ಎನ್​​ಟಿಆರ್​-ನೀಲ್ ಸಿನಿಮಾ ನಿಂತಿದೆ ಎಂದವರಿಗೆ ರವಿ ಬಸ್ರೂರು ಕೊಟ್ಟರು ಉತ್ತರ

ಎನ್​​ಟಿಆರ್​-ನೀಲ್ ಸಿನಿಮಾ ನಿಂತಿದೆ ಎಂದವರಿಗೆ ರವಿ ಬಸ್ರೂರು ಕೊಟ್ಟರು ಉತ್ತರ


ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ (JR NTR) ಸಿನಿಮಾ ಬಗ್ಗೆ ಇತ್ತೀಚೆಗೆ ಒಂದು ಸುದ್ದಿ ಹರಿದಾಡಿತ್ತು. ಈ ಸಿನಿಮಾದ ದೃಶ್ಯಗಳ ಬಗ್ಗೆ ಜೂನಿಯರ್ ಎನ್ ಟಿಆರ್ ಗೆ ಖುಷಿ ಇಲ್ಲ ಎಂದು ಹೇಳಿದ್ದರು. ಈ ಕಾರಣದಿಂದಲೇ ಸಿನಿಮಾ ನಿಂತಿದೆ ಎಂದೂ ಹೇಳಲಾಗಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಕೊನೆಗೂ ಈ ವದಂತಿಗೆ ತೆರೆ ಬಿದ್ದಿದೆ. ಈ ಸಂಗೀತ ಸಂಯೋಜಕ, ಕನ್ನಡಿಗ ರವಿ ಬಸ್ರೂರು ಅವರು ಉತ್ತರ ಚಿತ್ರದ ಪ್ರಕಟಣೆ. ಆ ಬಗ್ಗೆ ಇಲ್ಲಿದೆ ವಿವರ.

ರವಿ ಬಸ್ರೂರು ಅವರು ಪ್ರಶಾಂತ್ ನೀಲ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ‘ಉಗ್ರಂ’ ಸಿನಿಮಾದಲ್ಲಿ ಇದೇ ಜೋಡಿ ಕೆಲಸ ಮಾಡಿತ್ತು. ‘ಕೆಜಿಎಫ್’ ಹಾಡು ಹಾಗೂ ಬಿಜಿಎಂ ಸಿನಿಮಾನ ಹಂತಕ್ಕೆ ಹೋಗಿತ್ತು. ಈ ಕಾರಣದಿಂದಲೇ ಪ್ರಶಾಂತ್ ನೀಲ್ ತಮ್ಮ ನಿರ್ದೇಶನದ ಸಿನಿಮಾಗಳ ಸಂಗೀತದ ಜವಾಬ್ದಾರಿಯನ್ನು ರವಿ ಬಸ್ರೂರು ಅವರಿಗೆ ಇದೆ. ಈಗ ರವಿ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿದ್ದಾರೆ.

‘ಜೂನಿಯರ್ ಎನ್ ಟಿಆರ್ ಹಾಗೂ ನೀಲ್ ಸಿನಿಮಾ ಸಂಗೀತ ಹಾಗೂ ದೃಶ್ಯದಲ್ಲಿ ಅದ್ಭುತವಾಗಿ ಮೂಡಿ ಬರಲಿದೆ. ಕೆಜಿಎಫ್ ಹಾಗೂ ಸಲಾರ್ಗಿಂತ ಈ ಚಿತ್ರದ ಮ್ಯೂಸಿಕ್ ಭಿನ್ನವಾಗಿ ಇರಲಿದೆ. ಹೊಸ ರೀತಿಯ ವಾದ್ಯ, ಎನರ್ಜಿ ಇರಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಸ್ಲಿಮ್ ಆದ ಜೂನಿಯರ್ ಎನ್ ಟಿಆರ್; ಇದಕ್ಕೆ ಕಾರಣ ಪ್ರಶಾಂತ್ ನೀಲ್

ಜೂನಿಯರ್ ಎನ್ ಟಿಆರ್ ನಟನೆಯ ‘ದೇವರ’ ಸಾಧಾರಣ ಎನಿಸಿಕೊಂಡಿತು. ಆ ಬಳಿಕ ಜೂನಿಯರ್ ಎನ್ ಟಿಆರ್ ಅವರು ‘ವಾರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಡಿಸಾಸ್ಟರ್ ಎನಿಸಿಕೊಂಡಿತು. ಹೀಗಾಗಿ, ಜೂನಿಯರ್ ಎನ್ ಟಿಆರ್ ಅಭಿಮಾನಿಗಳು ಈ ಚಿತ್ರದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಿರುವಾಗಲೇ ಸಿನಿಮಾ ನಿಂತಿದೆ ಎಂಬ ವದಂತಿ ಕೇಳಿ ಅವರು ಆತಂಕಗೊಂಡಿದ್ದರು. ಈಗ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *