ಬೆಂಗಳೂರು, ನವೆಂಬರ್ 18: ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಮಹಿಳೆಯರಿಗೆಂದು ವಿಶೇಷ ಸೇವಿಂಗ್ಸ್ ಅಕೌಂಟ್ ಯೋಜನೆ ಪ್ರಾರಂಭವಾಗಿದೆ. ಈ ಎಸ್‌ಐಬಿ ಹರ್ ಅಕೌಂಟ್‌ನಲ್ಲಿ (SIB ಅವರ ಖಾತೆ) ಮಹಿಳೆಯರಿಗೆ ನಾನಾ ರೀತಿಯ ಸೌಲಭ್ಯಗಳು ಮತ್ತು ಅನುಕೂಲತೆಗಳನ್ನು ನೀಡಲಾಗುತ್ತಿದೆ. ಭರ್ಜರಿ ಇನ್ಶೂರೆನ್ಸ್ ನಿಂದ (ವಿಮೆ) ಹಿಡಿದುಕೊಳ್ಳಿ ಅನ್ಲಿಮಿಟೆಡ್ ಎಟಿಎಂ ವಿಡ್ರಾವರೆಗೆ ಹಲವು ಫೀಚರ್‌ಗಳು ಮಹಿಳೆಯರ ಎಸ್‌ಐಬಿ ಅವರ ಅಕೌಂಟ್‌ನಲ್ಲಿವೆ.
ಸೌತ್ ಇಂಡಿಯನ್ ಬ್ಯಾಂಕ್ ಅವರ ಅಕೌಂಟ್‌ನಲ್ಲಿರುವ ಫೀಚರ್‌ಗಳು
- ಅಕೌಂಟ್‌ನಲ್ಲಿ ಒಂದು ಲಕ್ಷ ರೂ ಮೇಲ್ಪಟ್ಟ ಬ್ಯಾಲನ್ಸ್ ಇದ್ದರೆ ಆಟೊ ಸ್ವೀಪ್ ಸೌಲಭ್ಯ ಸಿಗುತ್ತದೆ.
- ಎಟಿಎಂಗಳಲ್ಲಿ ಶುಲ್ಕರಹಿತವಾಗಿ ಎಷ್ಟು ಬಾರಿ ಬೇಕಾದರೂ ಹಣ ವಿತ್ತ ಮಾಡಬಹುದು.
- ಒಂದು ಕೋಟಿ ರೂ ಮೊತ್ತದ ವಿಮಾನ ಅಪಘಾತ ವಿಮೆ
- ವೈಯಕ್ತಿಕ ಅಪಘಾತಕ್ಕೆ 1 ಲಕ್ಷ ರೂ
- ಕಡಿಮೆ ಪ್ರೀಮಿಯಂಗೆ ಕ್ಯಾನ್ಸರ್ ಕೇರ್ ಇನ್ಶೂರೆನ್ಸ್
- ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ
- ಮೂರು ಕುಟುಂಬಗಳಿಗೆ ಅಕೌಂಟ್ ಸೇರಿಸುವ ಅವಕಾಶ
- ಲಾಕರ್ ರೆಂಟಲ್ ನಲ್ಲಿ ಶೇ. 50ರಷ್ಟು ರಿಯಾಯಿತಿ
- ಏರ್ಪೋರ್ಟ್ ಲಾಂಜ್ ಸೌಲಭ್ಯ
ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿದೆ…
ಏನಿದು ಆಟೊ ಸ್ವೀಪ್ ಫೆಸಿಲಿಟಿ?
ಬ್ಯಾಂಕ್‌ನಲ್ಲಿ ಆಟೋ ಸ್ವೀಪ್ ಫೆಸಿಲಿಟಿಯಲ್ಲಿ (ಆಟೋ ಸ್ವೀಪ್ ಸೌಲಭ್ಯ) ಸೇವಿಂಗ್ಸ್ ಅಕೌಂಟ್ ಮತ್ತು ಎಫ್‌ಡಿ ಹಣದ ತಾಳಮೇಳ ಇರುತ್ತದೆ. ಇದರಲ್ಲಿ ಸೇವಿಂಗ್ಸ್ ಅಕೌಂಟ್ ಅನ್ನು ಫಿಕ್ಸೆಡ್ಪಾಸಿಟ್ ಅಕೌಂಟ್ಗೆ ಲಿಂಕ್ ಮಾಡಲಾಗಿರುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಹಣವು ಎಸ್‌ಬಿ ಅಕೌಂಟ್‌ನಲ್ಲಿ ಇದ್ದರೆ ಅದನ್ನು ಎಫ್‌ಡಿಗೆ ಅಟೊಮ್ಯಾಟಿಕ್ ಆಗಿ ಬದಲಿಸಿ.
ಹಾಗೆಯೆ, ಎಸ್‌ಬಿ ಅಕೌಂಟ್‌ನಲ್ಲಿ ಬ್ಯಾಲನ್ಸ್ ನಿಗದಿತ ಮಿತಿಗಿಂತ ಕಡಿಮೆಗೆ ಬಂದರೆ, ಅಷ್ಟು ಹಣವನ್ನು ಎಫ್‌ಡಿಯಿಂದ ಇಲ್ಲಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗಲು ಸಾಧ್ಯ.
ಇದನ್ನೂ ಓದಿ: ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?
ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ ಮಂತ್ಲಿ ಬ್ಯಾಲನ್ಸ್‌ನಲ್ಲಿ ವಿನಾಯಿತಿ…
ಸೌತ್ ಇಂಡಿಯನ್ ಬ್ಯಾಂಕ್ ನ ಹರ್ ಅಕೌಂಟ್ ನಲ್ಲಿ 50,000 ರೂ ಮಾಸಿಕ ಬ್ಯಾಲನ್ಸ್ ಇರಬೇಕೆಂಬ ನಿಯಮವಿದೆ. ಆದರೆ, ಗ್ರಾಹಕರು ಒಂದು ಲಕ್ಷ ರೂ ಅನ್ನು ಫಿಕ್ಸೆಡ್ ಡೆಪಾಸಿಟ್‌ಗೆ ಇಟ್ಟರೆ, ಮಂತ್ಲಿ ಬ್ಯಾಲನ್ಸ್ ಎಷ್ಟಿದ್ದರೂ ಚಿಂತೆ ಪಡಬೇಕಿಲ್ಲ. ಅಥವಾ ಹಿಂದಿನ ತಿಂಗಳಿನಲ್ಲಿ ಈ ಅಕೌಂಟ್‌ನ ಡೆಬಿಡ್ ಕಾರ್ಡ್‌ನಿಂದ 50,000 ರೂ ವ್ಯಯಿಸಿದ್ದರೂ ಈ ತಿಂಗಳ 50,000 ರೂ ಮಾಸಿಕ ಬ್ಯಾಲನ್ಸ್ ಕಾಯ್ದುಕೊಳ್ಳುವ ಅಗತ್ಯವಿರುವುದಿಲ್ಲ.
ಎಸ್‌ಐಬಿಯ ಬೇರೆ ಸಾಮಾನ್ಯ ಅಕೌಂಟ್‌ಗಳಲ್ಲಿ ಕನಿಷ್ಠ ಬ್ಯಾಲನ್ಸ್ 5,000 ರೂವರೆಗೂ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ