ ಹುಡುಗನ ಕಡೆ ಗಮನ ಹರಿಸಿದರು. ಆತ ಮನೆಗೆ ಬಂದು ಹೋಗುತ್ತಿದ್ದಾನೆ ಎಂಬುದು ತಿಳಿಯಿತು. ಅದನ್ನು ಪ್ರಶ್ನೆ ಮಾಡಿದೆ. ತಾನು ಯಾರಿಗೂ ಉತ್ತರ ಕೊಡಬೇಕಾದ ಅಗತ್ಯ ಇಲ್ಲ ಅಂತ ಹೇಳಿದರು. ನಾವಿಬ್ಬರು ದೂರ ಆದೆವು. ಆ ಬಳಿಕ 2024ರಲ್ಲಿ ನಾನು ಅವರ ಫೋಟೋಗಳನ್ನು ತಪ್ಪಾಗಿ ಬಿಂಬಿಸಿದ್ದೇನೆ ಅಂತ ಆರೋಪ ಮಾಡಿದರು’ ಎಂದು ಅರವಿಂದ್ ವೆಂಕಟೇಶ್ ರೆಡ್ಡಿ.
‘ತಪ್ಪಾಗಿ ಬಿಂಬಿಸುವಂತಹ ಯಾವುದೇ ಫೋಟೋಗಳು ಇಲ್ಲ. ನಾವು ರಿಲೇಷನ್ ಶಿಪ್ ನಲ್ಲಿ ಇದ್ದಾಗ ತೆಗೆದುಕೊಂಡ ಫೋಟೋಗಳು ಅವು. ಅವರು ಹಾಗೂ ಅವರ ಫ್ಯಾನ್ ಕ್ಲಬ್ ನವರೇ ಹಾಕಿದ್ದರು. ಇನ್ಸ್ಟಾಗ್ರಾಮ್ನಲ್ಲಿ ನಾನು ಒಂದಷ್ಟು ಫೋಟೋಗಳನ್ನು ಹಾಕಿದ್ದೆ. ಅದರಲ್ಲಿ ಅಶ್ಲೀಲ ಎಂಬಂತಹ ಫೋಟೋ ಯಾವುದೂ ಇಲ್ಲ. ಇತ್ತೀಚೆಗೆ ಅವರ ಮನೆಗೆ, ಅವರ ಫ್ರೆಂಡ್ ಹೆಂಡತಿಗೆ, ಓನರ್‌ಗೆ ನಾನು ಫೋಟೋ ಕಳಿಸಿರಬಹುದು ಅಂತ ಆರೋಪ ಮಾಡಿದ್ದಾರೆ. ನನಗೆ ವೈದ್ಯರು ನೋಟಿಸ್ ನೀಡಿದಾಗ ನಾನು ಶ್ರೀಲಂಕಾದಲ್ಲಿ ಇದ್ದೆ. ವಾಪಸ್ ಬರುವಾಗ ನನ್ನನ್ನು ಬಂಧಿಸಲಾಯಿತು’ ಎಂದು ಅರವಿಂದ ವೆಂಕಟೇಶ್ ರೆಡ್ಡಿ ಹೇಳಿದ್ದಾರೆ.
‘ಇದೆಲ್ಲವೂ ಸ್ಟೇಷನ್ ಬೇಲೆಬಲ್ ಅಫೆನ್ಸ್ ಆದರೂ ಕೂಡ ನನ್ನನ್ನು ಕೋರ್ಟ್ ಗೆ ಕರೆದುಕೊಂಡು ಹೋದರು. ಯಾವುದೇ ಕೋರ್ಟ್ ಜಾಮೀನು ನೀಡಿದೆ. ಒದಗಿಸಿದ್ದಾರೆ. ನನ್ನ ವಾದವನ್ನು ಕೂಡ ಕೇಳಿದ್ದಾರೆ. ತನಿಖೆ ಮಾಡಿ, ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ. ನಿಜವಾಗಿ ಯಾರು ಆಕೆಗೆ ಫೋಟೋ, ಲೆಟರ್ ಕಳಿಸಿದ್ದಾರೋ ಗೊತ್ತಿಲ್ಲ’ ಎಂದು ಅರವಿಂದ್ ವೆಂಕಟೇಶ್ ರೆಡ್ಡಿ.
ಇದನ್ನೂ ಓದಿ: ಕನ್ನಡದ ನಟಿಗೆ ಕಿರುಕುಳ; ನಿರ್ಮಾಪಕ ಅರವಿಂದ್ ವೆಂಕಟೇಶ ರೆಡ್ಡಿ ಬಂಧನ
‘ಕಾನೂನಿಗೆ ಆದದ್ದೇ ಆದ ಪ್ರಕ್ರಿಯೆ ಇದೆ. ನಾನು ತಪ್ಪು ಮಾಡಿದರೆ ನನಗೆ ಶಿಕ್ಷೆಯಾಗುತ್ತದೆ. ಅವಳು ತಪ್ಪು ಮಾಡಿದರೆ ಆಕೆಗೆ ಶಿಕ್ಷೆಯಾಗುತ್ತದೆ. ಅವಳು ಈಗ ಇದ್ದಾಳೆ? ಅವಳ ಉದ್ದೇಶ ಏನು ಎಂಬುದು ಕೂಡ ನನಗೆ ತಿಳಿದಿಲ್ಲ. ನಾನು ಮರೆತಿರುವ ಕಥೆ ಇದು. ಅದನ್ನು ಜ್ಞಾಪಿಸಿಕೊಂಡು ಜೀವನ ಮಾಡೋಕೆ ನಾನು ಇಷ್ಟಪಡಲ್ಲ. ನನ್ನ ಮನೆಯಲ್ಲೇ ಇದ್ದುಕೊಂಡು ಇತರರೊಂದಿಗೆ ಸಂಸಾರ ಮಾಡಿದಳು. ಅದು ನನ್ನ ಕಿವಿಗೆ ಬಿದ್ದಮೇಲೆ ಆ ಮನೆಗೆ ಹೋಗೋದು ಬಿಟ್ಟಿದ್ದೆ. ನಂತರ ನಾನು ದೂರ ಆದೆ. ಆಮೇಲೆ ಆಕೆ 2 ಸಲ ಮಾತನಾಡಲು ಪ್ರಯತ್ನಿಸಿಳು’ ಎಂದು ಅರವಿಂದ್ ರೆಡ್ಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.