Headlines

U19 World Cup 2026 Schedule: ವಿಶ್ವಕಪ್ ವೇಳಾಪಟ್ಟಿ ಬಂತು; ಭಾರತ, ಪಾಕಿಸ್ತಾನ ಮ್ಯಾಚ್ ಯಾವಾಗ? | U19 Cricket World Cup 2026 Schedule Announced India Vs Pak Clash Details Kvn

U19 World Cup 2026 Schedule: ವಿಶ್ವಕಪ್ ವೇಳಾಪಟ್ಟಿ ಬಂತು; ಭಾರತ, ಪಾಕಿಸ್ತಾನ ಮ್ಯಾಚ್ ಯಾವಾಗ? | U19 Cricket World Cup 2026 Schedule Announced India Vs Pak Clash Details Kvn


15

ವಿಶ್ವಕಪ್ 2026 ವೇಳಾಪಟ್ಟಿ ಅಧಿಕೃತವಾಗಿ ಬಿಡುಗಡೆ

Image Credit : X/BCCI, ICC

ವಿಶ್ವಕಪ್ 2026 ವೇಳಾಪಟ್ಟಿ ಅಧಿಕೃತವಾಗಿ ಬಿಡುಗಡೆ

ಐಸಿಸಿ 2026ರ ಅಂಡರ್ 19 ಪುರುಷರ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಟೂರ್ನಿಗೆ ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಜನವರಿ 15ಕ್ಕೆ ಟೂರ್ನಿ ಆರಂಭವಾಗಿ ಫೆಬ್ರವರಿ 6ಕ್ಕೆ ಮುಗಿಯಲಿದೆ.

25

ಯುಎಸ್ಎ ಜೊತೆ ಭಾರತದ ಮೊದಲ ಪಂದ್ಯ

Image Credit : Getty

ಯುಎಸ್ಎ ಜೊತೆ ಭಾರತದ ಮೊದಲ ಪಂದ್ಯ

ಭಾರತದ ಯುವ ತಂಡ ಈ ಬಾರಿ ‘ಎ’ ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಬಾಂಗ್ಲಾದೇಶ, ಯುಎಸ್ಎ, ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿವೆ. 

ಭಾರತದ ವೇಳಾಪಟ್ಟಿ: ಜ.15-ಯುಎಸ್ಎ, ಜ.17-ಬಾಂಗ್ಲಾದೇಶ, ಜ.24-ನ್ಯೂಜಿಲೆಂಡ್. ಎಲ್ಲಾ ಪಂದ್ಯಗಳು ಬುಲವಾಯೊದಲ್ಲಿ ನಡೆಯಲಿವೆ.

35

ಹೊಸ ತಂಡಗಳ ಎಂಟ್ರಿ; ಟಾಂಜಾನಿಯಾಗೆ ಐತಿಹಾಸಿಕ ಅವಕಾಶ

Image Credit : Asianet News

ಹೊಸ ತಂಡಗಳ ಎಂಟ್ರಿ; ಟಾಂಜಾನಿಯಾಗೆ ಐತಿಹಾಸಿಕ ಅವಕಾಶ

ಈ ವಿಶ್ವಕಪ್‌ನ ವಿಶೇಷವೆಂದರೆ ಟಾಂಜಾನಿಯಾ ತಂಡದ ಚೊಚ್ಚಲ ಬಾರಿಗೆ ಅಂಡರ್-19 ವಿಶ್ವಕಪ್ ಆಡುವ ಅರ್ಹತೆ ಪಡೆದಿದೆ. ಜಪಾನ್ ಕೂಡ 2020ರ ನಂತರ ಮತ್ತೆ ಭಾಗವಹಿಸುತ್ತಿದೆ. ಭಾರತ ‘ಎ’ ಗುಂಪಿನಲ್ಲಿದ್ದರೆ, ಪಾಕಿಸ್ತಾನ ‘ಬಿ’ ಗುಂಪಿನಲ್ಲಿದೆ.

45

ಸೂಪರ್ ಸಿಕ್ಸ್, ಸೆಮೀಸ್ ಫಾರ್ಮ್ಯಾಟ್; ಭಾರತ-ಪಾಕ್ ಪಂದ್ಯ ಸೂಪರ್ ಹಂತದಲ್ಲೇ

Image Credit : X/BCCI

ಸೂಪರ್ ಸಿಕ್ಸ್, ಸೆಮೀಸ್ ಫಾರ್ಮ್ಯಾಟ್; ಭಾರತ-ಪಾಕ್ ಪಂದ್ಯ ಸೂಪರ್ ಹಂತದಲ್ಲೇ

ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಬೇರೆ-ಬೇರೆ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಲೀಗ್‌ ಹಂತದಲ್ಲಿ ಮುಖಾಮುಖಿಯಾಗುತ್ತಿಲ್ಲ. ಆದರೆ ಸೂಪರ್ ಸಿಕ್ಸ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಪ್ರತಿ ಗುಂಪಿನಿಂದ ಟಾಪ್-3 ತಂಡಗಳು ಸೂಪರ್ ಸಿಕ್ಸ್‌ಗೆ, ಅಲ್ಲಿಂದ ಟಾಪ್-2 ತಂಡಗಳು ಸೆಮಿಸ್‌ಗೆ ಪ್ರವೇಶ ಪಡೆಯಲಿವೆ.

55

ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದೇನು?

Image Credit : X/BCCI

ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದೇನು?

U-19 ವಿಶ್ವಕಪ್ ಭವಿಷ್ಯದ ಸೂಪರ್‌ಸ್ಟಾರ್‌ಗಳಿಗೆ ಅಡಿಪಾಯ. ಕೊಹ್ಲಿ, ಸ್ಮಿತ್‌ರಂತಹ ಆಟಗಾರರು ಇಲ್ಲಿಂದಲೇ ಬೆಳೆದವರು. ಈ ಬಾರಿ ಹೊಸ ಪ್ರತಿಭೆಗಳು ಹೊರಹೊಮ್ಮಲಿವೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *