Headlines

ಕಿಚ್ಚ ಸುದೀಪ್ ರೀತಿಯಲ್ಲೇ ಬಿಗ್​ ಬಾಸ್ ನಿರೂಪಣೆ ಮಾಡಿದ ಗಿಲ್ಲಿ ನಟ

ಕಿಚ್ಚ ಸುದೀಪ್ ರೀತಿಯಲ್ಲೇ ಬಿಗ್​ ಬಾಸ್ ನಿರೂಪಣೆ ಮಾಡಿದ ಗಿಲ್ಲಿ ನಟ


ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ನಟ ಅವರು ಎಲ್ಲರನ್ನೂ ಅನುಕರಣೆ ಮಾಡಿ ತೋರಿಸಿ ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ಈಗ ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ನಿರೂಪಣೆಯ ಶೈಲಿಯನ್ನೇ ಗಿಲ್ಲಿ ಅನುಕರಣೆ ಮಾಡಿ ತೋರಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ) ರಿಯಾಲಿಟಿ ಶೋನ ನವೆಂಬರ್ 16 ರ ಸಂಚಿಕೆಯಲ್ಲಿ ಈ ಫನ್ನಿ ಘಟನೆ ನಡೆದಿದೆ. ಸುದೀಪ್ ಅವರನ್ನು ಅನುಕರಣೆ ಮಾಡುವಾಗಲೂ ಗಿಲ್ಲಿ ನಟ ಅವರು ಕಾವ್ಯ ಅಂದವನ್ನು ಹೊಗಳಲು ಮರೆಯಲಿಲ್ಲ. ಕಾವ್ಯ ಮತ್ತು ಗಿಲ್ಲಿ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಮುಂದಿನ ದಿನಗಳಲ್ಲಿ ಅವರಿಬ್ಬರ ಆಟಕ್ಕೆ ತೊಂದರೆ ಆದರೂ ಅಚ್ಚರಿ ಏನಿಲ್ಲ. ಸದ್ಯಕ್ಕೆ ಗಿಲ್ಲಿ ನಟ (ಗಿಲ್ಲಿ ನಟ) ಅವರು ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿದ್ದಾರೆ. ಅವರೇ ಫಿನಾಲೆ ಅಭ್ಯರ್ಥಿ ಎಂಬುದು ಮನೆಯಲ್ಲಿ ಎಲ್ಲರ ಅಭಿಪ್ರಾಯವಾಗಿದೆ. ಭಾನುವಾರ (ನ.16) ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕದ ನಡುವೆ ಗಿಲ್ಲಿ ನಟ ಅವರು ಮಸ್ತ್ ಕಾಮಿಡಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *