Headlines

IPL 2026: ತಂಡದ ನಾಯಕನನ್ನು ಘೋಷಿಸಿದ SRH

IPL 2026: ತಂಡದ ನಾಯಕನನ್ನು ಘೋಷಿಸಿದ SRH


ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುವವರು ಯಾರು? ಇಂತಹದೊಂದು ಪ್ರಶ್ನೆ ಮೂಡಲು ಮುಖ್ಯ ಕಾರಣ ಪ್ಯಾಟ್ ಕಮಿನ್ಸ್ ಅವರ ಗಾಯದ ಸಮಸ್ಯೆ. ಸೊಂಟದ ಮೂಳೆಯ ನೋವಿನ ಸಮಸ್ಯೆಗೀಡಾಗಿರುವ ಕಮಿನ್ಸ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಆಯಶಸ್ ಸರಣಿಯ ನಂತರ ಅವರು ಹೆಚ್ಚಿನ ಸಮಯವನ್ನು ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಹೀಗಾಗಿಯೇ ಐಪಿಎಲ್ 2026 ರಲ್ಲಿ ಸನ್ ರೈಸರ್ಸ್ ಹೈದಾರಾಬಾದ್ ಪರ ಕಮಿನ್ಸ್ ಕಾಣಿಸಿಕೊಳ್ಳುವುದು ಕೂಡ ಅನುಮಾನ ಎನ್ನಲಾಗುತ್ತದೆ. ಜೊತೆಗೆ ಹೆನ್ರಿಕ್ ಕ್ಲಾಸೆನ್ ಅಥವಾ ಟ್ರಾವಿಸ್ ಹೆಡ್ ಎಸ್ ಆರ್ ಹೆಚ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಆದರೀಗ ಎಲ್ಲಾ ವದಂತಿಗಳಿಗೆ ಖುದ್ದು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತೆರೆ ಎಳೆದಿದೆ. ಐಪಿಎಲ್ 2026 ರಲ್ಲೂ ಪ್ಯಾಟ್ ಕಮಿನ್ಸ್ ಅವರೇ ಎಸ್ ಆರ್ಹೆಚ್ ತಂಡವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ಐಪಿಎಲ್ ಸೀಸನ್-19 ರಲ್ಲಿ ಆಸ್ಟ್ರೇಲಿಯನ್ ಆಲ್ರೌಂಡರ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಪ್ಯಾಟ್ ಕಮಿನ್ಸ್ ಐಪಿಎಲ್ 2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಜೊತೆಗೆ ಚೊಚ್ಚಲ ಸೀಸನ್ನಲ್ಲೇ ಎಸ್‌ಆರ್‌ಹೆಚ್ ಪಡೆಯನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಆದರೆ ಕಳೆದ ಸೀಸನ್‌ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.

ಇದಾಗ್ಯೂ ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ 2026 ರಲ್ಲಿ ಮತ್ತೊಂದು ಪರೀಕ್ಷೆ ನಡೆಸಲು ಮುಂದಾಗಿದೆ. ಅದರಂತೆ ಈ ಬಾರಿ ಕೂಡ ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲೇ ಎಸ್‌ಆರ್‌ಹೆಚ್ ಅನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್ ಉಳಿಸಿಕೊಂಡಿರುವ ಆಟಗಾರರು: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್‌ಶಾನ್ ಕಾರ್ಸೆದ್ ಅನ್ಸಾರಿ.

ಇದನ್ನೂ ಓದಿ: IPL 2026: ಮೂವರು ಭಾರತೀಯರು: 10 ತಂಡಗಳ ಕೋಚ್ ಫೈನಲ್

ಸನ್ ರೈಸರ್ಸ್ ಹೈದರಾಬಾದ್ ರಿಲೀಸ್ ಮಾಡಿದ ಆಟಗಾರರು: ಮೊಹಮ್ಮದ್ ಶಮಿ (ಲಕ್ನೋ ಸೂಪರ್ ಜೈಂಟ್ಸ್‌ಗೆ ಟ್ರೇಡ್), ಆಯಡಂ ಝಂಪಾ, ರಾಹುಲ್ ಚಹರ್, ವಿಯಾನ್ ಮುಲ್ಡರ್, ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ಸಿಮರ್ಜೀತ್ ಸಿಂಗ್.



Source link

Leave a Reply

Your email address will not be published. Required fields are marked *