ಬೆಂಗಳೂರು: ವಾಕಿಂಗ್​ಗೆ ಹೋಗೋ ಮಹಿಳೆಯರೆ ಎಚ್ಚರಿಕೆ; ನಾಯಿಯನ್ನಲ್ಲದೇ ಯುವತಿಯನ್ನೂ ಮುದ್ದಿಸಲು ಹೋದ ಕಾಮಾಂಧ

ಬೆಂಗಳೂರು: ವಾಕಿಂಗ್​ಗೆ ಹೋಗೋ ಮಹಿಳೆಯರೆ ಎಚ್ಚರಿಕೆ; ನಾಯಿಯನ್ನಲ್ಲದೇ ಯುವತಿಯನ್ನೂ ಮುದ್ದಿಸಲು ಹೋದ ಕಾಮಾಂಧ


ನಾಯಿಯನ್ನಲ್ಲದೆ ಯುವತಿಯನ್ನೂ ಮುದ್ದು ಮಾಡಲು ಹೋದವನ ಮೇಲೆ ಎಫ್ ಐ ಆರ್

ಬೆಂಗಳೂರು, ನವೆಂಬರ್ 16: ಸಾಮಾನ್ಯವಾಗಿ ನಾಯಿಗಳನ್ನು ವಾಕಿಂಗ್ ಗೆಂದು ಕರೆದುಕೊಂಡು ಹೋದಾಗ ಕೆಲ ಶ್ವಾನ ಪ್ರಿಯರು (ಶ್ವಾನ ಪ್ರೇಮಿಗಳು) ಬಂದು ನಾಯಿಗಳನ್ನು ಮುದ್ದಿಸುತ್ತಾರೆ. ಆದರೆ ಹೀಗೆ ವಾಕಿಂಗ್ ಗೆ ಹೋದಾಗ ನಾಯಿಯನ್ನು ಮುದ್ದಿಸುವ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ (ದೈಹಿಕ ಕಿರುಕುಳ) ನೀಡಿರುವ ಸಂಗತಿಯನ್ನು ನೀವೆಂದಾದರೂ ಕೇಳಿದ್ದೀರಾ? ಅಚ್ಚರಿಯೆನಿಸಿದರೂ ಇದೇ ರೀತಿಯ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಬೆಂಗಳೂರಿನ ಜ್ಞಾನಭಾರತಿ ಬಳಿಯ ಉಪಕಾರ್ ಲೇಔಟ್ನಲ್ಲಿ ನಾಯಿಯ ಜೊತೆ ವಾಕಿಂಗ್ಗೆ ಬಂದಿದ್ದ ಯುವತಿಯನ್ನು ಒಬ್ಬ ವ್ಯಕ್ತಿ ಸ್ಪರ್ಧಿಸಿ ಪರಾರಿಯಾದ ಘಟನೆ ನಡೆದಿದೆ. ಮಹಿಳೆಯ ಜೊತೆಗಿದ್ದ ನಾಯಿಯನ್ನು ಮುದ್ದು ಮಾಡುತ್ತಿರುವ ವ್ಯಕ್ತಿ ಏಕಾಏಕಿ ಆಕೆಯನ್ನು ಸ್ಪರ್ಷಿಸಲು ಮುಂದಾಗಿದ್ದು, ಈ ಘಟನೆಗೆ ದೂರು ದಾಖಲಾಗಿದೆ.

ಏಕಾಏಕಿ ಸಂತ್ರಸ್ತತೆಯನ್ನು ಸ್ಪರ್ಷಿಸಲು ಮುಂದಾದ ವ್ಯಕ್ತಿ

ಸಂತ್ರಸ್ತ ನವೆಂಬರ್ 7 ರ ರಾತ್ರಿ ತಮ್ಮ ಸಾಕು ನಾಯಿಯನ್ನು ವಾಕಿಂಗ್ ಗೆಂದು ಉಪಕಾರ ಲೇಔಟ್ನ ಬಳಿ ಕರೆದುಕೊಂಡು ಬಂದಿದ್ದರು. ಈ ವೇಳೆ ಅವರ ಮುಂದೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಿಂತು, ನಿಮ್ಮ ನಾಯಿಯನ್ನು ಮುಟ್ಟಬಹುದೇ ಎಂದು ಕೇಳಿದ್ದ. ಸಾಮಾನ್ಯವಾಗಿ ಹಲವು ಶ್ವಾನ ಪ್ರಿಯರು ನಾಯಿಯನ್ನು ಮುದ್ದಿಸುವುದರಿಂದ ಮಹಿಳೆಯೂ ಆತನಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ ನಾಯಿಯನ್ನು ಮುದ್ದಿಸುತ್ತಿದ್ದ ವ್ಯಕ್ತಿ ಏಕಾಏಕಿ ಸಂತ್ರಸ್ತತೆಯನ್ನು ಮುಟ್ಟಲು ಮುಂದಾದಾಗ ಹೆದರಿದ ಮಹಿಳೆ ಆತನನ್ನು ಬಲವಾಗಿ ತಳ್ಳಿದ್ದಾರೆ. ಆಕೆಯ ವಿರೋಧದ ನಡುವೆಯೂ ವ್ಯಕ್ತಿ ಮತ್ತೊಮ್ಮೆ ಕಿರುಕುಳ ನೀಡಿದಾಗ ಆತನ ಕಪಾಳಕ್ಕೆ ಬಾರಿಸಿದ್ದಾರೆ.

ಇದನ್ನೂ ಓದಿ ಸ್ಯಾಂಡಲ್ವುಡ್ ನಟಿಗೆ ನಿರ್ಮಾಪಕ ಟಾರ್ಚರ್ ನೀಡಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ; ತನಿಖೆ ಹೇಳಿದ್ದೇನು?

ಈ ಎಲ್ಲಾ ಗಲಾಟೆಯ ನಡುವೆ ಮಹಿಳೆಯ ಫೋನ್ ರಸ್ತೆಗೆ ಬಿದ್ದಿದ್ದು, ಮಹಿಳೆ ಜೋರಾಗಿ ಕಿರುಚಿದ್ದಾರೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದ, ಸುಮಾರು 25,000 ರೂ. ಬೆಲೆ ಮೊಬೈಲ್ ತೆಗೆದುಕೊಂಡ ವ್ಯಕ್ತಿ ಪರಾರಿಯಾಗಿದ್ದಾನೆ. ಸಾರ್ವಜನಿಕರು ಸೇರುವಷ್ಟರಲ್ಲಿ ಕಾಮುಕ ಪರಾರಿ, ಕಿರುಕುಳ ನೀಡಿದ ಹಿನ್ನಲೆ ಭಾರತೀಯ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *