Headlines

Brain Teaser: ನೀವು ಜಾಣರೇ, ಈ ಒಗಟಿನ ಪ್ರಶ್ನೆ ಬಿಡಿಸಿ ಉತ್ತರ ಹೇಳಿ ನೋಡೋಣ

Brain Teaser: ನೀವು ಜಾಣರೇ, ಈ ಒಗಟಿನ ಪ್ರಶ್ನೆ ಬಿಡಿಸಿ ಉತ್ತರ ಹೇಳಿ ನೋಡೋಣ


ಒಗಟುಗಳೇ (Puzzles) ಹಾಗೆ, ನೋಡಲು ಸುಲಭದಾಯಕವಾಗಿ ಕಂಡರೂ ಉತ್ತರ ಬಿಡಿಸುವುದು ಅಷ್ಟು ಸುಲಭವಲ್ಲ. ಒಂದಕ್ಕಿಂತ ಒಂದು ಕಷ್ಟಕರವಾದ ಒಗಟುಗಳು ಮೆದುಳಿಗೆ ಕಸರತ್ತು ನೀಡುತ್ತವೆ. ಆದರೆ ಇಂತಹ ಒಗಟಿಗೆ ಉತ್ತರ ಹೇಳೋದು ಎಲ್ಲರಿಗೂ ಸುಲಭವಲ್ಲ. ಸ್ವಲ್ಪ ನೀರು ಕುಡಿದಷ್ಟೇ ಸುಲಭವಾಗಿ ಉತ್ತರ ಹೇಳುತ್ತಾರೆ. ಆದರೆ ಇದೀಗ ಇಂತಹದ್ದೇ ಟ್ರಿಕ್ಕಿ ಬ್ರೈನ್ ಟೀಸರ್ (ಬ್ರೇನ್ ಟೀಸರ್) ಇಲ್ಲಿದೆ. ಈ ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಎನ್ನುವುದೇ ಪ್ರಶ್ನೆಯಾಗಿದೆ. ನೀವು ಈ ಪ್ರಶ್ನೆಯನ್ನು ಸರಿಯಾಗಿ ಓದಿ ಸರಿಯಾದ ಉತ್ತರ ಹೇಳಿ.

ಒಗಟಿನ ಪ್ರಶ್ನೆ ಹೀಗಿದೆ

ಬ್ರೈನ್ ಟೀಸರ್ ಫೋಟೋ

ಗಣಿತದ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಟ್ರಿಕ್ಕಿ ಒಗಟನ್ನು ಹಂಚಿಕೊಳ್ಳಲಾಗಿದೆ. 7 ಜನ ಪುರುಷರಿಗೆ 7 ಜನ ಮಡದಿಯರಿದ್ದಾರೆ. ಪ್ರತಿ ಪುರುಷ ಹಾಗೂ ಪ್ರತಿ ಮಹಿಳೆಗೂ 7 ಜನ ಮಕ್ಕಳಿದ್ದಾರೆ. ಹಾಗಾದರೆ ಒಟ್ಟು ಎಷ್ಟು ಜನರಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ನೀವು ನಿರ್ದಿಷ್ಟ ಉತ್ತರವನ್ನು ಹೇಳುವುದೇ ನಿಮ್ಮ ಮುಂದಿನ ಸವಾಲು.

ಇದನ್ನೂ ಓದಿ: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಹುಡುಕಿ ಜಾಣರೆನಿಸಿಕೊಳ್ಳಿ

ಒಗಟು ಬಿಡಿಸಲು ಸಾಧ್ಯವಾಯಿತೇ?

ಎಷ್ಟು ಕೆಡಿಸಿಕೊಂಡರೂ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಹೆಚ್ಚು ಚಿಂತಿಸಬೇಡಿ, ಈ ಮೇಲಿನ ಪ್ರಶ್ನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ನೀವು ಈ ಪ್ರಶ್ನೆ ಯಾವ ರೀತಿ ಅರ್ಥ ಮಾಡಿಕೊಂಡಿದ್ದೀರಿ ಎಂಬುದರ ಆಧಾರದ ಮೇಲೆ ಈ ಕೆಳಗಿನ ಎರಡು ಉತ್ತರಗಳು ಬಂದಿವೆ. ಪ್ರತಿಯೊಬ್ಬ ಪುರುಷನಿಗೆ ಒಬ್ಬ ಹೆಂಡತಿ ಇದ್ದಂತೆ ನೀವು ಅದನ್ನು ತಿಳಿದಿದ್ದರೆ, ಸರಿಯಾದ ಉತ್ತರ 63 ಜನರು. ಆದಾಗ್ಯೂ, ನೀವು ಅದನ್ನು ಪ್ರತಿ ಪುರುಷನಿಗೆ 7 ಹೆಂಡತಿಯರು ಎಂದು ಅರ್ಥೈಸಿದರೆ, ಒಟ್ಟು ಜನರು 399. ಈ ಉತ್ತರವು ಕೂಡ ನಿಮ್ಮ ತಲೆಗೆ ಹುಳ ಬಿಟ್ಟಿದೆಯೇ. ಹಾಗದ್ರೆ ಸರಿಯಾದ ಉತ್ತರ ಯಾವುದೆಂದು ನೀವು ಹೇಳಿ ನೋಡೋಣ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:42 pm, ಶುಕ್ರ, 21 ನವೆಂಬರ್ 25



Source link

Leave a Reply

Your email address will not be published. Required fields are marked *