ಬೆಂಗಳೂರು, ನವೆಂಬರ್ 17: ಅವರಿಬ್ಬರೂ ಐಟಿ ಕಂಪನಿಯ (ಐಟಿ ಕಂಪನಿ) ಉದ್ಯೋಗಿಗಳು. ಕೆಲಸ, ಕೈ ತುಂಬಾ ಸಂಬಳ ಇದ್ದರೂ, ಅಡ್ಡದಾರಿಯಲ್ಲಿ ದುಡ್ಡು ಮಾಡುವ ಚಟ ಇಬ್ಬರಿಗೂ ಇತ್ತು. ವೀಕೆಂಡ್ ಪಾರ್ಟಿ ಮೋಜು ಮಸ್ತಿ ಅಂತ ಎಂಜಾಯ್ ಮಾಡುತ್ತಿದ್ದ ಆ ಜೋಡಿ ಹಣದ (ಹಣ) ದುರಾಸೆಗೆ ಬಿದ್ದು ಈಗ ಪೊಲೀಸರು ಅತಿಥಿಯಾಗಿದ್ದಾರೆ.
ಡೇಟಿಂಗ್ ಆಯಪ್ ಮೂಲಕ ವಂಚನೆ
ಡೇಟಿಂಗ್ ಆಯಪ್ ಮೂಲಕ ಯುವಕನಿಗೆ ವಂಚಿಸಿ, ಹಣ ಮತ್ತು ಚಿನ್ನ ದೋಚಿದ್ದ ಖತರ್ನಾಕ್ ಜೋಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮಿಳುನಾಡು ಮೂಲದ ಕವಿಪ್ರಿಯಾ ಹಾಗೂ ಆಕೆಯ ಬಾಯ್ಫ್ರೆಂಡ್ ಹರ್ಷವರ್ಧನ ಅವರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಕೂಡ ತಮಿಳುನಾಡು ಮೂಲದವರಾಗಿದ್ದು, ನಗರದ ಸಾಪ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಡೇಟಿಂಗ್ ಆಯಪ್ ನಲ್ಲಿ ಪುಲ್ ಆ್ಯಕ್ಟಿವ್ ಆಗಿದ್ದ ಈ ಜೋಡಿ ನಗರದ ಯುವಕನಿಗೆ ಡೇಟಿಂಗ್ ಆಯಪ್ ನಲ್ಲೇ ಬಲೆ ಬೀಸಿದ್ದರು.
ಇದನ್ನೂ ಓದಿ: ಬೆಂಗಳೂರು: ಶಾಂತಿಗಾಗಿ ವ್ಯಕ್ತಿಯ ಅಡ್ಡಗಟ್ಟಿ ದರೋಡೆ, ಅದರಕಾರಿ ವಿಡಿಯೋ ವೈರಲ್
ಯುವಕ ಕೂಡ ಸಾಪ್ಟ್ವೇರ್ ಇಂಜಿನಿಯರ್ ಆಗಿದ್ದು, ಕೈ ತುಂಬ ಸಂಬಳ ಪಡೆಯುತ್ತಿದ್ದ. ಯುವಕನ ಮಾಹಿತಿ ಸಂಗ್ರಹಿಸಿದ ಯುವತಿ ಆತನ ಜೊತೆ ಫ್ರೆಂಡ್ ಶಿಫ್ ಮಾಡಿದ್ದಳು. ಇಬ್ಬರು ಕೂಡ ಒಂದು ತಿಂಗಳಿನಿಂದ ಪರಿಚಿತರಾಗಿದ್ದರೆ, ನವೆಂಬರ್ ಹನ್ನೊಂದರಂದು ಇಂದಿರಾನಗರದ ಲಾಡ್ಜ್ನಲ್ಲಿ ಭೇಟಿಯಾಗಿದ್ದರು. ಇಬ್ಬರು ಒಟ್ಟಿಗೆ ಪಾರ್ಟಿ ಮಾಡಿದರು. ನಂತರ ಸ್ವಲ್ಪ ಹೊತ್ತಿಗೆ ಯುವಕ ಪ್ರಜ್ನೆ ತಪ್ಪಿ ನಿದ್ದೆಗೆ ಜಾರಿದ್ದಾನೆ. ಈ ವೇಳೆ ಕವಿಪ್ರಿಯಾ ಮತ್ತು ಆತನ ಲವರ್ ಯುವಕನ ಮೇಲಿದ್ದ ಬ್ರಾಸ್ ಲೈಟ್, ಚೈನ್ ಹಾಗೂ ಹಣ ದೋಚಿ ಎಸ್ಕೇಪ್ ಆಗಿದ್ದಾರೆ.
6.89 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್
ಸುಮಾರು 6.89 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 12 ಸಾವಿರ ರೂ. ಮೌಲ್ಯದ ಹೆಡ್‌ಸೆಟ್ ಮತ್ತು 10 ಸಾವಿರ ರೂ. ನಗದು ದೋಚಿದ್ದ ಜೋಡಿ ಬ್ರಾಸ್ ಲೈಟ್‌ಗಾಗಿ ಆಡ ಇಟ್ಟು ತಮಿಳುನಾಡು ಸೇರಿದ್ದರು. ಇಂದಿರಾನಗರ ಪ್ರಕರಣ ದಾಖಲಿಸಿ ತಮಿಳುನಾಡಿನಲ್ಲಿ ಈ ಜೋಡಿಯನ್ನ ಬಂಧಿಸಿ ಕರೆ ತಂದಿದ್ದಾರೆ. ಪೋಲೀಸರ ವಿಚಾರಣೆ ವೇಳೆ ಹೈಫೈ ಲೈಫ್ ಲೀಡ್ ಮಾಡಲು ಇದ್ದಬದ್ಧ ಹಣ ಖರ್ಚು ಮಾಡಿ, ಈ ಜೋಡಿ ಹಣ ಹೊಂದಿಸಲು ಡೇಟಿಂಗ್ ಆಯಪ್ ಮೊರೆ ಹೋಗಿ ಅಮಾಯಕ ಯುವಕರಿಗೆ ಗಾಳ ಹಾಕುತ್ತಿದ್ದರಂತೆ.
ಇದನ್ನೂ ಓದಿ: ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ ಬೈಕ್ ಕದ್ದು ಎಸ್ಕೇಪ್ ಆದ ಕಳ್ಳ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಸದ್ಯ ಇಂದಿರಾನಗರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ಒಂದು ಆಭರಣ ಆಡವಿಟ್ಟಿದ್ದು, ಜಪ್ತಿ ಮಾಡಲು ತೆರಳಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಕವಿಪ್ರಿಯಾ ತನ್ನ ಬಾಯ್‌ಫ್ರೆಂಡ್ ಹರ್ಷವರ್ಧನನೊಂದಿಗೆ ಸೇರಿ ಈ ಹನಿಟ್ರ್ಯಾಪ್ ಅನ್ನು ಯೋಜಿಸಿರುವುದು ಬೆಳಕಿಗೆ ಬಂದಿದೆ. ಕೈ ತುಂಬ ಸಂಬಳ ಬರ್ತಿದ್ರು, ಮೋಜು ಮಸ್ತಿ ದುರಾಸೆಯಿಂದ ಇಬ್ಬರು ಟೆಕ್ಕಿಗಳು ಈಗ ಜೈಲು ಸೇರಿದೆ.
ವರದಿ: ವಿಕಾಸ್, ಟಿವಿ9,ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.