Headlines

ಚಿನ್ನ, ಬೆಳ್ಳಿ ಬೆಲೆಗಳು ಸತತವಾಗಿ ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ

ಚಿನ್ನ, ಬೆಳ್ಳಿ ಬೆಲೆಗಳು ಸತತವಾಗಿ ಇಳಿಯುತ್ತಿರುವುದು ಯಾಕೆ? ಇಲ್ಲಿದೆ ಕಾರಣ


ಜನವರಿ, ನವೆಂಬರ್ 18: ಚಿನ್ನ ಮತ್ತು ಬೆಳ್ಳಿ ಬೆಲೆಗಳು (ಚಿನ್ನದ ದರಗಳು) ಕಳೆದ ಒಂದು ವಾರದಲ್ಲಿ ನಾಲ್ಕು ಬಾರಿ ಇಳಿಕೆ ಕಂಡಿವೆ. ಸತತ ಮೂರು ದಿನ ಬೆಲೆ ತಗ್ಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ, ಭಾರತದಲ್ಲೂ ಇವೆರಡು ಲೋಹಗಳ ಬೆಲೆ ಕಡಿಮೆಯಾಗಿದೆ. ಎಂಸಿಎಕ್ಸ್ ಅಸಲಿ ಡಿಸೆಂಬರ್ ಗೋಲ್ಡ್ ಫ್ಯೂಚರ್ಸ್ 10 ಗ್ರಾಮಕ್ಕೆ 1,807 ರೂಗಳ ಬೆಲೆ ಕಡಿಮೆಯಾಗಿದೆ. 2026ರ ಫೆಬ್ರುವರಿ ಗೋಲ್ಡ್ ಕಾಂಟ್ರಾಕ್ಟ್ ಕೂಡ ಇಷ್ಟೇ ಪ್ರಮಾಣದಲ್ಲಿ ತಗ್ಗಿದೆ.

ಗೋಲ್ಡ್ ಫ್ಯೂಚರ್ಸ್ ಶೇ. 1.45-1.50ರಷ್ಟು ಕಡಿಮೆ ಆದರೆ, ಸಿಲ್ವರ್ ಫ್ಯೂಚರ್ಸ್ ಶೇ. 2.36ರಷ್ಟು ಕಡಿಮೆ ಆಗಿದೆ. ಎಂಸಿಎಕ್ಸ್‌ನಲ್ಲಿ ಡಿಸೆಂಬರ್‌ನ ಗೋಲ್ಡ್ ಫ್ಯೂಚರ್ ಕಾಂಟ್ರಾಕ್ಟ್‌ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1.21 ಲಕ್ಷ ರೂ. ಫೆಬ್ರುವರಿ ಕಾಂಟ್ರಾಕ್ಟ್‌ನಲ್ಲಿ 1.22 ಲಕ್ಷ ರೂ ಆಗಿದೆ. ಡಿಸೆಂಬರ್‌ನಲ್ಲಿ ಸಿಲ್ವರ್ ಫ್ಯೂಚರ್ ಕಿಲೋಗೆ 1.51 ಲಕ್ಷ ರೂ ಇದೆ.

ಇದನ್ನೂ ಓದಿ: ಸೌತ್ ಇಂಡಿಯನ್ ಬ್ಯಾಂಕ್ ನಿಂದ ಮಹಿಳೆಯರಿಗೆ ವಿಶೇಷ ಅಕೌಂಟ್; ಉತ್ತಮ ಇನ್ಶೂರೆನ್ಸ್, ಎಟಿಎಂ ಇತ್ಯಾದಿ ಸೌಲಭ್ಯ

ಚಿನ್ನ, ಬೆಳ್ಳಿ ಬೆಲೆಗಳು ಕಡಿಮೆಯಾಗಲು ಕಾರಣವೇನು?

ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಸಂಸ್ಥೆ ತನ್ನ ಬಡ್ಡಿದರವನ್ನು ಕಡಿಮೆಗೊಳಿಸುವ ನಿರೀಕ್ಷೆ ಬಹಳ ಇತ್ತು. ಆದರೆ, ಆ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಬಡ್ಡಿದರ ಇಳಿಸುವ ನಿರ್ಧಾರವನ್ನು ಪ್ರಚೋದಿಸುವಂಥ ಬೆಳವಣಿಗೆಗಳು ಯಾವುದು ಆಗುತ್ತಿಲ್ಲ. ಹೀಗಾಗಿ, ಬಹಳಷ್ಟು ಹೂಡಿಕೆದಾರರು ಬಡ್ಡಿದರ ಕಡಿತದ ನಿರೀಕ್ಷೆಯನ್ನೇ ಕೈಬಿಟ್ಟಿದ್ದಾರೆ. ಇದು ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆಗಳಿಂದ ನಿರ್ಗಮಿಸಲು ದಾರಿಯಾಗಿದೆ ಎನ್ನುತ್ತಾರೆ ತಜ್ಞರು.

ಕಳೆದ ಬಾರಿಯ ಫೆಡರಲ್ ರಿಸರ್ವ್ ಸಭೆಯಲ್ಲಿ ಬಡ್ಡಿದರ ಇಳಿಸಲಾಯಿತಾದರೂ, ಮುಂಬರುವ ದಿನಗಳಲ್ಲಿ ತಾಳ್ಮೆ ವಹಿಸುವ ನೀತಿಯನ್ನು ಅನುಸರಿಸಲಾಗಿದೆ. ಹೀಗಾಗಿ, ಡಿಸೆಂಬರ್‌ನಲ್ಲಿ ದರ ಕಡಿತ ಮಾಡುವ ಸಂಭವ ಕಡಿಮೆ ಎಂದು ತೋರುತ್ತಿದೆ.

ಇದನ್ನೂ ಓದಿ: ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?

ನಾಳೆ ಬುಧವಾರ (ನ. 19) ರಂದು ನಡೆಯುವ ಸಮಾರಂಭದಲ್ಲಿ ಚರ್ಚೆಯಾಗುವ ಅಂಶಗಳು ಬಡ್ಡಿದರ ಕಡಿತದ ಬಗ್ಗೆ ಸುಳಿವು ನೀಡುತ್ತವೆ. ನ. 20ರಂದು ಅಮೆರಿಕದ ನ್ಯಾನ್-ಫಾರ್ಮ್ ಪೇರೋಲ್ ಡಾಟಾ ಬಿಡುಗಡೆ ಆಗುತ್ತದೆ. ಅದರಲ್ಲಿರುವ ದತ್ತಾಂಶವು ಬಂಡಲ್ ರಿಸರ್ವ್ನ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು. ಈ ಬೆಳವಣಿಗೆಗಳು ಚಿನ್ನ ಹಾಗೂ ಬೆಳ್ಳಿ ಹೂಡಿಕೆದಾರರ ಮುಂದಿನ ನಡೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಅದೇ ರೀತಿ, ಇವೆರಡು ಲೋಹಗಳ ಬೆಲೆಗಳು ಯಾವ ದಿಕ್ಕಿನಲ್ಲಿ ಹೋಗುತ್ತವೆ ಎಂಬುದೂ ಗೊತ್ತಾಗಲಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *