ಬೆಂಗಳೂರು, (ನವೆಂಬರ್ 17): ರಾಜ್ಯ ಸಚಿವ ಸಂಪುಟ ಪುನಾರಚನೆ (ಕರ್ನಾಟಕ ಸಚಿವ ಸಂಪುಟ ಪುನಾರಚನೆ) ಕುರಿತು ನಡೆಯುತ್ತಿರುವ ಚರ್ಚೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು, ರಾಜ್ಯದಲ್ಲಿ ಘಟಿಸಬಹುದೆಂದು ನಿರೀಕ್ಷಿಸಲಾಗುತ್ತಿರುವ ನವೆಂಬರ್ ಕ್ರಾಂತಿ ಹೌದು.. ದೆಹಲಿಯಲ್ಲಿ ಸಂಪುಟ ಪುನರ್ ರಚನೆಯ ಚರ್ಚೆ ಏನೋ ಮುನ್ನಲೆಗೆ ಬಂದಿದೆ. ಆದರೆ ರಾಜ್ಯ ಸರ್ಕಾರ ಹಾಗೂ ನಾಯಕರು ಅಂದುಕೊಂಡಷ್ಟು ರಚನೆ ಮಾಡೋದು ಸುಲಭನಾ ಎಂದು ಮುಂದಿರವ ಪ್ರಶ್ನೆ. ಯಾಕಂದ್ರೆ ಸಂಪುಟ ಸರ್ಜರಿ ಮಾಡುವುದು ಅಂದ್ರೆ ಅದೊಂತರ ಜೇನುಗೂಡಿಗೆ ಕೈಹಾಕಿದಂತೆ. ಕೊಂಚ ಯಾಮಾರಿದ್ರೂ ಸಂಕಷ್ಟ, ಪಕ್ಷಕ್ಕೆ ಸಂಕಟ ಕಟ್ಟಿಟ್ಟ ಬುತ್ತಿ. ಹೀಗಿರುವಾಗ ಸಂಪುಟ ರಚನೆ ಸದ್ಯ ಮಾತುಕತೆಗೆ ಸೀಮಿತವಾಗಿದೆ ರಾಜಕೀಯ ಪಡಸಾಲೆಯ ವಿಶ್ಲೇಷಣೆ. ಇನ್ನೊಂದೆಡೆ ಸಿದ್ದರಾಮಯ್ಯ ಸಿಎಂ ಅವರೇನೋ ಸಂಪುಟ ಪುನರ್ ರಚನೆ ಮಾಡ್ತೀವಿ ಅನ್ನೋ ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬೆಳವಣಿಗೆಯ ಸುತ್ತ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಸಂಪುಟದ ಸುತ್ತ ಪ್ರಶ್ನೆಗಳ ಹುತ್ತ
ಸಂಪುಟ ಪುನರ್ ರಚನೆ ಮಾಡಿದ್ರೆ ಎಷ್ಟು ಜನರನ್ನ ಕೈಬಿಡಬೇಕು. ಯಾರನ್ನ ಸಂಪುಟದಿಂದ ತೆಗೆಯಬೇಕು. ತೆಗೆಯೋದಕ್ಕೆ ಸರ್ಕಾರ ಅನುಸರಿಸುವ ಯಾವುದಾದರೂ ಪ್ರಶ್ನೆ ಮೂಡುತ್ತೆ.ನಿಮ್ಮ ಪ್ರದರ್ಶನವಿಲ್ಲ ಅಂತಾರಾ? ಜಾತಿ ಸಮೀಕರಣದ ಲೆಕ್ಕ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಪ್ರಸ್ತಾಪ ಮುಂದಿಟ್ಟು ಪುನರ್ ರಚನೆ ಮಾಡುತ್ತಾರಾ ಎಂದು ಸರ್ಕಾರದ ಮುಂದಿರುವ ಚಾಲೆಂಜ್.
ಇದನ್ನೂ ಓದಿ: ದಿಲ್ಲಿ ಯಾತ್ರೆ ಮುಗಿಸಿ ಬೆಂಗಳೂರಿನತ್ತ ಡಿಕೆ ಶಿವಕುಮಾರ್: ನವೆಂಬರ್ ಕ್ರಾಂತಿನಾ? ಶಾಂತಿನಾ?
ನವೆಂಬರ್ ಕ್ರಾಂತಿಯಲ್ಲಿ ಶಾಂತಿ
ಈಗ ಖರ್ಗೆ ಸಂಪುಟ ರಚನೆಗೆ ಒಪ್ಪಿಗೆ ಕೊಟ್ಟರೂ ಈ ಕ್ಷಣಕ್ಕೆ ಬದಲಾವಣೆ ಆಗಿಬಿಡುತ್ತೆ ಎನ್ನಲಾಗಲ್ಲ. ಯಾಕಂದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಪಟ್ಟಿ ರೆಡಿ ಮಾಡಬೇಕು. ಪಟ್ಟಿಯನ್ನ ತೆಗೆದುಕೊಂಡು ಹೋಗಿ ಖರ್ಗೆ ಅವರೊಂದಿಗೆ ಚರ್ಚಿಸಬೇಕು. ಇದಾದ ಬಳಿಕ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಮಾತುಕತೆ ನಡೆಸಿದರು. ಇದಿಷ್ಟೇ ಅಲ್ಲ ಯಾವುದೇ ಸಂಪುಟ ರಚನೆ ಮಾಡ್ಬೇಕಾದ್ರೂ ಪಕ್ಷದ ಅಧ್ಯಕ್ಷರ ಅಭಿಪ್ರಾಯ ಅತ್ಯಗತ್ಯ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಬೇಕು. ಆಗ ಡಿಕೆ ತಮ್ಮ ಬೆಂಬಲಿಗರ ಪಟ್ಟಿಯನ್ನೂ ಕೊಡುವ ಸಾಧ್ಯತೆ ಇದೆ.ಇದೆಲ್ಲ ಮುಗಿಯೋದಕ್ಕೆ ಏನಿಲ್ಲ ಅಂದ್ರು 15 ದಿನ ಬೇಕು.. ಆದರೆ 15 ದಿನ ಮುಗಿದರೂ ಸಂಪುಟ ರಚನೆ ಆಗುವುದು ಅನುಮಾನ.
ಸರ್ಕಾರದ ಮುಂದಿನ ಸವಾಲೇನು?
13 ದಿನ ಕಳೆದರೆ ನವೆಂಬರ್ ದಾಟಿ ಡಿಸೆಂಬರ್‌ಗೆ ಎಂಟ್ರಿಯಾಗ್ತೀವಿ. ಡಿಸೆಂಬರ್ 1 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ರಾಜ್ಯದಲ್ಲಿಯೂ 8ರಿಂದ ಬೆಳಗಾವಿ ಅಧಿವೇಶನ ಪ್ರಾರಂಭವಾಗಲಿದೆ, 19ರವರೆಗೆ ಕಲಾಪ ಡಿಸೆಂಬರ್ ಡಿಸೆಂಬರ್. ಇದರ ನಡುವೆ ಸಂಪುಟ ಪುನಾರಚನೆ ಮಾಡಲು ಸಾಧ್ಯವಿಲ್ಲ. ಇದಾದ ಬಳಿಕ ಹೊಸ ವರ್ಷ ಶುರು. ಸಂಕ್ರಾಂತಿ ಸಂಭ್ರಮ ಮನೆ ಮಾಡಿರುತ್ತದೆ. ಬೆನ್ನಲ್ಲೇ ಹಬ್ಬದ ತಯಾರಿ ಕಾರ್ಯ ಶುರು. ಹೀಗಿರುವಾಗ, ಸಂಪುಟ ಪುನರಾಚನೆ ಸಾಧ್ಯನಾ ಅನ್ನೋದು ಇಲ್ಲಿರುವ ಮೂಲ ಪ್ರಶ್ನೆ. ಈ ನಡುವೆ ಗಾಂಧಿ ಪರಿವಾರ ಸಿಎಂ ಸಂಪುಟ ಪ್ರಸ್ತಾಪ ಮಾಡಿದ್ದಕ್ಕೆ ಹುನೂ ಅಂದಿಲ್ಲ. ಉಹುನೂ ಅಂದಿಲ್ಲ. ಹೀಗಾಗಿ ರಾಹುಲ್ ಗಾಂಧಿಯ ಸೂಚನೆ ಒಳಾರ್ಥವನ್ನ ನಾಯಕರೇ ಡಿಕೋಡ್ ಮಾಡಬೇಕಿದೆ.
ಮೊದಲಾಗಿದ್ರೆ ಸಿಎಂ ಸಿದ್ದರಾಮಯ್ಯ ಒಬ್ಬರೇ ಪವರ್ ಸೆಂಟರ್. ಆದರೆ ಈಗ ರಾಜಕೀಯ ಸನ್ನಿವೇಶ ಬದಲಾಗಿದೆ. ಡಿಕೆ ಶಿವಕುಮಾರ್ ಒಂದು ಪವರ್ ಸೆಂಟರ್ ಆಗಿದ್ರೆ, ಖರ್ಗೆ ದೆಹಲಿಯಲ್ಲಿ ಕೂತಿದ್ದಾರೆ. ಈ ಮೂರು ಶಕ್ತಿ ಕೇಂದ್ರಗಳ ಹೊಂದಾಣಿಕೆ ಕಾಂಗ್ರೆಸ್ ಪಾಲಿಗೆ ಅತ್ಯಗತ್ಯ. ಒಂದ್ವೇಳೆ ಹೊಂದಾಣಿಕೆಯಾದರೂ ದೆಹಲಿಯಲ್ಲಿ ಶುರುವಾಗುವ ಕೋಟಾ ಹಾಗೂ ಲಾಬಿ ಆಟಕ್ಕೆ ಇಂತಿಷ್ಟೇ ಸಮಯ ಅಂತಿರಲ್ಲ.
ಇನ್ನು ಸಚಿವ ಸಂಪುಟದ ವಿಚಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಹೊಸ ಅರ್ಥ ಕಲ್ಪಿಸಿದ್ದಾರೆ. ಸಂಪುಟ ಪುನರ್ ರಚನೆ ಮೇಲೆ ಸಿಎಂ ಕುರ್ಚಿ ಆಟ ನಿಂತಿರೋದಾಗಿ ಹೇಳಿಕೆ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಸಚಿವ ಸಂಪುಟ ಸದ್ಯಕ್ಕಂತೂ ಪುನರ್ ರಚನೆಯಾಗಿರುವುದು ಖಚಿತ. ಹೀಗಾಗಿ ಶಾಂತಿಯಲ್ಲೇ ನವೆಂಬರ್ ಕ್ರಾಂತಿ ಅಂತ್ಯ.