Headlines

‘ಆಂಧ್ರ ಕಿಂಗ್’ ಆಗಿ ಉಪೇಂದ್ರ: ಅದ್ಧೂರಿ ಟ್ರೈಲರ್ ಬಿಡುಗಡೆ

‘ಆಂಧ್ರ ಕಿಂಗ್’ ಆಗಿ ಉಪೇಂದ್ರ: ಅದ್ಧೂರಿ ಟ್ರೈಲರ್ ಬಿಡುಗಡೆ


ಸ್ಟಾರ್ ನಟ ಉಪೇಂದ್ರ (ಉಪೇಂದ್ರ) ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲ್ಲೂಕ’ ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ರಾಮ್ ಪೋತಿನೇನಿ ಮತ್ತು ಉಪೇಂದ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಭಿನ್ನ ಕತೆಯುಳ್ಳ ಸಿನಿಮಾ ಎಂಬುದು ಟ್ರೈಲರ್ ನಿಂದಲೇ ತಿಳಿದು ಬರುತ್ತಿದೆ. ಸಿನಿಮಾದಲ್ಲಿ ಉಪೇಂದ್ರ ಸ್ಟಾರ್ ಹೀರೋ ಆಗಿ ನಟಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕತೆ.

ಇದೀಗ ಬಿಡುಗಡೆ ಆಗಿರುವ ಟ್ರೈಲರ್ ಸಿನಿಮಾದ ಕತೆಯ ಬಗ್ಗೆ ಕೆಲ ಗುಟ್ಟುಗಳನ್ನು ಬಿಟ್ಟುಕೊಡುತ್ತಿದೆ. ಉಪೇಂದ್ರ ಸ್ಟಾರ್ ಹೀರೋ ಸೂರ್ಯ ಕುಮಾರ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಆಂಧ್ರ ಕಿಂಗ್ ಎಂದೆಂದಿಗೂ ಹೆಸರುವಾಸಿ. ರಾಮ್ ಪೋತಿನೇನಿ ಸಣ್ಣ ಯುವಕ. ಆಂಧ್ರ ಕಿಂಗ್ ಸೂರ್ಯ ಕುಮಾರ್ ಎಂದರೆ ಪಂಚಪ್ರಾಣ, ಆತನ ಸಿನಿಮಾಗಳನ್ನು ನೋಡುವುದು, ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರವನ್ನು ಸಿಂಗರಿಸುವುದು, ತನ್ನ ಮೆಚ್ಚಿನ ನಟನ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ಮೇಲೆ ಜಗಳ ಮಾಡುವುದು ಇಷ್ಟೇ ಆತನ ಕೆಲಸ. ಆದರೆ ಆತನಿಗೊಂದು ಆಸೆಯಿದೆ. ತನ್ನ ಮೆಚ್ಚಿನ ನಟನನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂಬುದು.

ಆದರೆ ಸ್ಟಾರ್ ಹೀರೋ ಆಂಧ್ರ ಕಿಂಗ್ ಉಪೇಂದ್ರಗೆ ತನಗೆ ಹೀಗೊಬ್ಬ ಅಭಿಮಾನಿ ಇದ್ದಾನೆ ಎಂಬುದೇ ತಿಳಿಯದು. ಆದರೆ ತನ್ನ ಮೆಚ್ಚಿನ ನಟನ ಭೇಟಿ ಆಗುವ ಪ್ರಯತ್ನದಲ್ಲಿ ಅನುಭವಿಸುವ ಅವಮಾನದಿಂದಾಗಿ ಅಭಿಮಾನಿ ದಿಕ್ಕು ಬದಲಿಸುತ್ತಾನೆ. ಆ ನಂತರ ಏನು ನಡೆಯುತ್ತಿದೆ. ಸ್ಟಾರ್ ಹೀರೋ ವಿಲನ್ ಆಗಿ, ಅಭಿಮಾನಿಯೇ ಹೀರೋ ಆಗುತ್ತಾನಾ? ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಸಿನಿಮಾ ನೋಡಬೇಕು. ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾ ನವೆಂಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಶಂಕರ್ ನಾಗ್ ಬಯೋಪಿಕ್ ಬಗ್ಗೆ ಮಾತನಾಡಿದ ಉಪೇಂದ್ರ; ಸಿಕ್ತು ದೊಡ್ಡ ಅಪ್ಡೇಟ್

ಸಿನಿಮಾದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಅವರೊಟ್ಟಿಗೆ ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ವಿವೇಕ್ ಮತ್ತು ಮೆರ್ವೀನ್ ಅವರು ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್, ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ತೋರಿಸಿವೆ.

ಉಪೇಂದ್ರ ಅವರಿಗೆ ತೆಲುಗಿನಲ್ಲಿ ಇದು ಒಂಬತ್ತನೇ ಸಿನಿಮಾ. ತೆಲುಗು ಚಿತ್ರದಲ್ಲಿಯೂ ಸಹ ಉಪ್ಪಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಬಾರಿಯ ಸ್ಟಾರ್ ಹೀರೋ ಆಗಿಯೇ ಉಪ್ಪಿ ನಟಿಸಿದ್ದು ಈ ಸಿನಿಮಾದಿಂದ ಅವರಿಗೆ ತೆಲುಗಿನಲ್ಲಿ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:49 pm, ಬುಧವಾರ, 19 ನವೆಂಬರ್ 25



Source link

Leave a Reply

Your email address will not be published. Required fields are marked *