
ಇದಕ್ಕೆ ಕಾರಣ, ಈ ವೀಕ್ಷಕರ ಅಭಿಪ್ರಾಯ ಎಂದರೆ, ಸುದೀಪ್ ಅವರು ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ರಕ್ಷಣೆ ಮಾಡುತ್ತಿದ್ದಾರಂತೆ! ಗಿಲ್ಲಿ ನಟ, ರಕ್ಷಿತಾ ಅವರಂಥ ಬಡವರ ಮೇಲೆ ನೀವು ಕೋಪ ತೋರಿಸುತ್ತೀರಿ, ಎಷ್ಟೋ ಸಲ ರಕ್ಷಿತಾಳ ತಪ್ಪೇ ಇರಲ್ಲ, ಮೊನ್ನೆ ಕೂಡ ನೀವು ಆಕೆಯ ವಿರುದ್ಧ ತುಂಬಾ ಅಸಹನೀಯವಾಗಿ ನಡೆದುಕೊಂಡ್ರಿ. ಆದರೆ ಸದಾ ಜಗಳವಾಡ್ತಿರೋ ಅಶ್ವಿನಿ ಗೌಡ ಆಗಲೀ, ಜಾಹ್ನವಿ ಬಗ್ಗೆಯಾಗಲಿ ಯಾವಾಗಲೂ ಸಾಫ್ಟ್ ಕಾರ್ನರ್ ಆಗಿರುತ್ತೀರಿ ಎಂದು ಹೇಳುತ್ತಿದ್ದಾರೆ.