‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಜಾಹ್ನವಿ (ಜಾಹ್ನವಿ) ಮತ್ತು ಅಶ್ವಿನಿ ಗೌಡ ಅವರು ತುಂಬಾ ಸ್ನೇಹ ಬೆಳೆಸಿದ್ದರು. ನಂತರ ಅವರಿಬ್ಬರ ನಡುವಿನ ಸಂಬಂಧ ಮುರಿದು ಬಿದ್ದಿತ್ತು. ಆದರೆ ಈಗ ಅವರು ಮತ್ತೆ ಒಂದಾಗಿದ್ದಾರೆ. ಜಗಳ ಮಾಡಿಕೊಳ್ಳುವುದು ಕೂಡ ತಮ್ಮ ಪ್ಲ್ಯಾನ್ ಇದೆ ಅಶ್ವಿನಿ ಗೌಡ (ಅಶ್ವಿನಿ ಗೌಡ) ಅವರು ಬಾಯಿ ಬಿಟ್ಟಿದ್ದರು ಎಂಬುದು ಬೇರೆ ಮಾತು. ಅದೇನೇ ಇರಲಿ, ಈಗ ಅವರಿಬ್ಬರು ಪರಸ್ಪರ ದೃಷ್ಟಿ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಮೇಲೆ ಯಾರದ್ದೇ ಕಣ್ಣು ಬಿದ್ದಿದ್ದರೂ ಹೊರಟು ಹೋಗಲಿ ಎಂದು ಎಲ್ಲರ ಹೆಸರು ಹೇಳಿ ದೃಷ್ಟಿ ತೆಗೆದುಕೊಂಡಿದ್ದಾರೆ. ಇದನ್ನು ಕಂಡು ರಘು ಅವರಿಗೆ ಅಚ್ಚರಿ ಆಗಿದೆ. ನವೆಂಬರ್ 17 ರ ಎಪಿಸೋಡ್ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿ ಹಾಗೂ ‘ಜಿಯೋ ಹಾಟ್ ಸ್ಟಾರ್’ ಒಟಿಟಿಯಲ್ಲಿ ಪೂರ್ತಿ ಸಂಚಿಕೆ ಪ್ರಸಾರ ಆಗಲಿದೆ. ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿ ಹೊರಗೆ ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ ಸೀಸನ್ 12) ಆಟದಲ್ಲಿ ಈಗ 50 ದಿನಗಳು ಕಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.