Headlines

Delhi Blast: ‘ಹುತಾತ್ಮರಾಗುವ ಮಾರ್ಗ ಆತ್ಮಾ*ಹುತಿ ದಾಳಿ..’ ಟೆರರ್‌ ಡಾಕ್ಟರ್‌ ಉಮರ್‌ ವಿಡಿಯೋ ವೈರಲ್‌ | Delhi Red Fort Blast Terrorist Umar Video Hamas Style Attack Plan San

Delhi Blast: ‘ಹುತಾತ್ಮರಾಗುವ ಮಾರ್ಗ ಆತ್ಮಾ*ಹುತಿ ದಾಳಿ..’ ಟೆರರ್‌ ಡಾಕ್ಟರ್‌ ಉಮರ್‌ ವಿಡಿಯೋ ವೈರಲ್‌ | Delhi Red Fort Blast Terrorist Umar Video Hamas Style Attack Plan San



Delhi Blast: ‘ಹುತಾತ್ಮರಾಗುವ ಮಾರ್ಗ ಆತ್ಮಾ*ಹುತಿ ದಾಳಿ..’ ಟೆರರ್‌ ಡಾಕ್ಟರ್‌ ಉಮರ್‌ ವಿಡಿಯೋ ವೈರಲ್‌ | Delhi Red Fort Blast Terrorist Umar Video Hamas Style Attack Plan San

ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಆತ್ಮಹ*ತ್ಯಾ ದಾಳಿ ನಡೆಸಿದ್ದ ಭಯೋತ್ಪಾದಕ ಡಾ. ಉಮರ್, ಸ್ಫೋಟಕ್ಕೂ ಮುನ್ನ ವಿಡಿಯೋವೊಂದನ್ನು ಚಿತ್ರೀಕರಿಸಿದ್ದನು. ಇದರಲ್ಲಿ ಆತ ತನ್ನ ಕೃತ್ಯವನ್ನು ‘ಹುತಾತ್ಮ ಕಾರ್ಯಾಚರಣೆ’ ಎಂದು ಕರೆದಿದ್ದಾನೆ.

ನವದೆಹಲಿ (ನ.18): ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಆತ್ಮಹ*ತ್ಯಾ ದಾಳಿ ನಡೆಸಿದ ಭಯೋತ್ಪಾದಕ ಡಾ. ಉಮರ್ ಅವರ ಹೊಸ ವಿಡಿಯೋವೊಂದು ಬೆಳಕಿಗೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಭಯೋತ್ಪಾದಕ ಸ್ಫೋಟಕ್ಕೂ ಮುನ್ನ ಈ ವಿಡಿಯೋವನ್ನು ಚಿತ್ರೀಕರಿಸಿದ್ದ. ಅದರಲ್ಲಿ, ಅವರು ಆತ್ಮಹ*ತ್ಯಾ ದಾಳಿಯ ಬಗ್ಗೆ ಚರ್ಚೆ ಮಾಡಿದ್ದಾರೆ. ಇದು ಅವರು ಆತ್ಮಹ*ತ್ಯಾ ದಾಳಿಯನ್ನು ಮುಂಚಿತವಾಗಿ ಯೋಜಿಸುತ್ತಿದ್ದರು ಎಂದು ಸೂಚಿಸಿದೆ.

ವೀಡಿಯೊದಲ್ಲಿ, ಒಮರ್ ತಮ್ಮ ಹುರುಕು ಮುರುಕು ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾನೆ. ಇದರಲ್ಲಿ ಆತ, “ಇದು ಆತ್ಮಹತ್ಯಾ ದಾಳಿಯಲ್ಲ, ಹುತಾತ್ಮ ಕಾರ್ಯಾಚರಣೆ ಎನ್ನುವುದು ಎಲ್ಲರಿಗೂ ಅರ್ಥವಾಗಲಿ. ಇದಕ್ಕೆ ಸಂಬಂಧಿಸಿದಂತೆ ಹಲವು ವಿರೋಧಾಭಾಸಗಳಿವೆ. ವಾಸ್ತವವಾಗಿ, ಹುತಾತ್ಮ ಕಾರ್ಯಾಚರಣೆಗೆ ಒಬ್ಬ ವ್ಯಕ್ತಿಯು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ತನ್ನ ಪ್ರಾಣವನ್ನು ತೆಗೆದುಕೊಳ್ಳಬೇಕಾಗುತ್ತದೆ’ ಎಂದಿದ್ದಾನೆ.

ಡಾ. ಉಮರ್ ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರನ್ನು ಬಳಸಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದ. ಈ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಲಾಗಿದೆ, ಅವರಲ್ಲಿ ಆರು ಮಂದಿ ವೈದ್ಯರು. ಮಾಡ್ಯೂಲ್ ಮತ್ತು ಅದರ ತಾಂತ್ರಿಕ ಬೆಂಬಲ ಜಾಲದ ಉಳಿದ ಸದಸ್ಯರನ್ನು ಗುರುತಿಸಲು ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿವೆ.

ಡ್ರೋನ್‌ ಮತ್ತು ರಾಕೆಟ್‌ನಿಂದ ದಾಳಿಗೆ ಯೋಜನೆ

ಈ ನಡುವೆ ದಾಳಿಯ ತನಿಖೆಯ ಸಮಯದಲ್ಲಿ ಸೋಮವಾರ ರಾತ್ರಿ ಒಂದು ಪ್ರಮುಖ ಸಂಗತಿ ಬಹಿರಂಗವಾಗಿದೆ. ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಆರಂಭದಲ್ಲಿ ಡ್ರೋನ್‌ಗಳು ಮತ್ತು ರಾಕೆಟ್‌ಗಳನ್ನು ಬಳಸಿಕೊಂಡು ಹಮಾಸ್ ಶೈಲಿಯ ದಾಳಿಯನ್ನು ನಡೆಸಲು ಉದ್ದೇಶಿಸಿತ್ತು ಎಂದು NIA ಬಹಿರಂಗಪಡಿಸಿದೆ. ಈ ಯೋಜನೆಯು ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಆಧರಿಸಿದೆ.

ಆತ್ಮಹತ್ಯಾ ಬಾಂಬರ್ ಡಾ. ಉಮರ್-ಉನ್-ನಬಿಯ ಮತ್ತೊಬ್ಬ ಸಹಚರ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಬಂಧನದ ನಂತರ NIA ಈ ಮಾಹಿತಿಯನ್ನು ಪಡೆದುಕೊಂಡಿದೆ. ಡ್ಯಾನಿಶ್ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿ. ನಾಲ್ಕು ದಿನಗಳ ಹಿಂದೆ ಶ್ರೀನಗರದಲ್ಲಿ NIA ಆತನನ್ನು ಬಂಧಿಸಿದ್ದು, ಸೋಮವಾರ ಬಂಧನದ ಔಪಚಾರಿಕ ಕೆಲಸವನ್ನು ಪೂರೈಸಿದೆ.

NIA ಪ್ರಕಾರ, ಡ್ಯಾನಿಶ್ ಸಣ್ಣ ಡ್ರೋನ್ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಮತ್ತು ಮಾರ್ಪಡಿಸುವಲ್ಲಿ ತಾಂತ್ರಿಕ ಅನುಭವವನ್ನು ಹೊಂದಿದ್ದ. ಆತ ಡಾ. ಉಮರ್‌ಗೆ ತಾಂತ್ರಿಕ ನೆರವು ನೀಡಿದ್ದ ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲು ಡ್ರೋನ್‌ಗಳು ಮತ್ತು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದ. ಗರಿಷ್ಠ ಸಾವುನೋವುಗಳನ್ನು ಉಂಟುಮಾಡಲು ಜನದಟ್ಟಣೆಯ ಪ್ರದೇಶಗಳಲ್ಲಿ ಡ್ರೋನ್‌ಗಳಿಂದ ಬಾಂಬ್‌ಗಳನ್ನು ಹಾಕುವ ಯೋಜನೆಯಲ್ಲಿ ಡ್ಯಾನಿಶ್ ಕೆಲಸ ಮಾಡಿದ್ದ ಎಂದು ಸಂಸ್ಥೆ ತಿಳಿಸಿದೆ.

10 ದಿನ ಎನ್‌ಐಎ ಕಸ್ಟಡಿಗೆ ಡಾ.ಅಮಿರ್‌

ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಸೋಮವಾರ ಸ್ಫೋಟದ ಪ್ರಮುಖ ಆರೋಪಿ ಅಮೀರ್ ರಶೀದ್ ಅಲಿಯನ್ನು 10 ದಿನಗಳ NIA ಕಸ್ಟಡಿಗೆ ನೀಡಿದೆ. ಏಜೆನ್ಸಿಯ ಪ್ರಕಾರ, ಪ್ಯಾಂಪೋರ್ ನಿವಾಸಿ ಅಮೀರ್, ಡಾ. ಉಮರ್ ಜೊತೆ ಸಂಪರ್ಕ ಹೊಂದಿದ್ದ ಕೊನೆಯ ವ್ಯಕ್ತಿಯಾಗಿದ್ದ. ಸ್ಫೋಟದಲ್ಲಿ ಬಳಸಲಾದ ಕಾರನ್ನು ಅಮೀರ್ ಹೆಸರಿನಲ್ಲಿ ನೋಂದಾಯಿಸಲಾಗಿತ್ತು ಮತ್ತು ಅದನ್ನು ಖರೀದಿಸಲು ಆತ ದೆಹಲಿಗೆ ಬಂದಿದ್ದ. ಆಮಿರ್ ನನ್ನು ಭಾನುವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *