ಶ್ರೀಮಂತರು (ಅತಿ ಶ್ರೀಮಂತ) ಎಂದರೆ ಸದಾ ಐಷಾರಾಮಿತನದಲ್ಲೇ ಮಿಂದೆದ್ದು ಬದುಕುವವರು ಬಹಳ ಜನರ ಕಲ್ಪನೆ. ಆದರೆ, ಹಣ, ಸಮಯ, ಶ್ರಮ, ಜೀವನ ಎಲ್ಲವನ್ನೂ ಬ್ಯಾಲನ್ಸ್ ಮಾಡಬಲ್ಲವನೇ ಶ್ರೀಮಂತನಾಗುವುದು. ಈ ಶ್ರೀಮಂತರು ಹೇಗೆ ಯೋಚಿಸುತ್ತಾರೆ, ಏನು ಯೋಚಿಸುತ್ತಾರೆ ಎಂಬ ಕುತೂಹಲ ನಮಗಿರುತ್ತದೆ. ಭಾರತೀಯರ ಯೋಚನೆ ಬೇರೆ ಇರುತ್ತದೆ, ಅಮೆರಿಕದವರು, ಚೀನಾದವರು, ಐರೋಪ್ಯರ ಯೋಚನೆಯೇ ಬೇರೆ ಇರಬಹುದು. ಅದೇ ರೀತಿ ಆ ಪ್ರದೇಶಗಳ ಶ್ರೀಮಂತರ ಯೋಚನೆಯಲ್ಲೂ, ಇಷ್ಟಾನಿಷ್ಟದಲ್ಲಿ ವ್ಯತ್ಯಾಸ ಇರಬಹುದು. ಉದ್ಯಮಿ ಕರ ಭಗತ್ (ಕೆರಾನ್ ಭಗತ್) ಪೋಡ್ಕ್ಯಾಸ್ಟ್ ಬಗ್ಗೆ ಶ್ರೀಮಂತ ಮಾನಸಿಕ ಪ್ರಪಂಚದ ಒಂದು ಎಳೆ ಬಿಚ್ಚಿಟ್ಟಿದ್ದಾರೆ.
ಶ್ರೀಮಂತರು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಅವರಿರುವ ಪ್ರದೇಶ, ಅದರ ಸಂಸ್ಕೃತಿ, ಭೌಗೋಳಿಕತೆ, ಯೋಚನಾಕ್ರಮದ ಮೇಲೆ ಪ್ರಕಟವಾಗುತ್ತದೆ ಎಂದು ರಾಜ್ ಶಮಾನಿ ಅವರ ಸಂದರ್ಶನದಲ್ಲಿ 360 ಒನ್ ಸಿಐಒ ಆಗಿರುವ ಕರಣ್ ಭಗತ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಅಮೆರಿಕ ನಡುವೆ ಮೊತ್ತಮೊದಲ ಎಲ್ ಪಿಜಿ ಒಪ್ಪಂದ; ಭಾರತಕ್ಕೆ ಪ್ರಯೋಜನಗಳೇನು?
ಭಾರತದ ಬಿಲಿಯನೇರ್ಗಳು ಅಂತರ್ಮುಖಿಗಳು…
ಭಾರತದಲ್ಲಿ ಬಿಲಿಯನೇರ್ಗಳು ಬ್ಯುಸಿನೆಸ್ ಮೇಲೆ ಹೆಚ್ಚು ಗಮನ ಹೊಂದಿರುತ್ತಾರೆ. ಇಲ್ಲಿ ವ್ಯಕ್ತಿ ಬಿಲಿಯನೇರ್ ಆಗಿಬಿಟ್ಟರೆ ಅವರ ಮುಂದಿನ ಗಮನ ಎರಡು ಬಿಲಿಯನ್, ನಂತರ ನಾಲ್ಕು, ನಂತರ ಹದಿನೈದು ಹೀಗೆ ಒಬ್ಬೊಬ್ಬರು ಹೆಚ್ಚುತ್ತಾ ಹೋಗುತ್ತಾರೆ. ಇದು ಒಳ್ಳೆಯದೂ ಅಲ್ಲ, ಕೆಟ್ಟದ್ದರೂ ಅಲ್ಲ, ಸಹಜ ಗುಣ ಎಂದು ಕರಣ್ ಭಗತ್ ಅಭಿಪ್ರಾಯಪಡುತ್ತಾರೆ.
ಅಮೆರಿಕದ ಬಿಲಿಯನೇರ್ಗಳಿಗೆ ಸ್ಪೋರ್ಟ್ಸ್ ಟೀಮ್ ಇತ್ಯಾದಿ ಬೇಕು…
ಅಮೆರಿಕದವರ ನೋಟ ಹೆಚ್ಚು ವಿಸ್ತಾರವಾಗಿದೆ. ಅಮೆರಿಕದ ಯಾವುದೇ ಬಿಲಿಯನೇರ್ ತೆಗೆದುಕಂಡರೂ ಅವರು ಸ್ಪೋರ್ಟ್ಸ್ ಟೀಮ್ ಹೊಂದಿರುತ್ತಾರೆ. ಅಥವಾ ಮಾಧ್ಯಮ ಸಂಸ್ಥೆಯೋ ಮತ್ತೊಂದೋ ಹೊಂದಿರುತ್ತಾರೆ. ಅವರಿಗೆ ಹಲವು ಅಭಿರುಚಿಗಳು. ಆ ಅಭಿರುಚಿಗಳನ್ನೇ ಬ್ಯುಸಿನೆಸ್ ಆಗಿ ಪರಿವರ್ತಿಸುವುದು ಹೇಗೆಂದು ತಿಳಿದಿರುತ್ತದೆ ಎಂದು ಹಲವು ಭಾರತೀಯ ಶ್ರೀಮಂತ ಸಲಹೆಗಾರರು ಆಗಿರುವ ಕರಣ್ ಹೇಳುತ್ತಾರೆ.
ಇದನ್ನೂ ಓದಿ: ಕೋಟಿ ರೂ ಸಂಬಳ ಕೊಡ್ತೀನಂದ್ರೂ ಅಮೇರಿಕಾದಲ್ಲಿ ಸಿಗುತ್ತಿಲ್ಲ ಕೆಲಸಗಾರರು; ಮೆಕ್ಯಾನಿಕ್ಸ್ ಇತ್ಯಾದಿ ಕಾರ್ಮಿಕರ ಸಖತ್ ಬೇಡಿಕೆ
ಚೀನಾದ ಬಿಳಿನೇರ್ಗಳದ್ದು ಶ್ರಮ ಸ್ವಭಾವ
ಚೀನಾದ ಬಿಳಿಯನೇರ್ಗಳು ಶ್ರಮಕ್ಕೆ ಅತಿಹೆಚ್ಚು ಒತ್ತು ಕೊಡುತ್ತಾರೆ. ಕೂಡ ಚೀನಾದಿಂದ ಹೊರಗೆ ಹೋಗಬೇಕು, ಹಾಂಕಾಂಗ್ ನಲ್ಲೋ ಮತ್ತೆಲ್ಲ ಏನಾದರೂ ಮಾಡಬೇಕು ಎಂದು ಹಾತೊರೆಯುತ್ತಿರುತ್ತಾರೆ’ ಎನ್ನುತ್ತಾರೆ.
ಅರಬ್ಬರದ್ದು ಬೇರೆಯದೇ ಸ್ತರ
ಅರಬ್ ಬಿಲಿಯನೇರ್ಗಳನ್ನು ನೋಡಿದಾಗ ಅವರು ಏನೂ ಕೆಲಸ ಮಾಡುತ್ತಾರೆ ಅಂತ ಅನಿಸೋದಿಲ್ಲ. ವಾಸ್ತವವಾಗಿ ಅವರು ಸಾಕಷ್ಟು ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಅನ್ನು ಸಿದ್ಧಿಸಿಕೊಂಡಿದ್ದಾರೆ. ಬ್ಯುಸಿನೆಸ್ಗಳನ್ನು ತಾವೇ ನಿಂತು ನಿಭಾಯಿಸುವುದಿಲ್ಲ. ಅದಕ್ಕೆಂದೇ ಅಸಾಧಾರಣ ತಂಡಗಳನ್ನು ಕಟ್ಟಿ ಎಲ್ಲವನ್ನೂ ನಿಭಾಯಿಸುತ್ತಾರೆ. ಅವರು ಬ್ಯುಸಿನೆಸ್ ನಿರ್ವಹಣೆಗೆ ಸಮರ್ಪಕವಾದ ವ್ಯವಸ್ಥೆ ನಿರ್ಮಿಸಿ, ಅದನ್ನು ನಿರ್ವಹಿಸಬಲ್ಲ ಸಮರ್ಥ ತಂಡಗಳನ್ನು ಕಟ್ಟುತ್ತಾರೆ. ಹೀಗಾಗಿ, ಅವರಿಗೆ ಹೆಚ್ಚು ಸಮಯ ಇದ್ದಂತೆ ಅನಿಸುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ