ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎನ್ನುವಂತೆ ತಂದೆ ಮಾಡಿದ ತಪ್ಪಿಗೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎನ್ನುವಂತೆ ತಂದೆ ಮಾಡಿದ ತಪ್ಪಿಗೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ


ಕಾರವಾರ, ನವೆಂಬರ್ 20: ತಂದೆ ಪಡೆದ ಸಾಲ ಮರುಕಳಿಸಿದ್ದಕ್ಕೆ 10 ವರ್ಷದ ಮಗಳ ಮೇಲೆ ವ್ಯಕ್ತಿಯೋರ್ವ ದೌರ್ಜನ್ಯವೆಸಗಿರುವಂತಹ (ಲೈಂಗಿಕ ಕಿರುಕುಳ) ಘಟನೆ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣಾ ಸಂಭವಿಸಿದೆ. ಮತೀನ್ ಎಂಬಾತನಿಂದ ದೌರ್ಜನ್ಯವೆಸಗಲಾಗಿದೆ. ಸದ್ಯ ಶಿರಸಿ (ಸಿರ್ಸಿ) ಗ್ರಾಮಾಂತರ ಠಾಣೆಗೆ ಬಾಲಕಿ ತಾಯಿ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ನಡೆದದ್ದೇನು?

ಬಾಲಕಿಯ ತಂದು ಸಂಘದಿಂದ ಪಡೆದ ಸಾಲ ಮರುಕಳಿಸದೆ ಸತಾಯಿಸುತ್ತಿದ್ದರಂತೆ. ಹೀಗಾಗಿ ಕೊಟ್ಟ ಸಾಲ ವಾಪಸ್ ಕೇಳಲು ಆರೋಪಿ ಮತೀನ್ ನಿನ್ನೆ ಸಂಜೆ ಅವರ ಮನೆಗೆ ಹೋಗಿದ್ದಾರೆ. ಈ ವೇಳೆ 10 ವರ್ಷದ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲ ಅಂತಾ ಬಾಲಕಿ ಹೇಳಿದ್ದಾಳೆ. ಈ ವೇಳೆ ಬಲವಂತವಾಗಿ ಬಾಲಕಿ ಮೇಲೆ ದೌರ್ಜನ್ಯವೆಸಗಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮೈಸೂರು: ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಗಾಗಿ ಕಿರುಕುಳ ಆರೋಪ

ಇತ್ತ ತಾಯಿಗೆ ವಿಷಯ ತಿಳಿಯದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿ ಮತೀನ್ ಪರಾರಿ ಆಗಿದ್ದು, ಪೊಲೀಸರು ಹುಡುಕಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ಸಂಖ್ಯೆ ಏರಿಕೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ಸಂಖ್ಯೆ ಏರಿಕೆ ಕಂಡಿದ್ದು, 17 ರಿಂದ 18 ವರ್ಷದ ಒಳಗಿನ ಬಾಲಕರು 40% ಹಾಗೂ 19 ರಿಂದ 25 ವರ್ಷದೊಳಗಿನ ಯುವಕರು 49% ಪೊಕ್ಸೋ ಕಾಯ್ದೆಯಡಿ ಜೈಲಿಗೆ ಸೇರುತ್ತಿದ್ದಾರೆ. ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು: ವಾಕಿಂಗ್ ಗೆ ಹೋಗೋ ಮಹಿಳೆಯರಿಗೆ ಎಚ್ಚರಿಕೆ; ನಾಯಿಯನಲ್ಲದೇ ಯುವತಿಯನ್ನೂ ಮುದ್ದಿಸಲು ಹೋದ ಕಾಮಂಧ

2023ರಲ್ಲಿ 68 ಪ್ರಕರಣ, 2024ರಲ್ಲಿ 21 ಪ್ರಕರಣ, 2025ರಲ್ಲಿ 63 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯದಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆದಿದ್ದು, ಕಾರವಾರದ ಕಾರಾಗೃಹದಲ್ಲಿ 58 ಜನ ಪೋಕ್ಸೋ ಕಾಯ್ದೆಯಡಿ ಶಿಕ್ಷಿತರಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಪೋಕ್ಸೋ ಪ್ರಕರಣದಲ್ಲಿ ಅಪ್ರಾಪ್ತ ಬಾಲಕರೇ ಅಪರಾಧಿಗಳಾಗುತ್ತಿದ್ದಾರೆ. ಪೋಷಕರ ಜವಬ್ದಾರಿ ಜೊತೆ ಈ ಬಗ್ಗೆ ಪ್ರಾಥಮಿಕ ಶಿಕ್ಷಣದಲ್ಲೇ ಜಾಗೃತಿ ಮೂಡಿಸುವ ಅವಶ್ಯತೆಯಿದ್ದು, ಇಂತಹ ಪ್ರಕರಣ ನಡೆಯದಂತೆ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 4:13 pm, ಗುರುವಾರ, 20 ನವೆಂಬರ್ 25



Source link

Leave a Reply

Your email address will not be published. Required fields are marked *