ಹಾಸ್ಯ ಕಲಾವಿದ ಚಂದ್ರಪ್ರಭ (ಚಂದ್ರಪ್ರಭ) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಿಂದ ಎಲಿಮಿನೇಟ್ ಆದರು. ತಾವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕು ಎಂದು ಅವರು ನಿರ್ಧರಿಸಿದರು. ಆ ರೀತಿ ತೀರ್ಮಾನ ತೆಗೆದುಕೊಳ್ಳಲು ಕಾರಣ ಏನು ಎಂದು ಅವರು ಬಹಿರಂಗಪಡಿಸಲಿಲ್ಲ. ಮನೆಯಿಂದ ಹೊರಡುವುದಕ್ಕೂ ಮುನ್ನ ಪ್ರಶ್ನಿಸಿದರೂ ಕೂಡ ಅವರು ಅದಕ್ಕೆ ಉತ್ತರ ನೀಡಲಿಲ್ಲ. ಈಗ ಕಾಕ್ರೋಚ್ ಸುಧಿ (ಜಿರಳೆ ಸುಧಿ) ಅವರು ಬಿಗ್ ಬಾಸ್ ಆಟದಿಂದ ಔಟ್ ಆಗಿದ್ದಾರೆ. ಹೊರಬಂದು ಟಿವಿ9 ಜೊತೆ ಮಾತನಾಡಿದ ಅವರು ಚಂದ್ರಪ್ರಭ ಕುರಿತ ಪ್ರಶ್ನೆಗೂ ಉತ್ತರ ಹೇಳಿದ್ದಾರೆ. ‘ಚಂದ್ರಪ್ರಭ ಅವರಿಗೆ ಸೊಂಟು ನೋವು ತುಂಬಾ ಕಾಡುತ್ತಿತ್ತು. ಬಹಳ ಒಡ್ಡಾಡಿದರು. ನನಗೆ ಗೊತ್ತಿದ್ದಂತೆ ಅದೇ ಕಾರಣಕ್ಕೆ ಅವರು ಹೊರಬಂದರು. ಈಗ ನಾನು ಫೋನ್ ಮಾಡಿ ಕೇಳಬೇಕು. ಬಿಗ್ ಬಾಸ್ ಮನೆಯಲ್ಲಿ ಅವರು ಹೊರಟಾಗ ಕೇವಲ 5 ನಿಮಿಷದ ಅವಕಾಶ ಇತ್ತು. ಆಗ ಅವರು ಏನೂ ಹೇಳಲಿಲ್ಲ’ ಎಂದು ಕಾಕ್ರೋಚ್ ಸುಧಿ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.