Headlines

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಇಲ್ಯೂಷನ್) ಫೋಟೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ ನಮ್ಮ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ಆದರೆ ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಚಿಟ್ಟೆಯನ್ನು(ಚಿಟ್ಟೆ) ಹುಡುಕಬೇಕು. ಈ ಒಗಟು ಬಿಡಿಸಲು ಇರುವ ಸಮಯ 13 ಸೆಕೆಂಡುಗಳು ಮಾತ್ರ. ಈ ಒಗಟು ಬಿಡಿಸಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇದೊಳ್ಳೆ ಸಮಯ. ಹೀಗಾಗಿ ನೀವು ಈ ಚಿತ್ರದತ್ತ ಒಮ್ಮೆ ಕಣ್ಣು ಹಾಯಿಸಿ.

ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಗಮನಿಸಿದಾಗ ಮೊದಲ ನೋಟದಲ್ಲಿ ಸರಳವಾಗಿ ಕಾಣುತ್ತದೆ. ಆದರೆ ಭ್ರಮೆ ಉಂಟು ಮಾಡುವ ಚಿತ್ರಗಳೇ ಹಾಗೆ. ಇಲ್ಲಿ ಮನೆ ಮಂದಿ ಎಲ್ಲರೂ ಹಾಲ್‌ನಲ್ಲಿ ಕುಳಿತು ಟಿವಿ ನೋಡುತ್ತಿದ್ದಾರೆ. ಈ ಸಾಕು ಬೆಕ್ಕು ಹಾಗೂ ಮನೆಯ ಮುದ್ದಿನ ಶ್ವಾನವು ಇವರ ಜೊತೆಗೆ ಕುಳಿತುಕೊಂಡಿದೆ. ಆದರೆ ಇದರಲ್ಲಿ ಚಿಟ್ಟೆಯೊಂದು ಅಡಗಿ ಕುಳಿತಿದೆ. ಈ ಬಣ್ಣದ ಚಿಟ್ಟೆಯನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ.

ನೀವು ಈ ಸವಾಲು ಸ್ವೀಕರಿಸಲು ರೆಡಿ ಇದ್ದೀರಾ?

ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡುಮಾಡುತ್ತವೆ. ಆದರೆ ಇದರಲ್ಲಿ ಸವಾಲನ್ನು ಬಿಡಿಸಿರುವ ಮಜಾನೇ ಬೇರೆ. ಸರಳವಾಗಿ ಕಾಣುವ ಈ ಚಿತ್ರದಲ್ಲಿ ಬಣ್ಣದ ಆಕರ್ಷಕ ಚಿಟ್ಟೆ ಎಲ್ಲಿದೆ ಎಂದು ಹೇಳಬೇಕು. ನಿಮ್ಮ ಕಣ್ಣು ಸರಿಯಾಗಿದೆಯೇ ಎಂದು ಪರೀಕ್ಷಿಸಲು ಇಲ್ಲಿ ಒಂದು ಅವಕಾಶವಿದೆ. ಈ ಟ್ರಿಕ್ಕಿ ಬಿಡಿಸಲು ನೀವು ರೆಡಿ ಇದ್ದೀರಾ. ಹಾಗದ್ರೆ ನೀವು ಈ ಒಗಟಿನ ಚಿತ್ರದತ್ತ ಗಮನಹರಿಸಿ ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ:ಈ ಚಿತ್ರದಲ್ಲಿ100ರ ನಡುವೆ ಅಡಗಿರುವ 10 ಸಂಖ್ಯೆಯನ್ನು ಕಂಡುಹಿಡಿಯುವಿರಿ

ಚಿಟ್ಟೆಯನ್ನು ಸಾಧ್ಯವಾಯಿತೇ?

ನಿಮ್ಮ ಮೆದುಳನ್ನು ಚುರುಕುಗೊಳಿಸುವ ಈ ಚಿತ್ರಗಳೇ ಹಾಗೆ. ಅಂದುಕೊಂಡಷ್ಟು ಸುಲಭವಿಲ್ಲ. ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಗುರುತಿಸಲು ಕಷ್ಟಪಡುತ್ತಿದ್ದೀರಾ. ಕಣ್ಣು ಅಗಲಿಸಿ, ಸೂಕ್ಷ್ಮವಾಗಿ ನೋಡಿದರೂ ಈ ಚಿತ್ರವನ್ನು ಮರೆಮಾಡಲಾಗಿದೆ ಚಿಟ್ಟೆಯನ್ನು ಗುರುತಿಸಲು ಸಾಧ್ಯವಾಗಿಲ್ಲ. ನಾವು ನಿಮಗೆ ಚಿಟ್ಟೆ ಎಲ್ಲಿದೆ ಎಂದು ಹೇಳುತ್ತೇವೆ. ಕುಟುಂಬದೊಂದಿಗೆ ಟಿವಿ ನೋಡುತ್ತ ಕುಳಿತಿರುವ ಮಹಿಳೆಯ ಕೂಡಲನ್ನೊಮ್ಮೆ ಗಮನಿಸಿ. ಆಕೆಯ ತಲೆಯಲ್ಲಿರುವ ಕ್ಲಿಪ್ ಚಿಟ್ಟೆಯಾಕಾರದಲ್ಲಿದೆ. ನಾವು ಹೇಳಿದ ಮೇಲೆ ನೀವು ಬಣ್ಣದ ಚಿಟ್ಟೆಯನ್ನು ಗಮನಿಸಿದ್ದೇವೆ ಎಂದು ಭಾವಿಸುತ್ತೇವೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕಿಕ್ಲ್ ಮಾಡಿ



Source link

Leave a Reply

Your email address will not be published. Required fields are marked *