Headlines

ಸಾಕಷ್ಟು ವಿರೋಧ ಮಧ್ಯೆ ಕುವೆಂಪು ವಿವಿಯಲ್ಲಿ ನಡೆದ ಭಗವದ್ಗೀತೆ ಕುರಿತ ವಿಚಾರಗೋಷ್ಠಿ: ಹಲವರು ಭಾಗಿ

ಸಾಕಷ್ಟು ವಿರೋಧ ಮಧ್ಯೆ ಕುವೆಂಪು ವಿವಿಯಲ್ಲಿ ನಡೆದ ಭಗವದ್ಗೀತೆ ಕುರಿತ ವಿಚಾರಗೋಷ್ಠಿ: ಹಲವರು ಭಾಗಿ


ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರಗೋಷ್ಠಿ

ಶಿವಮೊಗ್ಗ, ನವೆಂಬರ್ 18: ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ‘ಭಗವದ್ಗೀತೆ (ಭಗವದ್ಗೀತೆ) ಮತ್ತು ನಿಯಂತ್ರಣ’ ಎಂಬ ವಿಚಾರಗೋಷ್ಠಿ ನಡೆಯಿತು. ಇದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೆಡಿಎಸ್ಎಸ್)ಯಿಂದ ಪ್ರತಿಭಟನೆ ಮಾಡಲಾಯಿತು. ಆದರೆ ಸಾಕಷ್ಟು ವಿರೋಧದ ಮಧ್ಯೆ ವಿಚಾರಗೋಷ್ಠಿ ಮಾಡಲಾಯಿತು. ಮಹಾತ್ಮ ಗಾಂಧೀಜಿಯವರು ಭಗವದ್ಗೀತೆಯನ್ನು ಅಪಾರವಾಗಿ ಗೌರವಿಸುತ್ತಾರೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅಭಿಪ್ರಾಯಪಟ್ಟಿದ್ದಾರೆ.

ಶಂಕರಘಟ್ಟದ ​​ಕುವೆಂಪು ವಿಶ್ವವಿದ್ಯಾಲಯದಲ್ಲಿ ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ‘ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ’ ಎಂಬ ವಿಚಾರಗೋಷ್ಠಿ ನಡೆಯಿತು. ಈ ವಿಚಾರಗೋಷ್ಠಿ ಬಲಪಂಥಿಯ ಅಜೆಂಡಾ ಮತ್ತು ಕುವೆಂಪು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (KDSS) ಯಿಂದ ಪ್ರತಿಭಟಿಸಲಾಯಿತು. ವಿರೋಧದ ಮಧ್ಯೆಯೇ ವಿಚಾರಗೋಷ್ಠಿ ನಡೆಯಿತು.

ಜೀವನ ಪಥವನ್ನು ದರ್ಶನ ಮಾಡುವುದೇ ಭಗವದ್ಗೀತೆ: ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅರವಿಂದೋ ಘೋಷ್, ಸ್ವಾಮಿ ವಿವೇಕಾನಂದ, ಸುಭಾಶ್ಚಂದ್ರ ಬಾಸ್, ಮಹಾತ್ಮ ಗಾಂಧೀಜಿ ಮೊದಲಾದವರ ಮೇಲೆ ಭಗವದ್ಗೀತೆ ಪ್ರಭಾವ ಬೀರಿದ್ದು, ಅವರಿಗೆ ಆತ್ಮಶಕ್ತಿಯನ್ನು ನೀಡಲಾಗಿತ್ತು. ಶ್ರೇಷ್ಠ ಐನ್‌ಸ್ಟೀನ್ ಕೂಡ ಭಗವದ್ಗೀತೆಯಿಂದ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಜೀವನ ಪಥವನ್ನು ದರ್ಶನ ಮಾಡುವುದೇ ಭಗವದ್ಗೀತೆ ಎಂದು ಹೇಳಿದ್ದಾರೆ.

ಇದು ಚರ್ಚೆ ಮಾಡುವಂತಹ ವೇದಿಕೆ ಅಲ್ಲ; ಕುಲಸಚಿವ ಪ್ರೊ.ಎ.ಎಲ್.ಮಂಜುನಾಥ್

ಕುಲಸಚಿವ ಪ್ರೊ.ಎ.ಎಲ್.ಮಂಜುನಾಥ್ ಮಾತನಾಡಿ, ಭಗವದ್ಗೀತೆಯಲ್ಲೂ ಚಾತುರ್ವರ್ಣ ವ್ಯವಸ್ಥೆ ಇದೆ, ಅದೇ ಕಾರಣಕ್ಕೆ ಇಂದು ಆಚೆ ಪ್ರತಿಭಟನೆ ನಡೆಯುತ್ತಿದೆ. ದಲಿತ ಸಂಘರ್ಷ ಸಮಿತಿ ಅವರು ಆಚೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ಒಳಗೆ ಬಿಡುವ ಇಚ್ಛೆ ನನಗಿದೆ, ಆದರೆ ಇದೆ ಸೂಕ್ತ ವೇದಿಕೆ ಅಲ್ಲ. ಅದಕ್ಕೂ ಪ್ರತ್ಯೇಕವಾದ ವೇದಿಕೆಯನ್ನು ಕಲ್ಪಿಸಿಕೊಡುತ್ತೇವೆ. ರಾಜಕೀಯದವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ; ವಿಚಾರಗೋಷ್ಠಿಗೆ ಕೆಡಿಎಸ್ಎಸ್ ವಿರೋಧ

ಮುಂದಿನ ದಿನಗಳಲ್ಲಿ ಇಂತಹ ಅವಕಾಶಗಳು ಬಂದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ಆದರೆ ಇದು ಚರ್ಚೆಯ ರೂಪದಲ್ಲಿ ನಡೆಯಲಿ. ಇಂದು ಲೇಬಲ್ಗಳನ್ನು ಕಟ್ಟಿ ಮಾತನಾಡುತ್ತಾರೆ, ವಿಚಾರಗಳ ಕುರಿತು ಮಾತ್ರ ಮಾತನಾಡಬೇಕು. ಅಂಬೇಡ್ಕರ್ ಅವರಿಗೆ ಭಗವದ್ಗೀತೆಯ ಬಗ್ಗೆ ದ್ವಂದ್ವಗಳು ಇದಾವೆ. ಸ್ವಾಮೀಜಿಗಳಲ್ಲಿ ನಾನು ವಿನಮ್ರವಾಗಿ ವಾದವನ್ನು ಮಾಡುತ್ತೇನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *