16

Image Credit : Getty
11 ಟೆಸ್ಟ್ ಆಡುವ ದೇಶಗಳ ಎದುರು ಹೋಪ್ ಸೆಂಚೂರಿ
ಟೆಸ್ಟ್ ಆಡುವ ವಿಶ್ವದ ಎಲ್ಲಾ 11 ತಂಡಗಳ ವಿರುದ್ಧ ಶತಕ(ಟೆಸ್ಟ್, ಏಕದಿನ, ಟಿ20 ಸೇರಿ) ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ವೆಸ್ಟ್ಇಂಡೀಸ್ ಬ್ಯಾಟರ್ ಶಾಯ್ ಹೋಪ್ ಪಾತ್ರರಾಗಿದ್ದಾರೆ.
26
Image Credit : Social media
ಶಾಯ್ ಹೋಪ್ ಶತಕ ವ್ಯರ್ಥ
ಅವರು ಬುಧವಾರ ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ 109 ರನ್ ಸಿಡಿಸಿದರು. ಇದರ ಹೊರತಾಗಿಯೂ ವಿಂಡೀಸ್ ಗೆಲ್ಲಲಿಲ್ಲ.
36
Image Credit : Getty
ವಿಂಡೀಸ್ ಎದುರು ಗೆದ್ದ ಕಿವೀಸ್
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 9 ವಿಕೆಟ್ ಕಳೆದುಕೊಂಡು 247 ರನ್ ಬಾರಿಸಿತ್ತು. ಈ ಕುರಿಯನ್ನು ಆತಿಥೇಯ ಕಿವೀಸ್ ತಂಡವು ಇನ್ನೂ 3 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತು.
46
Image Credit : x
ದ್ರಾವಿಡ್ 9 ದೇಶಗಳ ಎದುರು ಶತಕ
ಇನ್ನು ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಟೆಸ್ಟ್ ಆಡುವ ಎಲ್ಲಾ 9 ದೇಶಗಳ ವಿರುದ್ಧ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದರು.
56
Image Credit : Getty
2017ರಲ್ಲಿ ಟೆಸ್ಟ್ ಅರ್ಹತೆ ಪಡೆದ ಆಫ್ಘಾನಿಸ್ತಾನ& ಐರ್ಲೆಂಡ್
ಆದರೆ ಆಗ ಅಫ್ಘಾನಿಸ್ತಾನ, ಐರ್ಲೆಂಡ್ಗೆ ಟೆಸ್ಟ್ ಅರ್ಹತೆ ಸಿಕ್ಕಿರಲಿಲ್ಲ. ಈ ಎರಡು ತಂಡಗಳಿಗೆ ಟೆಸ್ಟ್ ಆಡಲು ಅರ್ಹತೆ ಸಿಕ್ಕಿದ್ದು 2017ರಲ್ಲಿ.
66
Image Credit : X
ವಿರಾಟ್ ಕೊಹ್ಲಿ 10 ದೇಶಗಳ ಎದುರು ಶತಕ
ಈಗ ವಿಂಡೀಸ್ ಸೇರಿ ಒಟ್ಟು 12 ತಂಡಗಳು ಟೆಸ್ಟ್ ಆಡುತ್ತಿವೆ. ವಿರಾಟ್ ಕೊಹ್ಲಿ ಐರ್ಲೆಂಡ್ ಹೊರತುಪಡಿಸಿ ಬೇರೆಲ್ಲಾ ದೇಶದ ವಿರುದ್ಧ ಶತಕ ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.