ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಇಂದು ಎಲಿಮಿನೇಷನ್ ಡೇ. ಈ ವಾರ ನಾಮಿನೇಟ್ ಆಗಿದ್ದರು. ಅವರಲ್ಲಿ ಅಂತಿಮವಾಗಿ ರಘು, ಸುಧಿ, ಜಾನ್ವಿ ಮತ್ತು ರಿಶಾ ಇಷ್ಟು ಜನ ಅಂತಿಮವಾಗಿ ಉಳಿದುಕೊಂಡಿದ್ದಾರೆ. ಭಾನುವಾರದ ಎಪಿಸೋಡ್ನಲ್ಲಿ ಈ ನಾಲ್ವರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಈ ಬಾರಿ ಎಲಿಮಿನೇಷನ್ ಅನ್ನು ಭಿನ್ನವಾಗಿ ನಡೆಸಲಾಗಿದೆ. ನಾಲ್ಕು ಮಂದಿ ಕಣ್ಣಿಗೆ ಬಟ್ಟೆ ಕಟ್ಟಿ, ಸೂಟ್ ಕೇಸ್ ಕೊಟ್ಟು, ಬಿಗ್ಬಾಸ್ ಗೇಟ್ ಬಳಿ ನಿಲ್ಲಿಸಿ ಬಾಗಿಲು ಹಾಕಲಾಗಿದೆ. ಮತ್ತೆ ಬಾಗಿಲು ತೆರೆದಾಗ ನಾಲ್ವರಲ್ಲಿ ಒಬ್ಬರು ಕಾಣೆ ಆಗಿದ್ದಾರೆ. ಈ ಸಡನ್ ಎಲಿಮಿನೇಷನ್ ನೋಡಿ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದಾರೆ. ಆದರೆ ಎಲಿಮಿನೇಟ್ ಆದವರು ಯಾರೆಂದು ತಿಳಿಯಲು ಇಂದಿನ ಎಪಿಸೋಡ್ ನೋಡಬೇಕಾಗಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ