ರಜನೀಕಾಂತ್-ಕಮಲ್ ಹಾಸನ್ ಇಂದಾಗಿ ಸಂಕಷ್ಟಕ್ಕೆ ಸಿಲುಕಿತು ಜೂ ಎನ್​​ಟಿಆರ್ ಸಿನಿಮಾ

ರಜನೀಕಾಂತ್-ಕಮಲ್ ಹಾಸನ್ ಇಂದಾಗಿ ಸಂಕಷ್ಟಕ್ಕೆ ಸಿಲುಕಿತು ಜೂ ಎನ್​​ಟಿಆರ್ ಸಿನಿಮಾ


ರಜನೀಕಾಂತ್ (ರಜಿನಿಕಾಂತ್) ಹಾಗೂ ಕಮಲ್ ಹಾಸನ್ ಅವರು ಇತ್ತೀಚೆಗಷ್ಟೇ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಫಿಲಂಸ್ ಮೂಲಕ ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ರಜನೀಕಾಂತ್ ನಾಯಕರಾಗಿ ನಟಿಸಲಿದ್ದಾರೆ. ಸಿನಿಮಾ ಘೋಷಣೆಯಾದ ಒಂದೇ ವಾರದಲ್ಲಿ ಸಿನಿಮಾದ ನಿರ್ದೇಶಕ ಸುಂದರ್ ಸಿ, ಈ ಸಿನಿಮಾದಿಂದ ಹೊರ ನಡೆದಿದ್ದಾರೆ. ಆದರೆ ಇದೀಗ ಹೊಸ ನಿರ್ದೇಶಕರು ಹುಡುಕಿದ್ದಾರೆ ಆದರೆ ಜೂ ಎನ್ ಟಿಆರ್ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ.

ನಿರ್ದೇಶಕ ಸುಂದರ್ ಸಿ, ರಜನಿ-ಕಮಲ್ ಸಿನಿಮಾದಿಂದ ಹೊರ ನಡೆದ ಬಳಿಕ ಆ ಸಿನಿಮಾವನ್ನು ತಮಿಳಿನ ಯುವ ನಿರ್ದೇಶಕ ನೆಲ್ಸನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನೆಲ್ಸನ್ ರಜನೀಕಾಂತ್ ಜೊತೆಗೆ ‘ಜೈಲರ್’ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದೆ. ಈಗ ‘ಜೈಲರ್ 2’ ಸಿನಿಮಾ ಸಹ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾ ಸಹ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಲಿದೆ. ಈಗ ರಜನೀಕಾಂತ್ ರ ಮತ್ತೊಂದು ಹೊಸ ಸಿನಿಮಾವನ್ನು ನೆಲ್ಸನ್ ಅವರೇ ನಿರ್ದೇಶನ ಮಾಡುವ ಸಾಧ್ಯತೆ ದಟ್ಟವಾಗಿದೆ.

ಆದರೆ ಇದರಿಂದ ಜೂ ಎನ್ ಟಿಆರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂ ಎನ್ ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಈ ಸಿನಿಮಾದ ಬಳಿಕ ನೆಲ್ಸನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲು ಜೂ ಎನ್ ಟಿಆರ್ ಅಣಿಯಾಗಿದ್ದರು. ಆದರೆ ಈಗ ನೆಲ್ಸನ್, ರಜನೀಕಾಂತ್ ನಟನೆಯ ಸಿನಿಮಾ ನಿರ್ದೇಶಿಸಲು ಮುಂದಾಗಿರುವ ಕಾರಣ ಜೂ ಎನ್ ಟಿಆರ್ ಜೊತೆಗಿನ ಸಿನಿಮಾ ನೆನೆಗುದಿಗೆ ಬಿದ್ದಂತಾಗಿದೆ.

ಇದನ್ನೂ ಓದಿ:’ವಾರ್ 2′ ಸೋತರೂ ಜೂ ಎನ್ ಟಿಆರ್‌ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್‌ಎಫ್

ಹಾಗೆಂದು ಜೂ ಎನ್ ಟಿ ಖಾಲಿ ಆಗೇನೂ ಕೂರಾಗಿದೆ. ಪ್ರಶಾಂತ್ ನೀಲ್ ಸಿನಿಮಾ ಬಳಿಕ ಅವರ ಕೈಯಲ್ಲಿ ಮೂರು ಸಿನಿಮಾಗಳಿದ್ದವು. ಅದರಲ್ಲಿ ನೆಲ್ಸನ್ ಸಿನಿಮಾ ಕೂಡ ಒಂದಾಗಿತ್ತು. ಆದರೆ ಈಗ ನೆಲ್ಸನ್ ಸಿನಿಮಾ ತಡವಾಗುತ್ತಿರುವ ಕಾರಣ, ಅವರು ತ್ರಿವಿಕ್ರಮ್ ಜೊತೆಗಿನ ಸಿನಿಮಾವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ತ್ರಿವಿಕ್ರಮ್ ಪ್ರಸ್ತುತ ವಿಕ್ಟರಿ ವೆಂಕಟೇಶ್ ನಟನೆಯ ಹಾಸ್ಯಮಿಶ್ರಿತ ಕೌಟುಂಬಿಕ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಶೀಘ್ರವೇ ಮುಗಿಯಲಿದೆ. ತ್ರಿವಿಕ್ರಮ್ ಮತ್ತು ಜೂ ಎನ್ ಟಿಆರ್ ಸಿನಿಮಾ ಬೇಗನೇ ಶುರುವಾಗುವ ಸಾಧ್ಯತೆ ಇದೆ. ಇದರ ಹೊರತಾಗಿ ಜೂ ಎನ್ ಟಿಆರ್ ಅವರು ‘ದೇವರ 2’ ಸಿನಿಮಾದಲ್ಲಿ ಸಹ ನಟಿಸಬೇಕಾಗಿದೆ. ತ್ರಿವಿಕ್ರಮ್ ಅವರೊಟ್ಟಿಗಿನ ಸಿನಿಮಾ ಮುಗಿದ ಬಳಿಕ ‘ದೇವರ 2’ ಸಿನಿಮಾ ಶುರುವಾಗಲಿದೆ. ಅದಾದ ಬಳಿಕ ಯಶ್ ಚೋಪ್ರಾ ಜೊತೆಗೆ ಹಿಂದಿಯಲ್ಲಿ ಒಂದು ಸ್ಟಾಂಡ್ ಅಲೋನ್ ಸಿನಿಮಾ ಸಹ ಜೂ ಎನ್ ಟಿಆರ್ ಮಾಡಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *