Video: ಇದು ಅಪ್ಪಟ ಕನ್ನಡದ ಅಂಗಡಿ; ಇಲ್ಲಿ ಸಿಗೋ ವಸ್ತುಗಳೆಲ್ಲ ಹಳದಿ, ಕೆಂಪು ಬಣ್ಣದ್ದೇ

Video: ಇದು ಅಪ್ಪಟ ಕನ್ನಡದ ಅಂಗಡಿ; ಇಲ್ಲಿ ಸಿಗೋ ವಸ್ತುಗಳೆಲ್ಲ ಹಳದಿ, ಕೆಂಪು ಬಣ್ಣದ್ದೇ


ಹಾಸನ, ನವೆಂಬರ್ 20: ಕನ್ನಡ ರಾಜ್ಯೋತ್ಸವದ (ಕನ್ನಡ ರಾಜ್ಯೋತ್ಸವ) ಎಂದರೆ ಕನ್ನಡಿಗರಿಗೆ ಹಬ್ಬವೇ ಸರಿ. ಹೀಗಾಗಿ ಈ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ತಿಂಗಳ ಕಾಲ ಆಚರಣೆಗಳು ಜೋರಾಗಿಯೇ ನಡೆಯುತ್ತಿರುತ್ತದೆ. ಈ ತಿಂಗಳಿನಲ್ಲಿ ಶಾಲೆಗಳು, ಕಾಲೇಜುಗಳು ಸೇರಿದಂತೆ ಸಂಘ ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಅಭಿಮಾನವನ್ನು ಪ್ರದರ್ಶಿಸುತ್ತಾರೆ. ಆದರೆ ಈ ಕನ್ನಡ (ಕನ್ನಡ) ಅಭಿಮಾನಿಯ ಸಂಭ್ರಮಾಚರಣೆಯು ವಿಭಿನ್ನವಾಗಿದೆ. ಕನ್ನಡದ ಧ್ವಜದ ಬಣ್ಣವಾದ ಹಳದಿ ಮತ್ತು ಕೆಂಪು ಬಣ್ಣದ ಪ್ರಾಡಕ್ಟ್‌ಗಳು ಮಾತ್ರ ಈ ಅಂಗಡಿಯಲ್ಲಿ ದೊರೆಯುತ್ತದೆ. ನವೆಂಬರ್ ತಿಂಗಳಿನಲ್ಲಿ ಕನ್ನಡ ಭಾವುಟದ ಬಣ್ಣದ ಪ್ರಾಡಕ್ಟ್‌ಗಳನ್ನೇ ಮಾರಾಟ ಮಾಡಿ ತಮ್ಮ ಕನ್ನಡ ಅಭಿಮಾನವನ್ನು ತೋರುತ್ತಾರೆ. ಬಾಸ್ಕೆಟ್, ಬಕೆಟ್ ಕುರ್ಚಿಯಿಂದ ಹಿಡಿದು ಪ್ರತಿಯೊಂದು ವಸ್ತುಗಳು ಕೆಂಪು ಹಾಗೂ ಹಳದಿ ಬಣ್ಣದಲ್ಲೇ ದೊರೆಯುವುದು ವಿಶೇಷ. ಅಂಗಡಿಯಾದ ಶ್ರೀ ಮಾರುತಿ ಸ್ಟೋರ್ ಶಕ್ತಿ ಟೂಲ್ಸ್ ಇರುವುದು ಹಾಸನ ಜಿಲ್ಲೆಯ ಬೇಲೂರಿನಲ್ಲಿ. ಈ ವಿಶೇಷ ಹಾಗೂ ಆಕರ್ಷಕ ಅಂಗಡಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದು ಅಪ್ಪಟ ಕನ್ನಡಿಗನ ಅಂಗಡಿ; ವಿಶೇಷತೆ ಇಲ್ಲಿದೆ ನೋಡಿ

ಮಸಾಲಾ ಚಾಯ್ ಮೀಡಿಯಾ (ಮಸಾಲಾ ಚಾಯ್ ಮೀಡಿಯಾ) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಕಾಂಟೆಂಟ್ ಕ್ರಿಯೇಟರ್ ಕನ್ನಡಿಗರ ಅಂಗಡಿಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಮಾಲೀಕ ನಾವು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಕರ್ನಾಟಕದ ಭಾವುಟದ ಬಣ್ಣದ ಪ್ರಾಡಕ್ಟ್ ಗಳನ್ನೇ ಮಾರಾಟ ಮಾಡ್ತೇವೆ. ಈ ಪ್ರಾಡಕ್ಟ್ ಗಳಿಗೆ ಶೇಕಡಾದಷ್ಟು ರಿಯಾಯಿತಿ ನೀಡುತ್ತೆವೆ. ಇದರ ಮೂಲ ಉದ್ದೇಶವೇ ಕನ್ನಡ ಕಲಿಯಬೇಕು, ಕನ್ನಡ ಉಳಿಸಬೇಕು, ಕನ್ನಡ ತಾಯಿಗೆ ಗೌರವ ಕೊಡಬೇಕು ಎನ್ನಬೇಕು. 2008 ರಲ್ಲಿ ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿದ್ದರು. ಅಲ್ಲಿಂದ ಈ ವಿಭಿನ್ನ ರೀತಿ ಪ್ರಾಡಕ್ಟ್ ಗಳನ್ನು ಮಾರಾಟ ಮಾಡ್ತಾ ಇದ್ದೇನೆ ಎನ್ನುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಲಾದ ಸ್ಕೂಟರ್ ಹಳದಿ ಮತ್ತು ಕೆಂಪು ಬಣ್ಣದಲ್ಲಿ ಇರುವುದು ಮತ್ತೊಂದು ವಿಶೇಷ ಎನ್ನಬಹುದು. ಇನ್ನು ಈ ವ್ಯಕ್ತಿಯ ಹಣೆ ಮೇಲೆ ಕೆಂಪು ಹಳದಿ ಬಣ್ಣಗಳು ರಾರಾಜಿಸುತ್ತಿವೆ ಹಾಗೂ ಕೈ ಮೇಲೆ ಕನ್ನಡಿಗ ಟ್ಯಾಟೂ ಹಾಕಿಸಿಕೊಂಡಿರುವುದನ್ನು ಕಾಣಬಹುದು.

ಇದನ್ನೂ ಓದಿ:ಕನ್ನಡ ಅಕ್ಷರ ಮಾಲೆಯಲ್ಲಿ ಅಡಗಿದೆ ನಗುವಿನ ಗುಟ್ಟು, ಅದೇಗೆ ಅಂತೀರಾ?

ಈ ವಿಡಿಯೋ ಇದುವರೆಗೆ ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಓ ನಮ್ಮ ಬೇಲೂರ್, ಚಿಕ್ಕಮಂಗಳೂರು ರೋಡ್ ನಮ್ದು ಬೇಲೂರ್. ಶಿಲ್ಪಾ ಕಲೆಗಳು ತವರೂರು ನಮ್ಮ ಬೇಲೂರು. ಇತರರು, ಮಾದರಿ ಕನ್ನಡ ಅಭಿಮಾನಿ ಉದ್ಯೋಗದಲ್ಲಿಯೇ ಕನ್ನಡ ಅಭಿಮಾನವನ್ನು ಕಂಡುಕೊಂಡಿರುವ ಇವರಿಗೆ ಅನಂತ ಅಭಿನಂದನೆಗಳು ಹೃದಯಪೂರ್ವಕ ಧನ್ಯವಾದಗಳು ಶುಭದಿನ ಎಲ್ಲರಿಗೂ ಒಳಿತಾಗಲಿ ಎಲ್ಲರಲ್ಲೂ ದೇವರನ್ನು ನೋಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ನಿಮ್ಮ ಕನ್ನಡದ ಅಭಿಮಾನಕ್ಕೆ ನಮ್ಮ ಕಡೆಯಿಂದ ಒಂದು ದೊಡ್ಡ ನಮಸ್ಕಾರ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:45 pm, ಗುರುವಾರ, 20 ನವೆಂಬರ್ 25





Source link

Leave a Reply

Your email address will not be published. Required fields are marked *