ಬೆಂಗಳೂರು, ನವೆಂಬರ್ 19): ನಗರದ ಡೈರಿ ಸರ್ಕಲ್ ಬಳಿ ಎಟಿಎಂ ವಾಹನದಲ್ಲಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ಪ್ರಕರಣ ತೀವ್ರ ಸ್ವರೂಪದಲ್ಲಿದೆ. ಈ ಪ್ರಕರಣ ಸಂಬಂಧ ಸಿಎಂನವರು ಗೃಹ ಸಚಿವ ಡಾ ಜಿ ಪರಮೇಶ್ವರ್ ಜೊತೆ ಸಭೆ ಮಾಡಿದ್ದು, ಪ್ರಕರಣದ ಮಾಹಿತಿ ಇದೆ. ಬಳಿಕ ಸಚಿವ ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, 24 ಗಂಟೆಯವರೆಗೆ ಪ್ರಕರಣವನ್ನು ಭೇದಿಸುವುದಾಗಿ ಖಡಕ್ ಸೂಚನೆ ನೀಡಿದ್ದಾರೆ. ಆದ್ದರಿಂದ ದರೋಡೆಕೋರರ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಕೋಟಿ ರೂ ಕಳ್ಳತನ: ದರೋಡೆ ಎಲ್ಲಿ-ಹೇಗಾಯ್ತು? ಇಲ್ಲಿದೆ ಸಂಪೂರ್ಣ ವಿವರ
ಇನ್ನು ಬಳಿಕ ಮಾತನಾಡಿದ ಪರಮೇಶ್ವರ್, ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ 11 ಲಕ್ಷ ನಗದು ದರೋಡೆ ಪ್ರಕರಣದ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದೇವೆ. ಹಾಗೆಯೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಆರೋಪಿಗಳ ಪತ್ತೆ ಹಚ್ಚುವಂತೆ ಸೂಚಿಸಿದ್ದಾರೆ. ಈ ಪ್ರಕರಣಕ್ಕೆ ಕೆಲವು ಮಾಹಿತಿ ಸಿಕ್ಕಿದ್ದು, ಅದು ಅಂತಾ ಈಗ ಹೇಳಲು ಆಗಲ್ಲ ಎಂದರು. ಈ ಮೂಲಕ ಪರೋಕ್ಷವಾಗಿ ಆರೋಪಿಗಳ ಸುಳಿವು ಸಿಕ್ಕಿತ್ತು.