ಒಬ್ಬ ವ್ಯಕ್ತಿಯ ಬಂಧನದಿಂದ ನಿರಾಳವಾಯ್ತು ತೆಲುಗು ಚಿತ್ರರಂಗ: ಸಿಕ್ಕಿದ್ದು ಹೇಗೆ?

ಒಬ್ಬ ವ್ಯಕ್ತಿಯ ಬಂಧನದಿಂದ ನಿರಾಳವಾಯ್ತು ತೆಲುಗು ಚಿತ್ರರಂಗ: ಸಿಕ್ಕಿದ್ದು ಹೇಗೆ?


ತೆಲುಗು ಚಿತ್ರರಂಗ (ಟಾಲಿವುಡ್) ದೇಶದಲ್ಲಿಯೇ ಬಹಳ ಲಾಭದಾಯಕ ಚಿತ್ರರಂಗ. ತೆಲುಗು ಚಿತ್ರರಂಗದವರೆಗೆ ಸಕ್ಸಸ್ ರೇಟ್ ಭಾರತದ ಇನ್ಯಾವ ಚಿತ್ರರಂಗದಲ್ಲಿಯೂ ಇಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೋ ಏನೋ ಪೈರಸಿ ಸಮಸ್ಯೆ ಕಾಡುತ್ತಿರುವುದು ತೆಲುಗು ಚಿತ್ರರಂಗವನ್ನೇ. ತೆಲುಗು ಸಿನಿಮಾಗಳು ಕೆಲವು ಬಿಡುಗಡೆಗೆ ಮುಂಚೆಯೇ ಲೀಕ್ ಆಗಿ ಬಿಡುತ್ತವೆ. ಪೈರಸಿಯಿಂದ ನಿರ್ಮಾಪಕರು ಪ್ರತಿ ವರ್ಷ ಸುಮಾರು 500-600 ಕೋಟಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಇದೀಗ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಇಡೀ ತೆಲುಗು ಚಿತ್ರರಂಗದಿಂದ ನಿರಾಳತೆ ಅನುಭವಿಸಿದೆ.

ಕೆಲ ತಿಂಗಳ ಹಿಂದಷ್ಟೇ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ಪ್ರಮುಖ ನಿರ್ಮಾಪಕರು ಸೈಬರಾಬಾದ್ ಪೊಲೀಸರ ಬಳಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಅದಾದ ಕೆಲವೇ ದಿನಗಳಲ್ಲಿ ಪೈರಸಿ ಅವರನ್ನು ಹಿಡಿದು ಮತ್ತೆ ನಿರ್ಮಾಪಕರು, ನಟರನ್ನು ಕರೆಸಿ ಅವರಿಗೆ ಕೋರರ ದಂಧೆ ತೋರಿಸಿದ್ದರು. ಆಗ ನಿರ್ಮಾಪಕರು ಐಬೊಮ್ಮ ಪೈರಸಿ ಸೈಟಿನವರನ್ನು ಬಂಧಿಸುವಂತೆ ವಿಶೇಷ ಮನವಿ ಮಾಡಿದರು. ಅದೇ ಸಮಯದಲ್ಲಿ ಐಬೊಮ್ಮ ಸೈಟಿನವರು ಪೊಲೀಸರಿಗೆ ಸವಾಲು ಹಾಕಿ ಬಹಿರಂಗ ಪತ್ರ ಬರೆದಿದ್ದರು. ಆದರೆ ಈಗ ಐಬೊಮ್ಮ ಸೈಟಿನ ಪ್ರಮುಖ ವ್ಯಕ್ತಿ ರವಿ ಎಂಬಾತನನ್ನು ಬಂಧಿಸಿದ್ದಾರೆ.

ಐಬೊಮ್ಮ, ತೆಲುಗು ಚಿತ್ರರಂಗಕ್ಕೆ ಮಾರಕವಾದ ಪ್ರಮುಖ ಪೈರಸಿ ವೆಬ್ ಸೈಟ್ ಆಗಿದೆ. ಐಬೊಮ್ಮ ಸೈನವರು, ಸಿನಿಮಾ ಬಿಡುಗಡೆಗೆ ಮುಂಚೆಯೇ ಜಾಹೀರಾತು ನೀಡಿ ಪೈರಸಿ ಮಾಡುತ್ತಿದ್ದರು. ಆದರೆ ಇದೀಗ ಐಬೊಮ್ಮ ಸೈಟ್ ಪ್ರಾರಂಭ ಮಾಡಿದ ವ್ಯಕ್ತಿ ಎನ್ನಲಾಗುತ್ತಿರುವ ಇಮ್ಮಡಿ ರವಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫ್ರಾನ್ಸ್‌ನಿಂದ ರವಿ ಹೈದರಾಬಾದ್‌ಗೆ ಶುಕ್ರವಾರ ರಾತ್ರಿ ಮರಳಿದ್ದು, ಆತ ಮರಳಿದ ಕೂಡಲೇ ಆತನನ್ನು ಬಂಧಿಸಿ, ಕುಕ್ಕಟ್ಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್: ನಾಗಶೇಖರ್ ಹೊಸ ಸಿನಿಮಾಗೆ ಆಕರ್ಷಕ ಟೈಟಲ್

ರವಿ, ಕೆರೆಬಿಯನ್ ದ್ವೀಪದಲ್ಲಿ ನೆಲೆಯಾಗಿ ಇರಿಸಿಕೊಂಡು ಅಲ್ಲಿಂದ ಐಬೊಮ್ಮ ವೆಬ್ ಸೈಟ್ ರನ್ ಆಗುತ್ತಿದೆ. ರವಿಯಿಂದ ಕೆಲವು ಹಾರ್ಡ್ ಡ್ರೈವ್‌ಗಳನ್ನು ವಶಪಡಿಸಲಾಗಿದೆ. ರವಿಗೆ ಸೇರಿದ ನಿವಾಸದ ಮೇಲೆ ದಾಳಿ ಮಾಡಿ ಲ್ಯಾಪ್ ಟಾಪ್, ಹಾರ್ಡ್ ಡ್ರೈವ್, ಪೆನ್ ಡ್ರೈವ್ ಇತ್ಯಾದಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಂದಹಾಗೆ ಇದೀಗ ರವಿಯನ್ನು ಬಂಧಿಸುವಲ್ಲಿ ಅವರ ಪತ್ನಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ವೈಜಾಗ್ ಮೂಲದ ರವಿ, ಹೈದರಾಬಾದ್ ನ ಕುಕ್ಕಟಪಲ್ಲಿಯಲ್ಲಿ ಅಪಾರ್ಟ್ ಮೆಂಟ್ ಹೊಂದಿದ್ದ. ಆದರೆ ಅವರು ಹೆಚ್ಚಾಗಿ ಫ್ರಾನ್ಸ್ನಲ್ಲಿ ಇರುತ್ತಿದ್ದರು. ಇತ್ತೀಚೆಗೆ ರವಿ ಹಾಗೂ ಆತನ ಪತ್ನಿಗೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಇಬ್ಬರೂ ಪರಸ್ಪರ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಪತ್ನಿಯೊಂದಿಗೆ ವಿಚ್ಛೇದನ ಪಡೆಯಲೆಂದು ರವಿ ಫ್ರ್ಯಾನ್ಸ್‌ನಿಂದ ಹೈದರಾಬಾದ್‌ಗೆ ಬಂದಿದ್ದ. ರವಿ ಹೈದರಾಬಾದ್‌ಗೆ ಬರುತ್ತಿರುವ ವಿಷಯವನ್ನು ಆತನ ಪತ್ನಿಯೇ ಪೊಲೀಸರಿಗೆ ತಿಳಿಸಿ, ಆತನ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 5:08 pm, ಭಾನುವಾರ, 16 ನವೆಂಬರ್ 25



Source link

Leave a Reply

Your email address will not be published. Required fields are marked *