Headlines

ಅಶ್ವಿನಿ-ಜಾನ್ವಿ ಕಳ್ಳಾಟಕ್ಕೆ ತಾಳ್ಮೆ ಕಳೆದುಕೊಂಡ ಬಿಗ್ ಬಾಸ್; ಇಷ್ಟೆಲ್ಲ ಆದರೂ ನಗು

ಅಶ್ವಿನಿ-ಜಾನ್ವಿ ಕಳ್ಳಾಟಕ್ಕೆ ತಾಳ್ಮೆ ಕಳೆದುಕೊಂಡ ಬಿಗ್ ಬಾಸ್; ಇಷ್ಟೆಲ್ಲ ಆದರೂ ನಗು


ಅಶ್ವಿನಿ ಗೌಡ ಹಾಗೂ ಆಯಂಕರ್ ಜಾನ್ವಿ ಕಳೆದ ವಾರವಷ್ಟೇ ಸುದೀಪ್ ಅವರಿಂದ ಬೈಸಿಕೊಂಡಿದ್ದರು. ಇದಕ್ಕೆ ಕಾರಣ ಆಗಿದ್ದು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದು. ಸುದೀಪ್ ಬೈದು ಕೆಲವೇ ಗಂಟೆಗಳಲ್ಲಿ ಅಶ್ವಿನಿ ಹಾಗೂ ಜಾನ್ವಿ ತಪ್ಪು ಮಾಡಿದ್ದಾರೆ. ಸಾಮಾನ್ಯವಾಗಿ ತಪ್ಪು ಮಾಡಿದರೆ ಕೆಲವರಿಗೆ ಪಶ್ಚಾತ್ತಾಪ ಆಗುತ್ತದೆ, ನಾಚಿಕೆ ಆಗುತ್ತದೆ. ಆದರೆ, ಇವರ ಮುಖದಲ್ಲಿ ಅದ್ಯಾವುದೂ ಕಾಣಿಸಲೇ ಇಲ್ಲ. ಇಬ್ಬರು ಹಾಯಾಗಿ ನಗುತ್ತಿದ್ದರು. ಇದರಿಂದ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡರು.

ಎಲಿಮಿನೇಷನ್ ಎಪಿಸೋಡ್ ಮುಗಿದ ಬಳಿಕ ಜಾನ್ವಿ ಹಾಗೂ ಅಶ್ವಿನಿ ಚೇಂಜಿಂಗ್ ರೂಂಗೆ ತೆರಳಿದರು. ಈ ವೇಳೆ ಜಾನ್ವಿ ಹಾಗೂ ಅಶ್ವಿನಿ ಪಿಸುಧ್ವನಿಯಲ್ಲಿ. ಆ ಕೂಡಲೇ ಬಿಗ್ ಬಾಸ್ ಈ ಬಗ್ಗೆ ಎಚ್ಚರಿಕೆ ಚೇಂಜಿಂಗ್ ರೂಂನಿಂದ ಹೊರ ಬರುವಂತೆ ಸೂಚಿಸಿದರು. ಮರುದಿನ ಬಿಗ್ ಬಾಸ್ ಎಲ್ಲರನ್ನೂ ಕರೆದು ವಿಟಿ ಕೂಡ ತೋರಿಸಿದರು.

ಸಾಮಾನ್ಯವಾಗಿ ಜಾನ್ವಿ ಅವರು ತಪ್ಪು ಮಾಡಿ ತಾವು ತಪ್ಪೇ ಮಾಡಿಲ್ಲ ಎಂದು ಹೇಳುವ ಅಭ್ಯಾಸ ಬೆಳೆಸಿದ್ದಾರೆ. ಈ ಕಾರಣದಿಂದಲೇ ಮನೆ ಮಂದಿಗೆ ಬಿಗ್ ಬಾಸ್ ವಿಟಿ ತೋರಿಸಿದರು. ಇದೆಲ್ಲ ಆದ ಬಳಿಕವೂ ಜಾನ್ವಿ ಹಾಗೂ ಅಶ್ವಿನಿ ಅವರು ಸ್ಪಷ್ಟನೆ ನೀಡಲು ಬಂದರು. ‘ಹುಕ್ ತೆಗೆಯುತ್ತಾ ಇದ್ದೆವು. ನಾವು ಬೇಕಂತಲೇ ಈ ರೀತಿ ಮಾಡಿಲ್ಲ’ ಎಂದ ಜಾನ್ವಿ. ಬಿಗ್ ಬಾಸ್ ಬಯ್ಯ ಇದ್ದಾರೆ.

ಇದನ್ನೂ ಓದಿ: ಸುದೀಪ್ ಮಾತಿಗೂ ಬೆಲೆ ಕೊಡದ ಜಾಹ್ನವಿ, ಅಶ್ವಿನಿ ಗೌಡ: ಮನೆ ದಾರಿ ನೆನಪಿಸಿದ ಬಿಗ್ ಬಾಸ್

ತಾಳ್ಮೆ ಕಳೆದುಕೊಂಡ ಬಿಗ್ ಬಾಸ್ ಜಾನ್ವಿ ಹಾಗೂ ಅಶ್ವಿನಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದಕ್ಕೆ ಬಿಗ್ ಬಾಸ್ ಕೊಟ್ಟ ಶಿಕ್ಷೆ ಇದೆ. ‘ನಾವು ಅಷ್ಟೆಲ್ಲ ದೊಡ್ಡ ತಪ್ಪು ಮಾಡಿಯೇ ಇಲ್ಲ’ ಎಂದು ಸ್ಪಷ್ಟನೆ ನೀಡೋಕೆ ಬಂದಿದ್ದಾರೆ. ಆದರೆ,ಇದೆಲ್ಲವೂ ಕಿವಿಗೆ ಹಾಕಿಕೊಂಡೇ ಇಲ್ಲ. ಉದ್ಧಟತನ ತೋರಿದ್ದಕ್ಕೆ, ಕಳ್ಳಾಟ ಆಡಿದ್ದಕ್ಕೆ ಸುದೀಪ್ ಮತ್ತೆ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ಅನೇಕರ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *