ನಟ ರಾಜ್ ಬಿ. ಶೆಟ್ಟಿ (ರಾಜ್ ಬಿ ಶೆಟ್ಟಿ) ಅವರಿಗೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ. ‘ಸು ಫ್ರಮ್ ಸೋ’ ಸಿನಿಮಾ ಬಳಿಕ ಅವರ ಜನಪ್ರಿಯತೆ ಹೆಚ್ಚಿದೆ. ಈಗ ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯೂಸಿ ಆಗಿದ್ದಾರೆ. ಈ ನಡುವೆ ಅವರ ಒಂದು ವಿಡಿಯೋ ವೈರಲ್ ಆಗಿದೆ. ಹೆಲ್ಮೆಟ್ (ಹೆಲ್ಮೆಟ್) ಧರಿಸದೇ ಬೈಕ್ ಓಡಿಸಿದ್ದನ್ನು ಕೆಲವರು ಟೀಕಿಸಿದ್ದರು. ಅಭಿಮಾನಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದ ರಾಜ್ ಬಿ. ಶೆಟ್ಟಿ ಅವರು ಈಗ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮತ್ತೆ ಅದೇ ಅಭಿಮಾನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ‘ಒಂದು ವಿಡಿಯೋ ವೈರಲ್ ಆಯ್ತು ಅಂತ ಇವನು ಮತ್ತೆ ನನ್ನನ್ನು ಹಾಕ್ಕೊಂಡಿದ್ದಾನೆ. ವಿಡಿಯೋ ಮಾಡೋಣ, ವಿಡಿಯೋ ಮಾಡೋಣ ಎನ್ನುತ್ತಿದ್ದಾನೆ. ನಾನು ಶೂಟಿಂಗ್ ಸೆಟ್ ನಲ್ಲಿ ಬೈಕ್ ಓಡಿಸುವಾಗ ಇವನು ಹಿಂದೆ ಕೂತಿದ್ದ. ಅದಕ್ಕೆ ಎಲ್ಲರೂ ಬೆಂಗಳೂರು ಸಿಟಿ ಪೊಲೀಸ್ ಅಂತ ಕಮೆಂಟ್ ಮಾಡಿದ್ದಾರೆ. ಮಗಾ.. ದಯವಿಟ್ಟು ಒಳಗೆ ಕೂರಿಸಬೇಡ್ರೋ. ಆ ಸೀನ್‌ನಲ್ಲಿ ಹೆಲ್ಮೆಟ್ ಹಾಕುವಂತೆ ಇಲ್ಲ. ಆ ವಿಡಿಯೋ ವೈರಲ್ ಆಗಿದೆ ಅಂತ ಇವನು ಮತ್ತೆ ವಿಡಿಯೋ ಮಾಡಲು ಬಂದು ಕೂತಿದ್ದಾನೆ. ನೀವೇ ಇವನನ್ನು ವೈರಲ್ ಸ್ಟಾರ್ ಮಾಡಿದ್ದೀರಿ’ ಎಂದು ರಾಜ್ ಬಿ. ಶೆಟ್ಟಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.