‘ದೃಶ್ಯ’ ಸಿನಿಮಾ ಸ್ಟೈಲ್ ನಲ್ಲಿ ಮರ್ಡರ್
ಆನೇಕಲ್, ನವೆಂಬರ್ 18: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್ ನಲ್ಲಿ ದುರುಳರು ಇಂಜಿನಿಯರ್ ನನ್ನು ಹತ್ಯೆಗೈದಿರುವ ಪ್ರಕರಣವನ್ನು ಬೆಂಗಳೂರು ನಗರದ ಆನೇಕಲ್ ತಾಲ್ಲೂಕಿನಲ್ಲಿ ಅತ್ತಿಬೆಲೆ ಪೊಲೀಸರು ಭೇದಿಸಿದ್ದಾರೆ. ಇಂಜಿನಿಯರ್ ನಾಪತ್ತೆ ಪ್ರಕರಣದ ಬೆನ್ನು ಹತ್ತಿದ ಆರೋಪಿ, ಕೊಲೆಮಾಡಿ ಬಳಿಕ ಮೃತದೇಹವನ್ನ ಆರೋಪಿಗಳು ಮನೆಯಲ್ಲಿ ಹೂತು ಹೋಗಿದ್ದಾರೆ. ಆ ಮೂಲಕ ನಾಪತ್ತೆ ಕೇಸ್ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ.
ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್(30) ಬರ್ಬರ ಕೊಲೆಯಾದ ವ್ಯಕ್ತಿ, ಆರೋಪಿ ಪ್ರಭಾಕರ್ ಮತ್ತು ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ಅತ್ತಿಬೆಲೆಯ ನೆರಳೂರಿನಲ್ಲಿ ಪತ್ನಿ, ಮಗುವಿನೊಂದಿಗೆ ವಾಸವಿದ್ದ ಶ್ರೀನಾಥ್‌ಗೆ ಕೈತುಂಬ ಸಂಬಳ ಬರುತ್ತಿತ್ತು. ಹಣ ಡಬಲ್ ನೀಡುವುದಾಗಿ ಹೇಳಿದ್ದ ಹಂತಕ ಪ್ರಭಾಕರ್, ಸೋದರ ಸಂಬಂಧಿ ಶ್ರೀನಾಥ್ ಬಳಿ 40 ಲಕ್ಷ ರೂ. ಹಣ ಪಡೆದಿದ್ದ. ಇತ್ತೀಚೆಗೆ ಆ ಹಣವನ್ನು ವಾಪಸ್ ಕೊಡುವಂತೆ ಪ್ರಭಾಕರ್‌ಗೆ ಶ್ರೀನಾಥ್ ಕೇಳಿದ್ದ ಕಾರಣ, ಅವರ ಹತ್ಯೆಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ. ಹಣ ಕೊಡ್ತೀನಿ ಬಾ ಅಂತಾ ಆಂಧ್ರದ ಕುಪ್ಪಂಗೆ ಶ್ರೀನಾಥ್ ರನ್ನ ಆರೋಪಿ ಕರೆಸಿಕೊಂಡಿದ್ದ. ಕುಪ್ಪಂ ಶ್ರೀನಾಥ್ ಮನೆಯೊಳಗೆ ಬರುತ್ತಿದ್ದಂತೆ ಅವರ ತಲೆಗೆ ಸುತ್ತಿಗೆಯಿಂದ ಹೊಡೆದು ಪ್ರಭಾಕರ್ ಮತ್ತು ಆತನ ಸ್ನೇಹಿತ ಜಗದೀಶ್ ಹತ್ಯೆಗೈದಿದ್ದರು. ಕೊಲೆ ಬಳಿಕ ಅದೇ ಮನೆಯಲ್ಲೇ ಗುಂಡಿ ತೆಗೆದು ಹೂತಾಕಿದ್ದರು.
ಇದನ್ನೂ ಓದಿ: ಕುಡಿಯಬೇಡ ಅಂದಿದ್ದೇ ತಪ್ಪಾಯ್ತು, ಹೆಂಡತಿ ಜೀವವನ್ನೇ ಬಲಿ ಪಡೆದ ಪಾಪಿ ಪತಿ
ಕುಪ್ಪಂಗೆ ಹೋಗುವ ವಿಷಯವನ್ನು ಶ್ರೀನಾಥ್ ಪತ್ನಿಗೆ ತಿಳಿಸಿ ಹೋಗಿದ್ದು, ಈ ಬಗ್ಗೆ ಅವರು ಪ್ರಭಾಕರ್ ಅವರನ್ನು ಪ್ರಶ್ನಿಸಿದರೂ ಗೊತ್ತಿಲ್ಲದಂತೆ ಅವರು ನಾಟಕವಾಡಿದ್ದಾರೆ. 2 ದಿನವಾದ್ರೂ ಪತಿ ಮನೆಗೆ ಬಾರದೆ ಇದ್ದಾಗ ಅತ್ತಿಬೆಲೆ ಠಾಣೆಗೆ ಶ್ರೀನಾಥ್ ಪತ್ನಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪ್ರಭಾಕರ್ ಮತ್ತು ಜಗದೀಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಹೊರಗೆ ಬಂದಿದೆ. ಶ್ರೀನಾಥ್‌ರನ್ನು ಕೊಂದು ಕುಪ್ಪನ್ನ ಮನೆಯಲ್ಲಿ ಹೂತು ಹಾಕಿರೋದಾಗಿ ಹಂತಕರು ಬಾಯ್ಬಿಟ್ಟಿದ್ದಾರೆ. ಕುಪ್ಪಂ ತಹಶೀಲ್ದಾರ್ ನೇತೃತ್ವದಲ್ಲಿ ಶ್ರೀನಾಥ್ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ.
ಆರೋಪಿಗಳ ಕ್ರೈಂ ಹಿಸ್ಟರಿ ಭಯಾನಕ
ಇನ್ನು ಶ್ರೀನಾಥ್ ಅವರನ್ನು ಕೊಲೆ ಮಾಡಿರುವ ಆರೋಪಿಗಳು ಕ್ರೈಂ ಹಿಸ್ಟರಿ ಭಯಾನಕವಾಗಿದ್ದು, ಈ ಹಿಂದೆ ತನ್ನ ಪತ್ನಿಯನ್ನೇ ಪ್ರಭಾಕರ್ ಕೊಲೆ ಮಾಡಿದ್ದಾರೆ. ಹಣದ ವಿಚಾರವಾಗಿ ನಡೆದ ಕೊಲೆ ಪ್ರಕರಣ ಸಂಬಂಧ ಜೈಲಿಗೆ ಹೋಗಿದ್ದ. E2 ಜಗದೀಶ್ ಕೂಡ ತನ್ನ ಪ್ರೇಯಸಿಯನ್ನ ಮರ್ಡರ್ ಮಾಡಿದ್ದ. ಒಮ್ಮೆ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಇವರು ಮತ್ತೆ ಅಂತಹ ಕೆಲಸ ಮಾಡಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಶ್ರೀನಾಥ್ ಬಳಿ ಪ್ರಭಾಕರ್ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ದೊಡ್ಡಪ್ಪನ ಮಗ ಅಂತ ಪ್ರಭಾಕರ್ ಗೆ ಶ್ರೀನಾಥ್ ಹಣ ಕೊಟ್ಟಿದ್ದರು. ಹಣ ವಾಪಸ್ ಕೇಳಿದಾಗ ದುಡ್ಡಿನ ವಿಚಾರವಾಗಿ ಫೋನ್ ನಲ್ಲಿ ಮಾತನಾಡಬೇಡ, ಐಟಿ ಪ್ರಾಬ್ಲಮ್ ಆಗುತ್ತೆ. ಬದಲಾಗಿ ವಾಟ್ಸ್ಯಾಪ್ ಸ್ಟೇಟಸ್ ಹಾಕುವ ಮೂಲಕ ಮಾತಾಡಿಕೊಳ್ಳೋಣ ಎಂದು ಪ್ರಭಾಕರ್ ಹೇಳಿದ್ದಾರೆ. ಅಕ್ಟೋಬರ್ 27 ರಂದು ಹಣ ವಾಪಸ್ ಕೊಡೋದಾಗಿ ತಿಳಿಸಿದ್ದ.
ಇವಿಷ್ಟೇ ಅಲ್ಲದೆ, ಕುಪ್ಪಂಗೆ ಬರುವಾಗ ಮನೆಯಲ್ಲಿಯೇ ಬಿಟ್ಟು ಬಾ. ಇಲ್ಲದಿದ್ದರೆ ಸಮಸ್ಯೆ ಆಗುತ್ತೆ ಎಂದೂ ಶ್ರೀನಾಥ್ ಅವರಿಗೆ ಪ್ರಭಾಕರ್ ತಿಳಿಸಿದ್ದರು. ಹೀಗಾಗಿ ಮೊಬೈಲ್ ಮನೆಯಲ್ಲೇ ಬಿಟ್ಟು ಶ್ರೀನಾಥ್ ತೆರಳಿದ್ದರು. ಪೊಲೀಸರ ವಿಚಾರಣೆ ಸಂದರ್ಭವೂ ಶ್ರೀನಾಥ್ ತನಗೆ ಸಿಗಲೇ ಇಲ್ಲ. ಬೇಕಿದ್ರೆ ಮೊಬೈಲ್ ಚೆಕ್ ಮಾಡಿ ಎಂದು ಪ್ರಭಾಕರ್ ಹೇಳಿದ್ದ. ಪ್ರಭಾಕರ್‌ನ ಒಂದು ತಿಂಗಳ ಕಾಲ್ ಮಾಹಿತಿ ಪಡೆದರೂ ಘಟನೆಯ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ 2 ತಿಂಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಈ ವೇಳೆ ಜಗದೀಶ್ ಜೊತೆಗಿನ ಲಿಂಕ್ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.