ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ದಾಮೋದರನ್ ಆತಂಕ

ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ದಾಮೋದರನ್ ಆತಂಕ


ಜನವರಿ, ನವೆಂಬರ್ 21: ಷೇರು ಮಾರುಕಟ್ಟೆಯಷೇರು ಮಾರುಕಟ್ಟೆ) ಇತಿಹಾಸದಲ್ಲೇ ಅತಿ ಹೀನಾಯ ಹಿನ್ನಡೆಯ ಪರ್ವ ಆರಂಭವಾಗಿದೆ ಎಂದು ಕೆಲ ಜಾಗತಿಕ ಮಾರುಕಟ್ಟೆ ತಜ್ಞರು ಕೆಲ ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ. ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಕರ್ತೃ ರಾಬರ್ಟ್ ಕಿಯೋಸಾಕಿಯಂತೂ ಬಾರಿ ಬಾರಿ ಇದನ್ನು ಹೇಳುತ್ತಲೇ ಇದ್ದಾರೆ. ಇದೀಗ ಅಮೆರಿಕದ ಷೇರುಪೇಟೆಯ ವ್ಯಾಲ್ಯುಯ ಎಕ್ಸ್‌ಪರ್ಟ್ ಎನಿಸಿರುವ ಪ್ರೊ| ಅಶ್ವಥ್ ದಾಮೋದರನ್ (ಪ್ರೊ. ಅಶ್ವಥ್ ದಾಮೋದರನ್) ಕೂಡ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ಸ್ಕಾಲೋವೇ ಎಂಬ ಯೂಟ್ಯೂಬ್ ವಾಹಿನಿಯ ಕ್ಯಾಸ್ಟ್‌ನಲ್ಲಿ ಮಾತನಾಡುತ್ತಿದ್ದ ಯೂನಿವರ್ಸಿಟಿಯ ಪ್ರೊಫೆಸರ್ ಆಗಿರುವ ಅಶ್ವಥ್ ದಾಮೋದರನ್ ಅವರು ತಮ್ಮ ಹೂಡಿಕೆಯ ಜೀವನದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯ ಭೀಕರ ಕುಸಿತದ ಸಾಧ್ಯತೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಾಸಿವ್ ಫಂಡ್‌ಗಳಲ್ಲಿ ವಿಪರೀತ ಹೂಡಿಕೆ ಆಗುತ್ತಿರುವುದೇ ಮಾರುಕಟ್ಟೆ ಕುಸಿತಕ್ಕೆ ಕಾರಣ?

ಅಶ್ವಥ್ ದಾಮೋದರನ್ ಅವರು ಮಾರುಕಟ್ಟೆ ಕುಸಿತಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ. ಪಾಸಿವ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿರುವುದು ಮತ್ತು ಇಂಡೆಕ್ಸ್ ಫಂಡ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ರಕ್ಷಣೆಯ ಕೋಟೆ ಒಡೆಯಲು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಸೇರಿ ಶ್ರೀಮಂತಿಕೆ ಹೆಚ್ಚಿಸಬಲ್ಲ ಮೂರು ಕ್ಷೇತ್ರಗಳಿವು: ಸಿಎ ಕೌಶಿಕ್ ಅನಿಸಿಕೆ

ಮಾರುಕಟ್ಟೆಗಳು ಕುಸಿಯುವುದರ ಜೊತೆಗೆ, ಮಾರುಕಟ್ಟೆ ಪ್ರಭಾವ ಇರುವಂಥವೂ ಕೂಡ ಉರುಳಲಿವೆ. ಮಾರುಕಟ್ಟೆಯ ಪ್ರಭಾವ ಇಲ್ಲದಿರುವುದನ್ನು ಹುಡುಕುವುದೇ ಕಷ್ಟಕರ ಎನಿಸಿದೆ ಎಂದು ಅಮೆರಿಕದ ಈ ಮಾರುಕಟ್ಟೆ ಪರಿಣಿತ ಅಭಿಪ್ರಾಯಪಟ್ಟಿದೆ.

ಚಿನ್ನ, ಬೆಳ್ಳಿಯಂಥ ಭೌತಿಕ ಆಸ್ತಿಗಳಲ್ಲಿ ಹೂಡಿಕೆ

ಅಶ್ವಥ್ ದಾಮೋದರನ್ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಹೂಡಿಕೆಯನ್ನು ಈ ಕ್ವಿಟಿಯಿಂದ ಹೊರಗೆ ಮಾಡುತ್ತಿದ್ದಾರೆ. ಕ್ಯಾಶ್‌ಗಳನ್ನು ಇರಿಸಿಕೊಳ್ಳುತ್ತಿದ್ದಾರೆ. ಚಿನ್ನ, ಬೆಳ್ಳಿ ಇತ್ಯಾದಿ ಭೌತಿಕ ಆಸ್ತಿಗಳನ್ನು ಖರೀದಿಸಲಾಗುತ್ತಿದೆ.

ಏನೋ ಕೆಟ್ಟದ್ದು ಬರುತ್ತಿದೆ ಎನ್ನುತ್ತಾರೆ ದಾಮೋದರನ್

ಅಶ್ವಥ್ ದಾಮೋದರನ್ ಪ್ರಕಾರ ಪ್ರಸ್ತುತ ಮೂಲಭೂತ ಅಂಶಗಳು ಸರಿಯಾಗಿವೆ. ಆದರೂ ಅವರಿಗೆ ಭಯ ಕಾಡುತ್ತಿದೆ.

‘ಷೇರುಗಳು ಶೇ. 15 ರಿಂದ 20ರಷ್ಟು ಏರಿದರೂ, ಮತ್ತು ಬಡ್ಡಿದರಗಳು ಸ್ಥಿರವಾಗಿದ್ದರೂ ಚಿನ್ನದ ಬೆಲೆ ಒಂದು ವರ್ಷದವರೆಗೆ ಇಷ್ಟು ಹೆಚ್ಚಾಗಿರುವುದು ಯಾಕೆ? ಈ ಸಂಖ್ಯೆಯನ್ನು ತಾನು ನಂಬುವುದಿಲ್ಲ. ಏನೋ ಕೆಟ್ಟದ್ದು ಬರುತ್ತಿದೆ’ ಎಂದು ಪೋಡ್‌ಕ್ಯಾಸ್ಟ್‌ನಲ್ಲಿ ಅಶ್ವಥ್ ದಾಮೋದರನ್ ವಿವರಿಸಿದ್ದಾರೆ.

ಇದನ್ನೂ ಓದಿ: ರಾಶಿ ರಾಶಿ ಮ್ಯೂಚುವಲ್ ಫಂಡ್‌ಗಳ ಮಧ್ಯೆ ಯಾವುದರಲ್ಲಿ ಹೂಡಿಕೆ ಮಾಡುವುದು?

ಮಾರುಕಟ್ಟೆ ಎಷ್ಟು ಬೀಳಬಹುದು?

ಅಶ್ವಥ್ ದಾಮೋದರನ್ ಪ್ರಕಾರ, ಷೇರು ಮಾರುಕಟ್ಟೆ ಎರಡು ರೀತಿಯಲ್ಲಿ ಕುಸಿಯಬಹುದು. ಒಂದು, ಅದು ಅಲ್ಪಾವಧಿಯಲ್ಲೇ ಶೇ. 30 ರಿಂದ 35ರಷ್ಟು ತೀಕ್ಷ್ಣವಾಗಿ ಕುಸಿಯಬಹುದು. ಇನ್ನೊಂದು, ಹಲವು ವರ್ಷಗಳವರೆಗೆ ನಿಧಾನವಾಗಿ ಕುಸಿಯುತ್ತಾ ಹೋಗಬಹುದು. ಇವೆರಡೂ ಕೂಡ ಘಾಸಿ ಮಾಡುವಂಥವು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *