Headlines

ಯಾರದ್ದೋ ಹಠಕ್ಕೆ ಇನ್ಯಾರೋ ಬಲಿ: ಎಲಿಮಿನೇಟ್ ಆಗಿದ್ದು ಯಾರು?

ಯಾರದ್ದೋ ಹಠಕ್ಕೆ ಇನ್ಯಾರೋ ಬಲಿ: ಎಲಿಮಿನೇಟ್ ಆಗಿದ್ದು ಯಾರು?


ಬಿಗ್ಬಾಸ್ ಕನ್ನಡ ಸೀಸನ್ 12 ರ (ಬಿಗ್ ಬಾಸ್ ಕನ್ನಡ) ಭಾನುವಾರದ ಎಪಿಸೋಡ್‌ನಲ್ಲಿ ಮತ್ತೊಂದು ಎಲಿಮಿನೇಷನ್ ನಡೆಯಿತು. ಆದರೆ ಈ ಎಲಿಮಿನೇಷನ್ ಬಹಳ ನಾಟಕೀಯವಾಗಿ ಆಗಿದೆ. ಸೇಫ್ ಆಗಿದ್ದವರು ಇನ್ಯಾರದ್ದೋ ಹಠಕ್ಕೆ ನಾಮಿನೇಟ್ ಆಗಿ ಈಗ ನೇರವಾಗಿ ಮನೆಯಿಂದಲೇ ಹೊರಗೆ ಹೋಗಿದ್ದಾರೆ. ಈ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ನೀಡಿದೆ. ಅಷ್ಟಕ್ಕೂ ಮನೆಯಿಂದ ಹೊರ ಹೋಗಿದ್ದು ಯಾರು?

ಬಿಗ್ಬಾಸ್ ಮನೆಯ ಎಂಟರ್ಟೈನರ್‌ಗಳಲ್ಲಿ ಒಬ್ಬರಾಗಿದ್ದರು ಕಾಕ್ರೂಚ್ ಸುಧಿ ಅವರು ಈ ವಾರ ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಸಲಿಗೆ ಅವರಿಗಿಂತ ಕಳಪೆಯಾಗಿ ಆಡುತ್ತಿದ್ದ ಕೆಲವರು ಮನೆಯಲ್ಲಿದ್ದಾರೆ. ಆದರೆ ಸುಧಿ ಅವರ ದುರಾದೃಷ್ಟದಿಂದಾಗಿ ಅವರು ಈ ವಾರ ಮನೆಯಿಂದ ಹೊರ ಹೋಗಿದ್ದಾರೆ.

ಅಸಲಿಗೆ ವಾರದ ಆರಂಭದಲ್ಲಿ ಅವರು ಸೇಫ್ ಆಗಿದ್ದರು. ಆದರೆ ಟಾಸ್ಕ್ ಒಂದರಲ್ಲಿ ರಾಶಿಕಾ ಹಠ ಮಾಡಿತು ಇಡೀ ತಂಡವೇ ನಾಮಿನೇಟ್ ಆಯ್ತು. ಮನೆಯಲ್ಲಿ ಸೇಫ್ ಆಗಿದ್ದ ಸುಧಿ, ನಾಮಿನೇಟ್ ಆಗುವಂತಾಯ್ತು. ಆದರೆ ವೀಕ್ಷಕರು ಮತ ಹಾಕಿ ಗೆಲ್ಲುತ್ತಾರೆ ಎಂಬ ಆಸೆ ಸುಧಿ ಅವರಿಗೆ ಇದ್ದಂತಿತ್ತು. ಆದರೆ ಅದು ಸಹ ಸುಳ್ಳಾಗಿದ್ದರೆ, ಸುಧಿ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಶನಿವಾರವೇ ಕೆಲವು ನಾಮನಿರ್ದೇಶನಗಳು ಇಂದು ಪಾಲಾಗಿವೆ. ಭಾನುವಾರದ ಎಪಿಸೋಡ್ ನಲ್ಲಿ ರಾಶಿಕಾ, ಧ್ರುವಂತ್ ಮೊದಲು ಸೇಫ್ ಆದರು. ಅಂತಿಮವಾಗಿ ಜಾನ್ವಿ, ರಿಶಾ, ರಘು ಮತ್ತು ಕಾಕ್ರೂಚ್ ಸುಧಿ ಉಳಿದುಕೊಂಡಿದ್ದರು. ಎಲ್ಲರೂ ಸಹ ರಿಶಾ ಅಥವಾ ಜಾನ್ವಿ ಈ ಬಾರಿ ಮನೆಯಿಂದ ಹೊರಗೆ ಹೋಗುತ್ತಾರೆ ಎಂದುಕೊಂಡಿದ್ದರು. ಅದರಂತೆ ಸುದೀಪ್ ಅವರು, ನಾಲ್ಕೂ ಜನರು ಬಿಗ್ ಬಾಸ್ ನ ಮುಖ್ಯ ದ್ವಾರದ ಹೊರಗೆ ಸಾಲಾಗಿ ನಿಲ್ಲುವಂತೆ ಹೇಳಿದರು. ನಾಲ್ವರಿಗೂ ಕಣ್ಣಿಗೆ ಬಟ್ಟೆ ಸಹ ಕಟ್ಟಲಾಯ್ತು. ಮೂರು ಬಾರಿ ಬಾಗಿಲು ಹಾಕಿ ತೆಗೆಯಲಾಯ್ತು. ಮೂರನೇ ಬಾರಿ ಬಾಗಿಲು ತೆರೆದಾಗ ಕಾಕ್ರೂಚ್ ಸುಧಿ ಅಲ್ಲ. ಅವರು ಎಲಿಮಿನೇಟ್ ಆಗಿದ್ದರು.

ಸುಧಿ ಎಲಿಮಿನೇಟ್ ಆಗಿದ್ದು ಜಾನ್ವಿಗೆ ಸಹಿಸಿಕೊಳ್ಳಲಾಗಲಿಲ್ಲ. ಅವರು ಧಾರಾಕಾರವಾಗಿ ಅತ್ತರು. ‘ಯಾರದ್ದೋ ಹಠದಿಂದ ಸುಧಿ ಇಂದು ಹೊರಗೆ ಹೋಗುವಂತಾಯ್ತು ಎಂದು ಅವರು ಕಣ್ಣೀರು ಹಾಕಿದರು. ಅಶ್ವಿನಿ, ರಿಶಾ ಅವರು ಸಹ ಕಣ್ಣೀರು ಹಾಕಿದರು. ಹೊರಗೆ ಬಂದ ಬಳಿಕ ಸುದೀಪ್ ಜೊತೆ ಮಾತನಾಡಿದ ಸುಧಿ, ಇನ್ನಷ್ಟು ಚೆನ್ನಾಗಿ ಆಡಬಹುದಿತ್ತು, ಆದರೆ ಈ ತನಕ ಆಡಿದ್ದೂ ಖುಷಿಯಾಗಿದೆ. ಸುದೀಪ್ ಸಹ, ‘ನೀವು ಒಳ್ಳೆಯ ವ್ಯಕ್ತಿ, ನೀವು ಒಳ್ಳೆಯ ಸ್ಪರ್ಧಿ, ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿ’ ಎಂದು ಹಾರೈಸಿ ಅವರನ್ನು ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *