Headlines

AUS vs ENG: 2 ದಿನ ಮೊದಲೇ ಆಡುವ ಬಳಗವನ್ನು ಘೋಷಿಸಿದ ಇಂಗ್ಲೆಂಡ್

AUS vs ENG: 2 ದಿನ ಮೊದಲೇ ಆಡುವ ಬಳಗವನ್ನು ಘೋಷಿಸಿದ ಇಂಗ್ಲೆಂಡ್


ಆಸ್ಟ್ರೇಲಿಯಾ ಮತ್ಗು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆಯಶಸ್ ಸರಣಿ ಶುರುವಾಗಲು ಇನ್ನೂ 2 ದಿನಗಳಿವೆ. ಆದರೆ ಅದಕ್ಕೂ ಮುನ್ನವೇ ಇಂಗ್ಲೆಂಡ್ ತಂಡ ಆಡುವ ಬಳಗವನ್ನು ಹೆಸರಿಸಿ ಕುತೂಹಲ ಮೂಡಿಸಿದೆ. ಪರ್ತ್‌ನಲ್ಲಿ ಶುಕ್ರವಾರ ಶುರುವಾಗಲಿರುವ ಆಯಶಸ್ ಸರಣಿಯ ಮೊದಲ ಪಂದ್ಯಕ್ಕಾಗಿ ಇಂಗ್ಲೆಂಡ್ 12 ಸದಸ್ಯರ ಬಳಗವನ್ನು ಪ್ರಕಟಿಸಲಾಗಿದೆ. ಈ ಹನ್ನೆರಡು ಆಟಗಾರರಲ್ಲಿ ಹನ್ನೊಂದು ಮಂದಿ ಕಣಕ್ಕಿಳಿಯುವುದು ಖಚಿತ.

ಅದರಂತೆ ಆರಂಭಿಕರಾಗಿ ಬೆನ್ ಡಕೆಟ್ ಹಾಗೂ ಝಾಕ್ ಕ್ರಾಲಿ ಬ್ಯಾಟ್ ಬೀಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಒಲೀ ಪಾಪ್ ಕಣಕ್ಕಿಳಿಯಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಜೋ ರೂಟ್ ಕಾಣಿಸಿಕೊಳ್ಳುವುದು ಖಚಿತ.

ಐದನೇ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ ಆಡಿದರೆ, ನಾಯಕ ಬೆನ್ ಸ್ಟೋಕ್ಸ್ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಏಳನೇ ಕ್ರಮಾಂಕದಲ್ಲಿ ವಿಜ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ಕಾಣಿಸಿಕೊಂಡಿದ್ದಾರೆ.

ಇನ್ನು ಆಲ್ ರೌಂಡರ್ ಆಗಿ ಬ್ರೈಡನ್ ಕಾರ್ಸ್ ಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಜೊತೆಗೆ ವೇಗಿಗಳಾಗಿ ಬೌಲರ್ ಆಗಿ ಜೋಫ್ರಾ ಆರ್ಚರ್ ಹಾಗೂ ಮಾರ್ಕ್ ವುಡ್ ಕಣಕ್ಕಿಳಿಯಬಹುದು. ಇದಾಗ್ಯೂ 11ನೇ ಆಟಗಾರನಾಗಿ ಸ್ಪಿನ್ನರ್ ಶೋಯೆಬ್ ಬಶೀರ್ ಆಡಲಿದ್ದಾರಾ ಅಥವಾ ವೇಗಿ ಗ್ಯಾಸ್ ಅಟ್ಕಿನ್ಸನ್ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆ.

ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಇಂಗ್ಲೆಂಡ್ ತಂಡ ಸಜ್ಜಾಗಿದೆ. ಅದು ಸಹ 2 ದಿನ ಮೊದಲ 12 ಆಟಗಾರರನ್ನು ಪ್ರಕಟಿಸುವ ಮೂಲಕ. ಹೀಗಾಗಿ ಪರ್ತ್ ಟೆಸ್ಟ್ ನಲ್ಲೇ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಮೊದಲ ಟೆಸ್ಟ್ ಗೆ ಇಂಗ್ಲೆಂಡ್ ಆಡುವ ಬಳಗ:

  • ಬೆನ್ ಸ್ಟೋಕ್ಸ್ (ನಾಯಕ)
  • ಜೋಫ್ರಾ ಆರ್ಚರ್
  • ಗ್ಯಾಸ್ ಅಟ್ಕಿನ್ಸನ್
  • ಶೋಯೆಬ್ ಬಶೀರ್
  • ಹ್ಯಾರಿ ಬ್ರೂಕ್
  • ಬ್ರೈಡನ್ ಕಾರ್ಸ್
  • ಝಾಕ್ ಕ್ರಾಲಿ
  • ಬೆನ್ ಡಕೆಟ್
  • ಓಲೀ ಪಾಪ್
  • ಜೋ ರೂಟ್
  • ಜೇಮೀ ಸ್ಮಿತ್ (ವಿಕೆಟ್ ಕೀಪರ್)
  • ಮಾರ್ಕ್ ವುಡ್.

ಪರ್ತ್ ಟೆಸ್ಟ್ ನಿಂದ ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್, ಜೇಕಬ್ ಬೆಥೆಲ್ ಹಾಗೂ ವಿಲ್ ಜಾಕ್ಸ್ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ: ಪರೀಕ್ಷೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮುಶ್ಫಿಕುರ್ ರಹೀಮ್

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗ್ಯಾಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್, ಓಲಿ ಪಾಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್.



Source link

Leave a Reply

Your email address will not be published. Required fields are marked *