ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ


ಬೆಂಗಳೂರು, ನವೆಂಬರ್ 19: ಯಕ್ಷಗಾನ ಕಲಾವಿದರಲ್ಲಿ ಯಾರಾದರೂ ಸಲಿಂಗಿಗಳಾಗಿದ್ದರೆ, ಅಲ್ಲಿ ಅಂತಹ ಅನಿವಾರ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ. ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿಗಳನ್ನು ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿರುವ ಆಡಿಯೋವೀಗ ವೈರಲ್ ಆಗಿದೆ.

ಸತ್ಯವನ್ನು ಹೇಳಲು ಹಿಂಜರಿಯಬಾರದು. ಯಕ್ಷಗಾನ ಕಲಾವಿದರು ಮೇಳಕ್ಕೆಂದು 6-8 ತಿಂಗಳ ತಿರುಗಾಟದಲ್ಲೇ ಇರುತ್ತಾರೆ ಅವರಿಗೆ ಯಾರೂ ಹೆಣ್ಣು ಕೊಡುತ್ತಾರೆ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುವಂತೆ. ಅವರ ಮೇಲೆ ಇತರರಿಗೆ ಮೋಹವೇ ಇರುತ್ತಿತ್ತು. ಸ್ತ್ರೀವೇಷದ ಕಲಾವಿದ ಯಾವುದಾದರೂ ಸಲಿಂಗಕಾಮ ನಿರಾಕರಿಸಿದ್ದರೆ, ಭಾಗವತರು ಮರು ದಿನ ಅವರಿಗೆ ಪದ್ಯವನ್ನೇ ಕೊಡಲು ಬಯಸುತ್ತಾರೆ. ಆ ಮೂಲಕ ರಂಗಭೂಮಿ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗ್ತಿತ್ತು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಇದನ್ನೂ ಓದಿ: ಇದು ಯಕ್ಷಗಾನ ಗೊಂಬೆಯಾಟ; ಸೂತ್ರದಲ್ಲೇ ಕಥೆ ಹೇಳುವ ಪರಿ ರೋಚಕ

‘ರಂಗಭೂಮಿ ಎದುರಿನಿಂದ ಕಾಣುವುದಕ್ಕಿಂದ ವಿಭಿನ್ನ’

ಈಗೆಲ್ಲ ನಿಮಗೆ ಸಿನಿಮಾ ಹೀರೋಯಿನ್‌ಗಳು ಕ್ರಶ್ ಆಗುವ ರೀತಿ, ನಮಗೆಲ್ಲ ಬಾಲ್ಯದಲ್ಲಿ ಯಕ್ಷಗಾನದ ಸ್ತ್ರೀವೇಷಧಾರಿಗಳು ಕ್ರಶ್ ಆಗಿದ್ದರು. ಅವರು ರಂಗದ ಮೇಲೆ ಕುಣಿದರೆ ಚೆಂದವೋ ಚಂದ, ಅವರ ಮೇಲೆ ನಮಗೆ ಕಣ್ಣು ಇರುತ್ತಿತ್ತು. ಆದರೆ ಅವರ ಮೇಲೆ ಇರುತ್ತಿದ್ದ ಒತ್ತಡ ಬಹಳ. ಕಲಾವಿದರ ನಡುವೆ ಸಂಬಂಧಕ್ಕೆ ಒಪ್ಪದಿದ್ದರೆ ಮುಂದಿನ ವರ್ಷ ಮೇಳ ಸಿಗುವುದಿಲ್ಲ, ಅದು ಅವರ ಬದುಕಿನ ಪ್ರಶ್ನೆ. ಹೀಗಾಗಿ ರಂಗಭೂಮಿ ಎದುರಿನಿಂದ ಕಾಣುವುದಕ್ಕಿಂದ ವಿಭಿನ್ನವಾಗಿದೆ. ವಿದ್ವಾಂಸರು, ಜಾನಪದ ವಿದ್ವಾಂಸರು ಇದನ್ನು ತಿಳಿದುಕೊಂಡಿದ್ದಾರೆ ಯಾರ ಭಾವನೆಗೆ ನೋವಾಗದಂತೆ ಬರೆದರೆ ಜಾನಪದಕ್ಕೆ ಇನ್ನೊಂದು ಹೊಸ ಆಯಾಮ ಬರುತ್ತೆ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 10:05 am, ಬುಧವಾರ, 19 ನವೆಂಬರ್ 25



Source link

Leave a Reply

Your email address will not be published. Required fields are marked *