ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ ‘ಫ್ಯಾಮಿಲಿ ಮ್ಯಾನ್’ ಸರಣಿ ಗಮನ ಸೆಳೆದಿವೆ. ಈ ಸರಣಿಯಲ್ಲಿ ಎರಡು ಭಾಗಗಳು ಬಂದು ಹಿಟ್ ಆದವು. ಈಗ ಮೂರನೇ ಭಾಗದ ರಿಲೀಸ್ ಆಗಿದೆ. ಈ ಸರಣಿ ಕೂಡ ವೀಕ್ಷಕರ ಗಮನ ಸೆಳೆದಿದೆ. ಇಂದು (ನವೆಂಬರ್ 21) ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗಿದ್ದು, ಇದನ್ನು ನೋಡಿದವರು ಟ್ವಿಟರ್ ಮೂಲಕ ವಿಮರ್ಶೆ ಪ್ರಕಟಿಸಿದ್ದಾರೆ. ಸುಮಾರು ಸರಣಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಮೊದಲ ಸೀಸನ್ ಅಲ್ಲಿ ದೆಹಲಿಯಲ್ಲಿ ಗ್ಯಾಸ್ ಅಟ್ಯಾಕ್ ಆಗುತ್ತದೆ. ಇದನ್ನು ಶ್ರೀಕಾಂತ್ ತಡೆಯುವ ಪ್ರಯತ್ನ ಮಾಡುತ್ತಾನೆ. ಆದರೆ, ಸಂಪೂರ್ಣವಾಗಿ ಯಶಸ್ಸು ಕಾಣೋದಿಲ್ಲ. ಒಂದಷ್ಟು ಸಾವು-ನೋವು ಆಗುವುದಿಲ್ಲ. ಎರಡನೇ ಪಾರ್ಟ್‌ನಲ್ಲಿ ಶ್ರೀಲಂಕಾ ಎಲ್ ಟಿಟಿ ಹಾಗೂ ಐಸಿಸ್ ಒಟ್ಟಾಗಿ ಚೆನ್ನೈನಲ್ಲಿ ಪ್ರಧಾನಿ ಮೇಲೆ ದಾಳಿ ಮಾಡಲು ಮುಂದಾದಾಗ ಶ್ರೀಕಾಂತ್ ಅದನ್ನು ತಡೆಯುತ್ತಾರೆ.
ಭಾಯ್ ಫರ್ಜಿ ಮತ್ತು ದಿ ಫ್ಯಾಮಿಲಿ ಮ್ಯಾನ್ ಸಂಪರ್ಕ ಹೊಂದಿದ್ದಾರೆ, ಮತ್ತು ಫರ್ಜಿ ಎಪಿ 4 ರಲ್ಲಿ ಮೈಕೆಲ್ ಶ್ರೀಕಾಂತ್ ಅವರನ್ನು ಸಹಾಯಕ್ಕಾಗಿ ಕರೆ ಮಾಡುವ ದೃಶ್ಯವನ್ನು ನೋಡಿದಾಗ ನನಗೆ ಗೊತ್ತಾಯಿತು, ಮತ್ತು ಈಗ ಶ್ರೀಕಾಂತ್ ಅವರನ್ನು ಮರಳಿ ಕರೆದಿದ್ದಾರೆ. ಇದು ಅನಿರೀಕ್ಷಿತವಾಗಿತ್ತು, ಆದರೆ ನಾನು ಅದನ್ನು ಊಹಿಸಿದೆ …#ದಿ ಫ್ಯಾಮಿಲಿ ಮ್ಯಾನ್ ಆನ್ ಪ್ರೈಮ್ #ದಿ ಫ್ಯಾಮಿಲಿ ಮ್ಯಾನ್3 pic.twitter.com/P5gAwGlapM
– 𝒑. (@weeknddxboy) ನವೆಂಬರ್ 21, 2025
ಕಳೆದ ಸೀಸನ್‌ಗಳಿಗೆ ಹೋಲಿಸಿದರೆ ಈ ಸೀಸನ್‌ನಲ್ಲಿ ಹೆಚ್ಚು ಇಂಟಿಮೇಟ್ ದೃಶ್ಯಗಳು ಇವೆ. ಈ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತಿದೆ. ಈ ಭಾಗದಲ್ಲಿ ನಡೆಯುತ್ತಿರುವ ಧಂಗೆ ಹಾಗೂ ಅದನ್ನು ಬಳಸಿಕೊಳ್ಳಲು ವಿದೇಶಿ ದುಷ್ಟ ಶಕ್ತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸಲಾಗಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಮ್ಯಾನ್ 3’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಪಾತ್ರ ಹೇಗಿದೆ? ಏನನ್ನು ನಿರೀಕ್ಷಿಸಬಹುದು?
‘ಫ್ಯಾಮಿಲಿ ಮ್ಯಾನ್ 1’ ಸರಣಿಯಲ್ಲಿ ಶ್ರೀಕಾಂತ್ ಪತ್ನಿ ಸುಚಿತ್ರಾ ಸಹೋದ್ಯೋಗಿ ಜೊತೆ ಮೀಟಿಂಗ್ ಒಂದಕ್ಕೆ ತೆರಳಿದ್ದಳು. ಇವರ ಮಧ್ಯೆ ಏನಾದರೂ ನಡೆದಿತ್ತೇ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿತ್ತು. ಇದಕ್ಕೆ ಈ ಸರಣಿಯಲ್ಲಿ ಉತ್ತರ ನೀಡಿಲ್ಲವಂತೆ. ‘ಫರ್ಜಿ’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಧ್ವನಿ ಇತ್ತು. ಈಗ ಈ ಸರಣಿಯಲ್ಲಿ ವಿಜಯ್ ಸೇತುಪತಿ ಅವರು ಅತಿಥಿ ಪಾತ್ರಗಳನ್ನು ಮಾಡಿದ್ದಾರೆ. ಹಲವು ಟ್ವಿಸ್ಟ್‌ಗಳು ಸರಣಿಯಲ್ಲಿವೆ. ಹೊಸ ಹೊಸ ಪಾತ್ರಗಳು ಪರಿಚಯಗೊಂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.