Headlines

ಪ್ರಿಯಾಂಕ್ ಖರ್ಗೆ ತವರು ಚಿತ್ತಾಪುರದಲ್ಲಿ RSS ಅದ್ಧೂರಿ ಪಥಸಂಚಲನ: ಹೈಸೆಕ್ಯುರಿಟಿ ನಡುವೆ ಹೆಜ್ಜೆ ಹಾಕಿದ ಗಣವೇಷಧಾರಿಗಳು 

ಪ್ರಿಯಾಂಕ್ ಖರ್ಗೆ ತವರು ಚಿತ್ತಾಪುರದಲ್ಲಿ RSS ಅದ್ಧೂರಿ ಪಥಸಂಚಲನ: ಹೈಸೆಕ್ಯುರಿಟಿ ನಡುವೆ ಹೆಜ್ಜೆ ಹಾಕಿದ ಗಣವೇಷಧಾರಿಗಳು 


ಚಿತ್ತಾಪುರದಲ್ಲಿ ನಡೆದ RSS ಪಥಸಂಚಲನ

ಕಲಬುರಗಿ, ನವೆಂಬರ್ 16: ಆರ್‌ಎಸ್‌ಎಸ್‌ಗೆ (ಆರ್ಎಸ್ಎಸ್) ಕಡಿವಾಣ ಹಾಕಬೇಕು ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದರಿಂದ ಸಿಟ್ಟಿಗೆದಿದ್ದ ಆರ್‌ಎಸ್‌ಎಸ್‌, ಪ್ರಿಯಾಂಕ್‌ ತವರು ನೆಲ ಚಿತ್ತಾಪುರದಲ್ಲೇ (ಚಿತ್ತಾಪುರ) ಪಥಸಂಚಲನ ಮಾಡಲು ನಿರ್ಧರಿಸಿತ್ತು. ಆದರೆ ಇದಕ್ಕೆ ಅವಕಾಶ ನೀಡಿಲ್ಲ. ಬಳಿಕ ಹೈ ಮೆಟ್ಟಿಲೇರಿದ್ದ ಆರ್‌ಎಸ್‌ಎಸ್‌, ಅಲ್ಲಿಂದಲೇ ಅನುಮತಿ ಪಡೆದು ಇಂದು ಪರೇಡ್ ಮಾಡಿ ಮುಗಿಸಿದೆ. ರಾಜಕೀಯ ತಿಕ್ಕಾಟದ ಮಧ್ಯೆ ಅದ್ಧೂರಿ ಪಥಸಂಚಲನ ನಡೆದಿದ್ದು, ಗ್ರಾಮೀಣ ಭಾಗದಲ್ಲಿ ಆರ್ ಎಸ್ ಎಸ್ ಗೆ ಮತ್ತಷ್ಟು ಬಲ ಬರಲು ಸಹಕಾರಿ ಎಂಬ ಮಾತುಗಳು ಕೇಳಿಬರುತ್ತಿವೆ.

ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದು ಚಿತ್ತಾಪುರದ ಎಸ್‌ಎಸ್‌ಎಸ್ ಪಥಸಂಚಲನ ಕೊನೆಗೂ ಇಂದು ನಿರ್ವಿಘ್ನವಾಗಿ ನಡೆದಿದೆ. 300 ಜನ ಗಣವೇಶಧಾರಿಗಳು ಮತ್ತು 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಜನ ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಚಿತ್ತಾಪುರದಲ್ಲಿ ಮೊಳಗಿದ ಆರ್ ಎಸ್ ಎಸ್ ಗೀತೆ: ವಿಡಿಯೋ ನೋಡಿ

ಚಿತ್ತಾಪುರ ಪಟ್ಟಣದಲ್ಲಿ ಮಧ್ಯಾಹ್ನ 3:45ಕ್ಕೆ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕೆನರಾ ಬ್ಯಾಂಕ್ ವೃತ್ತ ಮಾರ್ಗವಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಸುಮಾರು ಒಂದೂವರೆ ಕಿ.ಮೀ ನಷ್ಟು ಪಥಸಂಚಲನ ನಡೆದಿದ್ದು, ನಿರೀಕ್ಷೆಗಿಂತ ಮೀರಿ ಜನರ ಬೆಂಬಲದೊಂದಿಗೆ ಅದ್ಧೂರಿ ಪಥಸಂಚಲನ ನಡೆಯುತ್ತಿದೆ. ಪಥಸಂಚಲನದ ಸಂಪೂರ್ಣ ಹೂಮಳೆ ಸ್ವಾಗತ ಕೋರಲಾಯಿತು. ಚಿಕ್ಕಮಕ್ಕಳಿಂದ ಹಿಡಿದು, ಮಹಿಳೆಯರು, ವೃದ್ದರು ಜಯಘೋಷ ಕೂಗುತ್ತಾ ಅದ್ದೂರಿ ಸ್ವಾಗತ ಕೋರಿದ್ದರು.

ಸಂತಸ ವ್ಯಕ್ತಪಡಿಸಿದ ಆರ್ ಎಸ್ ಎಸ್ ಜಿಲ್ಲಾ ಪ್ರಮುಖ ಅಶೋಕ ಪಾಟೀಲ್

ಬಳಿಕ ಅದೇ ಬಜಾಜ್ ಕಲ್ಯಾಣ ಮಂಟಪದಲ್ಲಿ ಸುಮಾರು 45 ನಿಮಿಷಗಳ ವೇದಿಕೆ ಕಾರ್ಯಕ್ರಮ ನಡೆಯಿತು. ಈ ವೇಳೆ ಗಣವೇಷಧಾರಿಗಳನ್ನು ಉದ್ದೇಶಿಸಿ ಆರ್ ಎಸ್ ಎಸ್ ಎಸ್ ಕರ್ನಾಟಕ ಪ್ರಾಂತ ಪ್ರಮುಖ ಕೃಷ್ಣ ಜೀ ಜೋಶಿ. ಕೊನೆಗೂ ಸಾಕಷ್ಟು ಅಡ್ಡಿ ಆತಂಕಗಳ ಮಧ್ಯೆ ಅದ್ದೂರಿ ಹಾಗೂ ಶಾಂತಿಯುತವಾಗಿ ಪಥಸಂಚಲನ ನಡೆದಿದ್ದಕ್ಕೆ ಕೋಟ್೯ಗೆ ಅರ್ಜಿ ಹಾಕಿದ್ದ ಆರ್ ಎಸ್ ಎಸ್ ಜಿಲ್ಲಾ ಪ್ರಮುಖ ಅಶೋಕ ಪಾಟೀಲ್ ಮಾತನಾಡಿ ಖುಷಿಯಾಯಿತು.

ಇನ್ನು ಇದಕ್ಕೂ ಮುನ್ನ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು 10 ಷರತ್ತುಗಳನ್ನು ಹಾಕಿ ಅನುಮತಿಸಲಾಗಿದೆ. ಪಥಸಂಚಲನದಲ್ಲಿ ಕೇವಲ ಸ್ಥಳೀಯರು ಮಾತ್ರ ಪಾಲ್ಗೊಳ್ಳಬೇಕು. 300 ಜನ ಗಣವೇಷಧಾರಿಗಳು ಭಾಗವಹಿಸಬೇಕು ಎಂಬ ನಿಯಮದ ಜೊತೆಗೆ ಮಧ್ಯಾಹ್ನ 3:30 ರಿಂದ 5:45 ರೊಳಗೆ ಮುಕ್ತಾಯ ಮಾಡಬೇಕು ಎಂಬ ನಿಯಮ ಹಾಕಲಾಗಿತ್ತು. ಸದ್ಯ ಅಷ್ಟರೊಳಗೆ ಅದ್ದೂರಿಯಾಗಿ ಪಥಸಂಚಲನ ಮಾಡಲಾಗಿದೆ.

ಹೆಜ್ಜೆಹೆಜ್ಜೆಗೂ ಬಿಗಿ ಪೊಲೀಸ್ ಭದ್ರತೆ

ಜಿದ್ದಾಜಿನಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಯಿತು. 8 ಕೆಎಸ್‌ಆರ್‌ಪಿ, 3 ಡಿಎಆರ್‌ ತುಕಡಿ ಸೇರಿದಂತೆ 1200ಕ್ಕೂ ಹೆಚ್ಚು ತನಿಖೆ ನಿಯೋಜನೆಗೊಂಡಿದ್ದರು. 300 ಜನರಿಗೆ ಮಾತ್ರ ಪರೇಡ್‌ಗೆ ಅವಕಾಶ ನೀಡಲಾಗಿದೆ. ಇನ್ನು ಪಥಸಂಚಲದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಮತ್ತೆ ಆರ್‌ಎಸ್‌ಎಸ್ ವಿರುದ್ಧ ಗುಡುಗಿದ್ದಾರೆ. ಚಿತ್ತಾಪುರದಲ್ಲಿ ನಾವು ಹೇಳಿದಂತೆ ಆರ್‌ಎಸ್‌ಎಸ್‌ ಪಥಸಂಚಲನ ನಡೆದಿದೆ ಅಂತಾ ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುತ್ತೇನೆ: RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಅದೇನೇ ಇರ್ಲಿ, ಗದ್ದಲ, ಗಲಾಟೆ ಇಲ್ಲದೆ ಸುಗಮವಾಗಿ ಆರ್‌ಎಸ್‌ಎಸ್‌ ಪಥಸಂಚಲನ ನಡೆದಿದ್ದು, ಎಲ್ಲರೂ ಖುಷಿಪಡುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *