ಜೂನಿಯರ್ ಎನ್ ಟಿಆರ್ ಹಾಗೂ ಮಹೇಶ್ ಬಾಬು ಮಧ್ಯೆ ಒಳ್ಳೆಯ ಗೆಳತಿ ಇದೆ. ಜೂನಿಯರ್ ಎನ್ ಟಿಆರ್ ಅವರು ಸದ್ಯ ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಬ್ಯೂಸಿ ಇದ್ದಾರೆ. ಮಹೇಶ್ ಬಾಬು ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಮೌಳಿ ಜೊತೆ ಸಿನಿಮಾ ಮಾಡಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಈ ಬಗ್ಗೆ ಜೂನಿಯರ್ ಎನ್ ಟಿಆರ್ ಅವರು ಈ ಮೊದಲೇ ಎಚ್ಚರಿಕೆ ನೀಡಿದ್ದರು.
ರಾಜಮೌಳಿ ಅವರು ಏನೇ ಮಾಡಿದರೂ ಪರ್ಫೆಕ್ಷನ್‌ನ ಇಷ್ಟಪಡುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಅವರ ಜೊತೆ ಸಿನಿಮಾ ಮಾಡಬೇಕು ಎಂದರೆ ಅವರು ಬೇರೆ ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಳ್ಳಬಾರದು. ಇದನ್ನು ಒಪ್ಪಿದ ಬಳಿಕವೇ ಅವರು ಸಿನಿಮಾ ಮಾಡುತ್ತಾರೆ. ಈ ವಿಚಾರದ ಬಗ್ಗೆ ಜೂನಿಯರ್ ಎನ್ ಟಿಆರ್ ಎಚ್ಚರಿಕೆ ನೀಡಿದ್ದರು. ಜೂನಿಯರ್ ಎನ್ ಟಿಆರ್ ಅವರು ‘ಆರ್ ಆರ್ ಆರ್’ ಸಿನಿಮಾದಲ್ಲಿ ರಾಜಮೌಳಿ ಜೊತೆ ನಟಿಸಿದ್ದರು.
‘ರಾಜಮೌಳಿ ಸಿನಿಮಾ ಮಾಡ್ತಾ ಇದೀಯಲ್ಲ, ಅವರು ಎಲ್ಲ ಆಟ ಆಡಿಸ್ತಾರೆ’ ಎಂದು ಜೂನಿಯರ್ ಎನ್ ಟಿಆರ್ ವೇದಿಕೆ ಒಂದರಲ್ಲಿ ಮಹೇಶ್ ಬಾಬುಗೆ ಹೇಳಿದ್ದರು. ಮೊನ್ನೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಸುಸ್ತಾಗಿದ್ದಾರೆ. ಸಿಂಪಲ್ ಆಗಿ ನಡೆದು ಬರ್ತೀನಿ ಎಂದು ಮಹೇಶ್ ಬಾಬು ಹೇಳಿದರಂತೆ. ಆದರೆ, ಇದನ್ನು ರಾಜಮೌಳಿ ಕೇಳಿಲ್ಲ. ವಿಶೇಷವಾದ ಪ್ರವೇಶವನ್ನು ಅವರು ಕೊಡಿಸಿದ್ದಾರೆ. ಸಿಂಪಲ್ ಶರ್ಟ್ ಹಾಕ್ಕೊಂಡು ನನ್ನ ಸ್ಟೈಲ್ ನಲ್ಲಿ ಬರ್ತೀನಿ ಎಂದು ಮಹೇಶ್ ಬಾಬು ಹೇಳಿದರಂತೆ. ಅದೂ ಆಗದು ಎಂದರಂತೆ.
‘ಇದು ಅನುಭವದ ಮಾತು’ ಎಂದು ಜೂನಿಯರ್ ಎನ್ ಟಿಆರ್ ಆ ಸಂದರ್ಭದಲ್ಲಿ ಹೇಳಿದ್ದರು. ಈಗ ಹಾಗೆಯೇ ಆಗಿದೆ. ಮಹೇಶ್ ಬಾಬು ಅವರು ಸಾಕಷ್ಟು ತ್ಯಾಗಗಳನ್ನು ಮಾಡಲು ಸಿದ್ಧರಾಗಿದ್ದಾರೆ. ಶೂಟ್ ಪರ್ಫೆಕ್ಟ್ ಆಗಿ ಬರೋವರೆಗೂ ಬಿಡೋದಿಲ್ಲ.
ಇದನ್ನೂ ಓದಿ: ಮಹೇಶ್ ಬಾಬು vs ಪ್ರಿಯಾಂಕಾ ಚೋಪ್ರಾ; ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?
‘ನಾಟು ನಾಟು..’ ಹಾಡಿನಲ್ಲಿ ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಈ ಹಾಡಿಗಾಗಿ ಸಾಕಷ್ಟು ರೀಟೇಕ್‌ಗಳನ್ನು ಮಾಡಲಾಗಿದೆ. ಇದನ್ನು ಜೂನಿಯರ್ ಎನ್ ಟಿಆರ್ ಅವರು ಅನೇಕ ಬಾರಿ ಹೇಳಿದ್ದು ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.