ಚುನಾವಣೆಯಲ್ಲಿ ಸೋತಿದ್ದು ಅಪರಾಧವಲ್ಲ, ತಮಗೆ ತಾವೇ ಸಮಾಧಾನ ಮಾಡಿಕೊಂಡ ಪ್ರಶಾಂತ್ ಕಿಶೋರ್

ಚುನಾವಣೆಯಲ್ಲಿ ಸೋತಿದ್ದು ಅಪರಾಧವಲ್ಲ, ತಮಗೆ ತಾವೇ ಸಮಾಧಾನ ಮಾಡಿಕೊಂಡ ಪ್ರಶಾಂತ್ ಕಿಶೋರ್


ಪಾಟ್ನಾ, ನವೆಂಬರ್ 18: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆ ಫಲಿಸದೆ ಪ್ರಶಾಂತ್ ಕಿಶೋರ್(ಪ್ರಶಾಂತ್ ಕಿಶೋರ್) ನೇತೃತ್ವದ ಜನ್ ಸುರಾಜ್ ಪಕ್ಷ ಹೀನಾಯ ಸೋಲು ಕಂಡಿತ್ತು. ಬೇರೆಲ್ಲಾ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ಹೇಳಿಕೊಟ್ಟಿದ್ದ ಪ್ರಶಾಂತ್ ತಮ್ಮ ಪಕ್ಷವನ್ನೇ ಗೆಲ್ಲಿಸುವಲ್ಲಿ ಸೋತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.

ಇದೀಗ ಪ್ರಶಾಂತ್ ಕಿಶೋರ್ ಈ ಬಗ್ಗೆ ಮಾತನಾಡಿದ್ದು, ಚುನಾವಣೆಯಲ್ಲಿ ಸೋತಿದ್ದು ಅಪರಾಧವಲ್ಲ, ನಮ್ಮ ತಪ್ಪು ಏನಾಗಿದೆ ಎಂದು ಹುಡುಕಿ ತಿದ್ದಿಕೊಂಡು ಮುನ್ನುಗ್ಗುವ ಪ್ರಯತ್ನ ಮಾಡುತ್ತಿದೆ. ಚುನಾವಣಾ ಸಮಯದಲ್ಲಿ ತಮ್ಮ ಪಕ್ಷವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿತ್ತು ಆದರೂ ವಿಫಲವಾಗಿದೆ. ತಮ್ಮ ಪಕ್ಷವು ಹಿನ್ನಡೆಯನ್ನು ಅನುಭವಿಸಿದೆ ಆದರೆ ತಪ್ಪುಗಳನ್ನು ಸರಿಪಡಿಸಿ ಮುನ್ನುಗ್ಗುತ್ತದೆ ಆದರೆ ವಾಪಸ್ ಹೋಗುವುದಿಲ್ಲ.

ಮತ್ತಷ್ಟು ಓದಿ: ತೇಜಸ್ವಿ ಯಾದವ್-ರೋಹಿಣಿ ಆಚಾರ್ಯ ನಡುವಿನ ಕಲಹ, ಲಾಲು ಪ್ರಸಾದ್ ಯಾದವ್ ಹೇಳಿದ್ದೇನು?

ನಾವು ನಮ್ಮ ಕಡೆಯಿಂದ ತುಂಬಾ ಸಕಾರಾತ್ಮಕವಾಗಿ ಪ್ರಯತ್ನಿಸಿದೆವು. ಈ ಸರ್ಕಾರವನ್ನು ಬದಲಾಯಿಸಲು ನಾವು ವಿಫಲರಾಗಿದ್ದೇವೆ. ನಮ್ಮ ಕಡೆಯಿಂದ ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ, ಆದರೆ ನಾವು ಎಲ್ಲೋ ವಿಫಲರಾಗಿದ್ದೇವೆ ಎಂದು ತಿಳಿದುಬಂದಿದೆ. ನಾನು ಎಲ್ಲಾ ಜನರಿಗೆ ನಾನು ವಿಫಲವಾದ ಕಾರಣ ಆಪಾದನೆಗಳನ್ನು ಮೇಲೆಯೇ ಹಾಕಿಕೊಳ್ಳುತ್ತೇನೆ.

ನಾವು ನಮ್ಮ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ನಮ್ಮ ಪ್ರಯತ್ನಗಳಲ್ಲಿ ನಾನು ವಿಫಲನಾದುದಕ್ಕೆ ವಿಷಾದಿಸುತ್ತೇನೆ. ನಾನು ಒಂದು ದಿನದ ಮೌನ ಉಪವಾಸ ಮಾಡುತ್ತೇನೆ ಎಂದು ಅವರು ಹೇಳಿದರು. ನಮ್ಮ ಕಡೆಯಿಂದ ತಪ್ಪುಗಳಾಗಿರಬಹುದು, ಯಾವುದೇ ಅಪರಾಧ ಮಾಡಿಲ್ಲ ಮತಗಳನ್ನು ಪಡೆಯದಿರುವುದು ಅಪರಾಧವಲ್ಲ ಎಂದು ಅವರು ಹೇಳಿದರು.

ನಾವು ಜಾತಿ ರಾಜಕೀಯ ಮಾಡಿಲ್ಲ ಅಥವಾ ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿಲ್ಲ, ನಾವು ಸಮಾಜದಲ್ಲಿ ವಿಷವನ್ನು ಹರಡಿಲ್ಲ. ಬಡ ಮತ್ತು ಮುಗ್ಧ ಜನರಿಂದ ಮತಗಳನ್ನು ಖರೀದಿಸುವ ಅಪರಾಧವನ್ನು ನಾವು ಮಾಡಿಲ್ಲ. ಹಾಗೆ ಮಾಡಿದವರು ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಎದುರಿಸುತ್ತಾರೆ.

ಬಿಹಾರದಲ್ಲಿ ಇಂಡಿ ಮೈತ್ರಿಕೂಟವನ್ನು ಎನ್‌ಡಿಎ ಸೋಲಿಸಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ, ಎನ್‌ಡಿಎ 202 ಸ್ಥಾನಗಳನ್ನು ಗೆದ್ದರೆ, ಆರ್‌ಜೆಡಿ 143 ಸ್ಥಾನಗಳಲ್ಲಿ ಕೇವಲ 25 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:56 pm, ಮಂಗಳವಾರ, 18 ನವೆಂಬರ್ 25



Source link

Leave a Reply

Your email address will not be published. Required fields are marked *