Headlines

ಬಾರ್ ಮಾಡಲು ಅಡ್ಡಿಯಾಗಿದೆ ಎಂದು ಆಂಜನೇಯ ಸ್ವಾಮಿಯ ದೇವಸ್ಥಾನವೇ ಧ್ವಂಸ!

ಬಾರ್ ಮಾಡಲು ಅಡ್ಡಿಯಾಗಿದೆ ಎಂದು ಆಂಜನೇಯ ಸ್ವಾಮಿಯ ದೇವಸ್ಥಾನವೇ ಧ್ವಂಸ!


ದೇವನಹಳ್ಳಿ, ನವೆಂಬರ್ 20: ಬಾರ್ ಮಾಡಲು ಅಡ್ಡಿಯಾದ ಕಾರಣಕ್ಕೆ ರಾತ್ರೋ ರಾತ್ರಿ ಜೆಸಿಬಿ ತಂದು ಕಿಡಿಗೇಡಿಗಳು ಆಂಜನೇಯ ಸ್ವಾಮಿಯ ದೇವಸ್ಥಾನವನ್ನೇ ಧ್ವಂಸ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಬಾರ್‌ಗೆ ಅನುಮತಿ ಕೋರಿ ಕೆಲವರು ಅರ್ಜಿ ಸಲ್ಲಿಸಿದ್ದರು. ಆದರೆ ಬಾರ್ ಮಾಡಲು ಉದ್ದೇಶಿಸಿರುವ ಜಾಗದ ಬಳಿಯೇ ದೇವಸ್ಥಾನವಿದೆ. ಹೀಗಾಗಿ ಅನುಮತಿ ನೀಡಬಾರದು ಎಂದು ಅಬಕಾರಿ ಇಲಾಖೆಗೆ ದೇವಸ್ಥಾನದ ಸಮಿತಿ ಅರ್ಜಿ ಹಾಕಿತ್ತು. ಇದೇ ಕಾರಣಕ್ಕೆ ಧ್ವಂಸ ಮಾಡಿದ್ದು, ಬೆಳಗ್ಗೆ ವಾಕಿಂಗ್ ಬಂದಿದ್ದವರು ದೇಗುಲ ನೆಲಸಮ ಆಗಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ನಂದಗುಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ದೇವಸ್ಥಾನದ ಭಕ್ತರು ದೌಡಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *