ಆಧುನಿಕತೆಯ ಹೆಸರಿನಲ್ಲಿ ನಾವಿಂದು ಬದಲಾಗಿದ್ದೇವೆ. ನಾವು ಮಾಡಬಹುದಾದ ದಿನನಿತ್ಯದ ಕೆಲಸಗಳನ್ನು (ದೈನಂದಿನ ಕೆಲಸ) ಈ ಮೆಷಿನ್ ಅವರೇ ಮಾಡಿ ಮುಗಿಸುತ್ತಿದ್ದಾರೆ. ಹೀಗಾಗಿ ಸಿಟಿ ಜನರು ಉಂಡು ತಿಂದು ರೆಸ್ಟ್ ಮಾಡ್ತಾ ಇದ್ದಾರೆ. ಮೈ ದಂಡಿಸಿಕೊಳ್ಳಲು ಜಿಮ್, ವರ್ಕ್ ಔಟ್ (ತಾಲೀಮು) ಹಾಗೂ ಫಿಟ್ ನೆಸ್ ಸೆಂಟರ್‌ಗಳಿಗೆ ತೆರಳಿ ಒಂದಿಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಇದೀಗ ಇತಿಹಾಸ ಮರುಕಳಿಸುತ್ತಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಹಳ್ಳಿ ಜನರು ತಮ್ಮ ದಿನನಿತ್ಯ ಮಾಡುವ ಕೆಲಸವನ್ನು ಸಿಟಿ ಜನರು ಫಿಟ್‌ನೆಟ್ ಹಾಗೂ ವರ್ಕ್ ಹೆಸರಿನಲ್ಲಿ ಮಾಡುತ್ತಿದ್ದಾರೆ, ಇದಕ್ಕೆ ಸಂಬಂಧ ಪಟ್ಟ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ಪಟ್ಟುಕೊಂಡಿದ್ದಾರೆ.
ಕೆಲ್ಸ ಒಂದೇ, ಆಯ್ಕೆ ಮಾಡಿಕೊಂಡ ರೀತಿ ಬೇರೆ
Tripurantahaka GL ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಅರ್ಥ ಪೂರ್ಣ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋಗೆ ಎಲ್ಲಿ ಮಾಡಬೇಕು ಅಲ್ಲಿ ಮಾಡಿದ್ದರೆ ಇಲ್ಲಿ ಹೀಗೆ ಮಾಡುವುದು ಅಗತ್ಯವಿರಲಿಲ್ಲ. ಹಾಸ್ಯ ಬಂದಾಗ ನಗದೆ ಮುಖ ಗಂಟೆಗಟ್ಟಿಕೊಂಡು, ವೈದ್ಯರ ಸಲಹೆ ಕಾರ್ಯಕ್ರಮಗಳಲ್ಲಿ ಕ್ಲಬ್ ಸೇರಿದಂತೆ, ವಿನಾಕಾರಣ ನಕ್ಕು ಹಾಸ್ಯಾಸ್ಪದವಾಗುವಂತೆ, ಫಿಟ್‌ನೆಸ್ ಸೆಂಟರ್‌ಗೆ ಸೇರುವ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಹಳ್ಳಿಯಲ್ಲಿ ಜನರು ಮಾಡುವ ಬಟ್ಟೆ ತೊಳೆಯುವ, ಹಾಲು ಕರೆಯುವ ಹಾಗೂ ಬೆರಣಿ ತಟ್ಟುವ ಕೆಲಸವನ್ನು ಸಿಟಿಯ ಮಹಿಳೆಯರು ವರ್ಕ್ ಔಟ್ ವಿಡಿಯೋ ಹೆಸರಿನಲ್ಲಿ ಫಿಟ್‌ನೆಸ್ ಸೆಂಟರ್‌ನಲ್ಲಿ ಮಾಡುತ್ತಿರುವುದನ್ನು ಗಮನಿಸಬಹುದು.
ಈ ವಿಡಿಯೋ ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ. ಒಬ್ಬ ಬಳಕೆದಾರ ಮನೆಯಲ್ಲಿ ಕೆಲಸ ಮಾಡಿದರೆ ತಾಯಿಗೂ ಸಹಾಯ ಮಾಡಿದ್ದಂಗೆ ಆಗುತ್ತೆ, ಆರೋಗ್ಯ ಚೆನ್ನಾಗಿ ಇರುತ್ತೆ ಎಂದಳು. ಮತ್ತೊಬ್ಬರು, ಇತ್ತೀಚೆಗಿನ ಐಷಾರಾಮಿ, ಅರ್ಧ ವಯಸ್ಸಿಗೆ ಪೂರ್ಣ ವಿರಾಮ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ಸರ್ ಪ್ಲೀಸ್ ನನ್ನ ಹಣ ನೀಡಿ: ದುಡಿದ ಹಣಕ್ಕಾಗಿ ರೈಲಿನ ಹಿಂದೆ ಓಡಿದ ಕೂಲಿ
ಇತರ ಬಳಕೆದಾರ ಇದೆಲ್ಲಾ ಬೇಕಿತ್ತಾ ಇದನ್ನೇ ಪ್ರಾಯೋಗಿಕವಾಗಿ ಮನೆಯಲ್ಲೇ ಮಾಡಿ, ಮನೆಗೆ ಆಳು ಇದ್ದರೇ ಬಿಡಿಸಿ ಖರೀದಿಸಿದ ನೀವೇ ಮಾಡ್ರಮ್ಮ,,, ಹಿಂದೆ ಅಮ್ಮ ಅಜ್ಜಿ ಕಾಲದಲ್ಲಿ ಅಡುಗೆ ಮನೆ ಜಿಮ್ ಆಗುತ್ತಿದೆ,, ಕುಟ್ಟುವುದು, ರುಬ್ಬುವುದು, ಬೀಸುವುದು, ನೆಲದ ಮೇಲೆ ಕುಳಿತು ತರಕಾರಿ ಹೆಚ್ಚುವುದು, ಬಾವಿ ಕಟ್ಟೆಯಲ್ಲಿ ನೀರು ಸೇದುವುದು. ಅದಕ್ಕೆ ಅವರು ಆರೋಗ್ಯವಾಗಿ 100 ವರ್ಷ ಬದುಕಿದ್ದು. ವಯಸ್ಸಾಗಿ ಸತ್ತರೆ ಖಾಯಿಲೆ ಬಿದ್ದು ಅಲ್ಲಾ ಎಂದು ವಾಸ್ತವ ಸ್ಥಿತಿಯ ಬಗ್ಗೆ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 5:02 pm, ಭಾನುವಾರ, 16 ನವೆಂಬರ್ 25