
ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಟೀಮ್ ಇಂಡಿಯಾ ಹೀನವಾಗಿ ಸೋಲನುಭವಿಸಿದೆ. ಕೋಲ್ಕತ್ತಾದ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಆಟದ ಮೊದಲು ಬ್ಯಾಟ್ ಸೌತ್ ಆಫ್ರಿಕಾ ತಂಡವು 159 ರನ್ಗಳಿಗೆ ಆಲೌಟಾದರೆ, ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 189 ರನ್ ಕಲೆಹಾಕಿತು.
ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಸೌತ್ ಆಫ್ರಿಕಾ 153 ರನ್ ಗಳಿಸಿ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ನಲ್ಲಿ 30 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 124 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಕೇವಲ 93 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 30 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾದ ಹಂಗಾಮಿ ನಾಯಕ ರಿಷಭ್ ಪಂತ್, ದಕ್ಷಿಣ ಆಫ್ರಿಕಾ ನೀಡಿದ ಸುಲಭ ಗುರಿಯನ್ನು ನಾವು ಚೇಸ್ ಮಾಡಬೇಕಿತ್ತು. ಆದರೆ ನಾವು ಒತ್ತಡಕ್ಕೊಳಗಾದೆವು. ಇದರ ಸಂಪೂರ್ಣ ಲಾಭ ಪಡೆದ ಸೌತ್ ಆಫ್ರಿಕಾ ಬೌಲರ್ಗಳಿಗೆ ಪಿಚ್ ಕೂಡ ಸಹಕಾರಿಯಾಯಿತು.
ಈ ಪಿಚ್ನಲ್ಲಿ 120 ರನ್ ಗಳಿಸುವುದು ಅಸಾಧ್ಯವಾಗಿದೆ ಎಂದು ತಿಳಿದಿದೆ. ಇದಾಗ್ಯೂ ನಾವು ಒತ್ತಡವನ್ನು ನಿಭಾಯಿಸಲು ವಿಫಲವಾದೆವು. ಈ ಸೋಲಿನ ನಂತರ ನಾವು ಕಂಬ್ಯಾಕ್ ಎಂದು ರಿಷಭ್ ಪಂತ್ ಹೇಳಿದ್ದಾರೆ.
ಇನ್ನು ಈ ಆಹಾರ ಸೌತ್ ಆಫ್ರಿಕಾ ತಂಡ ಗೆಲ್ಲಲು ಮುಖ್ಯ ಕಾರಣ ಟೆಂಬಾ ಬವುಮಾ ಹಾಗೂ ಕಾರ್ಬಿಕ್ ಬಾಷ್. ಏಕೆಂದರೆ ಈ ಇಬ್ಬರು 8ನೇ ದಾಖಲೆಗೆ 44 ರನ್ಗಳ ಜೊತೆಯಾಟವಾಡಿದ್ದರು. ಈ ಪಾಲುದಾರಿಕೆಯ ಪಂದ್ಯದ ಫಲಿತಾಂಶವನ್ನೇ ಬದಲಿಸುವಂತೆ ಮಾಡಿತು ರಿಷಭ್ ಪಂತ್ ಅಭಿಪ್ರಾಯಪಟ್ಟರು.
ಈ ಸೋಲು ನೋವುಂಟು ಮಾಡಿದೆ. ಇದಾಗ್ಯೂ ಗುವಾಹಟಿಯಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ನಾವು ಕಂಬ್ಯಾಕ್ ನಡೆಯಲಿದೆ ಎಂದು ಇದೇ ವೇಳೆ ರಿಷಭ್ ಪಂತ್ ಹೇಳಿದ್ದಾರೆ.
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್ , ಶುಭ್ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ಧ್ರುವ್ ಜುರೆಲ್ , ಅಕ್ಷರ್ ಪಟೇಲ್ , ಕುಲದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: 93 ವರ್ಷಗಳ ಇತಿಹಾಸದಲ್ಲೇ ಟೀಮ್ ಇಂಡಿಯಾಗೆ ಅತ್ಯಂತ ಹೀನಾಯ ಸೋಲು..!
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕಲ್ಟನ್ , ವಿಯಾನ್ ಮುಲ್ಡರ್ , ಟೆಂಬಾ ಬವುಮಾ (ನಾಯಕ) , ಟೋನಿ ಡಿ ಝೋರ್ಝಿ , ಟ್ರಿಸ್ಟನ್ ಸ್ಟಬ್ಸ್ , ಕೈಲ್ ವೆರ್ರೆನ್ (ವಿಕೆಟ್ ಕೀಪರ್ ), ಮಾರ್ಕೊ ಯಾನ್ಸೆನ್ , ಕಾರ್ಬಿನ್ ಬಾಷ್ , ಸೈಮನ್ ಹಾರ್ಮರ್ , ಕೇಶವ ಮಹಾರಾಜ್.