ರಾಜಮೌಳಿ (ರಾಜಮೌಳಿ) ಅವರು ಪ್ರತಿ ಸಿನಿಮಾದಿಂದ ಸಿನಿಮಾಗೆ ಅದ್ದೂರಿತನವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ‘ಬಾಹುಬಲಿ’ ಸಿನಿಮಾ ಹಿಟ್ ಆದ ಬಳಿಕ ‘ಬಾಬುಬಲಿ 2’ ಸಿನಿಮಾ ಮತ್ತಷ್ಟು ಅದ್ದೂರಿಯಾಗಿ ತಂದರು. ‘ಆರ್ಆರ್ಆರ್’ ಚಿತ್ರದ ಪ್ರಚಾರಕ್ಕೆ ಅವರು ಮಾಡಿದ ತಂತ್ರಗಳು ಒಂದೆರಡಲ್ಲ. ಈಗ ‘ವಾರಾಣಸಿ’ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಇದರ ಟೈಟಲ್ ಟೀಸರ್ ಲಾಂಚ್ಗೆ ಅದ್ದೂರಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಈ ಈವೆಂಟ್ ಗೆ ಖರ್ಚಾದ ಹಣ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ.
ರಾಜಮೌಳಿ ಅವರು ಇದೇ ಮೊದಲ ಬಾರಿಗೆ ಟಾಲಿವುಡ್ ನಟ ಮಹೇಶ್ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ಅದ್ದೂರಿ ಈವೆಂಟ್ ಮಾಡಲಾಗಿದೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಈವೆಂಟ್ಗೆ ಸಾವಿರಾರು ಮಂದಿ ಸೇರಿದ್ದರು. ಯಾರಿಗೂ ತೊಂದರೆ ಆಗದಂತೆ ಈವೆಂಟ್ ಸೂಚಿಸಿದೆ. ಇದಕ್ಕೆ ಖರ್ಚಾಗಿದ್ದರೆ ಬರೋಬ್ಬರಿ 27 ಕೋಟಿ ರೂಪಾಯಿ.
ರಾಜಮೌಳಿ ಅವರು ಈವೆಂಟ್ಗೆ ಸಾಕಷ್ಟು ದಿನಗಳ ಸಿದ್ಧತೆ ಮಾಡಿಕೊಂಡಿದ್ದರು. ನಿರ್ಮಾಣಕ್ಕೆ, ಎಲ್ಇಡಿ ವೇದಿಕೆ ತೆರೆಯಲು 8 ಕೋಟಿ ರೂಪಾಯಿ ಖರ್ಚಾಗಿದೆ. ಇನ್ನು, ಜಾಗದ ಬಾಡಿಗೆ, ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಿಂದ ಕರೆಸಿ, ಅವರಿಗೆ ಹೋಟೆಲ್ನಲ್ಲಿ ವಾಸ್ತವ್ಯ, ಉಳಿದ ಕಲಾವಿದರು ಹಾಗೂ ತಂತ್ರಜ್ಞರ ವಾಸ್ತವ್ಯ, ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಆಹ್ವಾನ ಉಳಿದ ಖರ್ಚು 18 ಕೋಟಿ ರೂಪಾಯಿ ವೆಚ್ಚವಾಗಿದೆ. ಶ್ರುತಿ ಹಾಸನ್ ಅವರು ಹಾಡಿದ್ದಕ್ಕೆ ಮತ್ತು ಸ್ಟೇಜ್ ಪರ್ಮೆನ್ಸ್ ಗೆ 1 ಕೋಟಿ ಚಾರ್ಜ್ ಮಾಡಿದ್ದಾರೆ. ಈ ಮೂಲಕ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಒಟ್ಟು ಹಣ 27 ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ವಾರಣಾಸಿ’ ಈವೆಂಟ್ನಲ್ಲಿ ಹಿಂದೂ ದೇವರ ಬಗ್ಗೆ ರಾಜಮೌಳಿ ಟೀಕೆ; ಸಿನಿಮಾ ಬ್ಯಾನ್ ಮಾಡಲು ಆಗ್ರಹ
ರಾಜಮೌಳಿ ಅವರು ಈವೆಂಟ್ಗೆ ಖರ್ಚು ಮಾಡಿದ ಹಣದಲ್ಲಿ ಒಂದು ದೊಡ್ಡ ಬಜೆಟ್ ಸಿನಿಮಾ ಮಾಡಬಹುದಿತ್ತು ಎಂದು ಅನೇಕರು ಹೇಳಿದ್ದಾರೆ. ಈ ಮೊದಲು ‘ಆರ್ ಆರ್ ಆರ್’ ಸಿನಿಮಾ ರಿಲೀಸ್ ಆದ ಬಳಿಕ ಚಿತ್ರವನ್ನು ಆಸ್ಕರ್ ರೇಸ್ ಗೆ 5-10 ಕೋಟಿ ರೂಪಾಯಿ ಖರ್ಚು ಮಾಡಿದೆ. ಈಗ ಸಿನಿಮಾ ಆರಂಭದಲ್ಲೇ ಹಣವನ್ನು ನೀರಿನಂತೆ ವ್ಯಯಿಸಲಾಗುತ್ತಿದೆ. ಈ ಸಿನಿಮಾದ ಬಜೆಟ್ 1000 ಕೋಟಿ ರೂಪಾಯಿ. 2027ರಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.